ರೆಸಿಪಿ - ಮನೆಯಲ್ಲೇ ಮಾಡಬಹುದು ಹೊಟೇಲ್‌ ಸ್ಟೈಲ್‌ನ ಟೇಸ್ಟಿ ತಂದೂರಿ ಗೋಬಿ!

First Published | Feb 20, 2021, 12:17 PM IST

ಹೂಕೋಸು ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವ ತರಕಾರಿಗಳಲ್ಲಿ ಒಂದು. ಪಲ್ಯ, ಸಾಗು, ಮಂಚೂರಿ ಪರೋಠ ಹೀಗೆ ಬೇರೆ ತರದ ಅಡುಗೆಗಳನ್ನು ಹೂಕೋಸಿನಿಂದ ಮಾಡಲಾಗುತ್ತದೆ. ಈ ತರಕಾರಿಯಿಂದ ಟೇಸ್ಟಿ ತಂದೂರಿ ಪದಾರ್ಥ ಕೂಡ ಮಾಡಬಹುದು. ಇಲ್ಲಿದೆ ನೋಡಿ ತಂದೂರಿ ಗೋಬಿ ರೆಸಿಪಿ.
 
1 ಹೂಕೋಸು
2 ಕಪ್ ಮೊಸರು 
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ.
1 ಟೀಸ್ಪೂನ್ ಗರಂ ಮಸಾಲಾ 
1/2 ಟೀಸ್ಪೂನ್ ಅರಿಶಿನ ಪುಡಿ 
1 ಟೀಸ್ಪೂನ್ ಕೊತ್ತಂಬರಿ ಪುಡಿ 
1 ಟೀಸ್ಪೂನ್ ಚಾಟ್ ಮಸಾಲಾ 
1/2 ಟೀಸ್ಪೂನ್ ಸೆಲರಿ 
1 ಟೀಸ್ಪೂನ್ ಕಸೂರಿ ಮೇಥಿ 
2 ಟೀಸ್ಪೂನ್ ಕಡಲೆ ಹಿಟ್ಟು
2 ಟೀಸ್ಪೂನ್ ನಿಂಬೆ ರಸ 
1 ಟೀಸ್ಪೂನ್ ಎಣ್ಣೆ 

ತಂದೂರಿ ಗೋಬಿತಯಾರಿಸಲು, ಮೊದಲು ಪ್ಯಾನ್‌ನಲ್ಲಿ ನೀರಿಗೆ ಉಪ್ಪು ಹಾಕಿ ಇಡಿ.ಕುದಿಯಲು ಶುರು ಮಾಡಿದಾಗ ಅದಕ್ಕೆ ಹೂಕೋಸು ಹಾಕಿ.
ಇನ್ನೊಂದು ಪ್ಯಾನ್ ಬಿಸಿ ಮಾಡಿ. ಇದಕ್ಕೆ ಎರಡು ಚಮಚಕಡಲೆ ಹಿಟ್ಟನ್ನು ಮಧ್ಯಮ ಉರಿಯಲ್ಲಿಫ್ರೈ ಮಾಡಿ. ಹಿಟ್ಟು ತಳ ಹಿಡಿಯದಂತೆ ಗಮನಿಸಿ.
Tap to resize

ಈಗ ಒಂದು ಪಾತ್ರೆಯಲ್ಲಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ಅದಕ್ಕೆ ಕೆಂಪು ಮೆಣಸಿನಕಾಯಿ, ಗರಂ ಮಸಾಲ, ಅರಿಶಿನ, ಕೊತ್ತಂಬರಿ ಪುಡಿಯನ್ನು ಕೂಡ ಸೇರಿಸಿ. ಚಾಟ್ ಮಸಾಲ, ಕಸೂರಿ ಮೆಥಿ, ಉಪ್ಪು ಮತ್ತು ಹುರಿದ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.
ಬಿಸಿ ನೀರಿ ಹಾಕಿದ ಹೂಕೋಸನ್ನು ಸೋಸಿಕೊಳ್ಳಿ. ಅದನ್ನು ಮೊಸರಿನ ಮಿಶ್ರಣಕ್ಕೆ ಹಾಕಿ ಕಲೆಸಿ.ಒಂದು ಗಂಟೆ ಮ್ಯಾರಿನೇಟ್ ಮಾಡಿ.
ನಂತರ ಗೋಬಿಯನ್ನು ಟ್ರೇನಲ್ಲಿ ಹಾಕಿ. ಮೈಕ್ರೊವೇವ್‌ ಅನ್ನು 180 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಪ್ರಿಹೀಟ್‌ ಮಾಡಿಕೊಳ್ಳಿ.
ನಂತರ ಹೂಕೋಸನ್ನು 20-25 ನಿಮಿಷಗಳ ಕಾಲ ಬೇಕ್‌ ಮಾಡಿ.
ತಂದೂರಿ ಗೋಬಿ ರೆಡಿ. ಇದನ್ನು ಹಸಿರು ಚಟ್ನಿಯೊಂದಿಗೆ ಸವಿಯಿರಿ.

Latest Videos

click me!