ಫ್ರಿಜ್‌ ನಲ್ಲಿಟ್ರೂ ಹಾಲು ಹಾಳಾಗ್ತಿದ್ಯಾ? ಈ ತಪ್ಪು ಮಾಡ್ಬೇಡಿ

Published : Sep 09, 2026, 03:53 PM IST

ಹಾಲು ಹಾಳಾಗಬಾರದು ಎನ್ನುವ ಕಾರಣಕ್ಕೆ ಹಾಲನ್ನು ಕಾಯಿಸಿ ಫ್ರಿಜ್ನಲ್ಲಿ ಇಡ್ತೇವೆ. ಆದ್ರೂ ಅನೇಕ ಬಾರಿ ಹಾಲು ಹಾಳಾಗಿರುತ್ತೆ. ಫ್ರಿಜ್‌ ನಲ್ಲಿಟ್ರೂ ಹಾಲು ಹಾಳಾಯ್ತು ಅಂತ ಗೊಣಗಿಕೊಳ್ಳುವ ಮಹಿಳೆಯರಿಗೆ ಇಲ್ಲಿದೆ ಕಿವಿಮಾತಿದೆ.

PREV
14
ಕಾಯಿಸಿದ ಹಾಲನ್ನು ಹೀಗಿಡಬೇಡಿ

ಹಾಲು ಕಾಯಿಸಿದ ನಂತರ ಸಾಮಾನ್ಯವಾಗಿ ನಾವು ಅದೇ ಪಾತ್ರೆಯಲ್ಲಿ ಹಾಲನ್ನು ಇಡುತ್ತೇವೆ. ದೊಡ್ಡ ಅದೇ ಪಾತ್ರೆಯಲ್ಲಿ ಹಾಲನ್ನು ಬಹಳ ಹೊತ್ತು ಹೊರಗೆ ಇಡುವುದು ಒಳ್ಳೆಯದಲ್ಲ. ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಸಮಯ ಇದ್ದರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಅದೇ ರೀತಿ ತುಂಬಾ ಬಿಸಿಯಾಗಿರುವ ದೊಡ್ಡ ಪಾತ್ರೆಯ ಹಾಲನ್ನು ನೇರವಾಗಿ ಫ್ರಿಜ್ಗೆ ಇಟ್ಟರೆ ಫ್ರಿಜ್ನ ಒಳಗಿನ ತಾಪಮಾನವೂ ಸ್ವಲ್ಪ ಸಮಯ ಬದಲಾಗಬಹುದು.

24
ಹಾಲನ್ನು ಸರಿಯಾದ ಪಾತ್ರೆಯಲ್ಲಿ ಇಡಿ

ನೀವು ಹಾಲನ್ನು ಬಿಸಿ ಮಾಡಿದ ನಂತ್ರ ಪಾತ್ರೆ ಬದಲಿಸುವುದು ಬಹಳ ಮುಖ್ಯ. ನೀವು ಹಾಲನ್ನು ಸ್ವಚ್ಛವಾದ, ಮುಚ್ಚಳ ಚೆನ್ನಾಗಿ ಹಾಕಬಹುದಾದ ಫುಡ್-ಸೇಫ್ ಕಂಟೇನರ್ನಲ್ಲಿ ಇಡಬೇಕು. ಹಾಲು ಹೆಚ್ಚು ಇದ್ದರೆ ತುಂಬಾ ದೊಡ್ಡ, ಆಳವಾದ ಪಾತ್ರೆಯ ಬದಲು ಚಿಕ್ಕ ಪಾತ್ರೆಗಳಲ್ಲಿ ಹಂಚಿ ಇಡುವುದರಿಂದ ಬೇಗ ತಣ್ಣಗಾಗಲು ಸಹಾಯವಾಗುತ್ತದೆ. ಪಾತ್ರೆಯನ್ನು ಮುಚ್ಚಿ ಇಡುವುದರಿಂದ ಫ್ರಿಜ್ನಲ್ಲಿರುವ ಬೇರೆ ಆಹಾರಗಳ ವಾಸನೆ ಹಾಲಿಗೆ ಸೇರುವುದನ್ನೂ ತಪ್ಪಿಸಬಹುದು.

34
ಫ್ರಿಜ್ ಬಾಗಿಲಿನಲ್ಲಿ ಹಾಲು ಇಡಬೇಡಿ

ಹಾಲಿನ ಪ್ಯಾಕೆಟ್ ಅಥವಾ ಪಾತ್ರೆಯನ್ನು ಫ್ರಿಜ್ನ ಬಾಗಿಲಿನಲ್ಲೇ ಇಡುವ ಅಭ್ಯಾಸ ಹಲವರಿಗಿದೆ. ಆದರೆ ಬಾಗಿಲು ಪದೇಪದೇ ತೆರೆದು ಮುಚ್ಚುವುದರಿಂದ ಅಲ್ಲಿನ ತಾಪಮಾನ ಬದಲಾಗುತ್ತಿರುತ್ತದೆ. ಹಾಗಾಗಿ ಹಾಲನ್ನು ಫ್ರಿಜ್ನ ಒಳಗಿನ ಶೆಲ್ಫ್ನಲ್ಲಿ, ವಿಶೇಷವಾಗಿ ಹಿಂಭಾಗದ ಕಡೆ ಇಡುವುದು ಉತ್ತಮ. ಅಲ್ಲಿ ತಾಪಮಾನ ಹೆಚ್ಚು ಸ್ಥಿರವಾಗಿರುತ್ತದೆ.

44
ಹಾಲನ್ನು ಹೊರಗೆ ಹೆಚ್ಚು ಹೊತ್ತು ಇಡಬೇಡಿ

ಹಾಲು ಸಂಪೂರ್ಣ ತಣ್ಣಗಾಗಲಿ ಎಂದು ಗಂಟೆಗಟ್ಟಲೆ ಹೊರಗೆ ಇಡುವ ಅಗತ್ಯವಿಲ್ಲ. ವಿಶೇಷವಾಗಿ ಬಿಸಿಯಾದ ವಾತಾವರಣದಲ್ಲಿ ಹಾಲು ಬೇಗ ಹಾಳಾಗಬಹುದು. ಹಾಲು ಬಳಸುವಾಗ ಬೇಕಾದಷ್ಟು ಮಾತ್ರ ಹೊರಗೆ ತೆಗೆದುಕೊಳ್ಳಿ. ಉಳಿದ ಹಾಲನ್ನು ತಕ್ಷಣವೇ ಫ್ರಿಜ್ಗೆ ಹಿಂದಿರುಗಿಸಿ. ಹಾಲಿನಲ್ಲಿ ಹುಳಿ ವಾಸನೆ, ವಿಚಿತ್ರ ರುಚಿ, ಬಣ್ಣ ಅಥವಾ ಗಂಟುಗಳು ಕಂಡುಬಂದರೆ ಬಳಸದೇ ಇರುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories