ರೆಸಿಪಿ - ಗೊಲ್ಗಪ್ಪಗೆ ಗರಿಗರಿಯಾದ ಪೂರಿ ಮಾಡುವ ಈಸಿ ವಿಧಾನ ಇಲ್ಲಿದೆ!

First Published | Feb 19, 2021, 12:20 PM IST

ರಸ್ತೆ ಬದಿ ಸಿಗುವ ಚಾಟ್ಸ್‌‌ನಲ್ಲಿ ಎಲ್ಲರ ಫಸ್ಟ್‌ ಫೇವರೆಟ್‌ ಅಂದರೆ ಗೊಲ್ಗಪ್ಪ. ಪಾನಿಪುರಿ, ಗೊಲ್ಗಪ್ಪ, ಪುಚಕಾ ಹೀಗೆ ಹಲವು ಹೆಸರುಗಳಿಂದ ಫೇಮಸ್‌ ಈ ಚಾಟ್‌. ನಮ್ಮ ದೇಶದ ಎಲ್ಲಾ ಊರುಗಳ ಬೀದಿಗಳಲ್ಲಿ ಸಿಗುವ ಈ ಚಾಟ್‌ ಮಕ್ಕಳಿಂದ ಮುದುಕರವರೆಗೆ ಸಾಮಾನ್ಯವಾಗಿ ಎಲ್ಲರೂ ಇಷ್ಷಪಡುತ್ತಾರೆ. ಪಾನಿಪುರಿಗೆ ಬೇಕಾದ ಗರಿ ಗರಿಯಾದ ಪುರಿ ಮನೆಯಲ್ಲೇ ನೀವು ತಯಾರಿಸಲು ಬಯಸಿದಲ್ಲಿ ಇಲ್ಲಿದೆ ರೆಸಿಪಿ.

ಮೈದಾ/ಗೋಧಿ ಹಿಟ್ಟು - 1 ಕಪ್‌ 
ರವೆ - 3 ಚಮಷ
2 ಸ್ಪೂನ್‌ ಎಣ್ಣೆ 
ಉಪ್ಪು ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ 

ಪೂರಿ ತಯಾರಿಸಲು ಮೊದಲು ಒಂದು ಕಪ್‌ ಹಿಟ್ಟಿಗೆ 3 ಚಮಚ ರವೆ ಮಿಕ್ಸ್‌ ಮಾಡಿಕೊಳ್ಳಿ. ದೊಡ್ಡ ಬೌಲ್‌ಗೆ ಹಿಟ್ಟು ರವೆ ಮತ್ತು 2 ಸ್ಪೂನ್‌ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ನಂತರ ನೀರು ಸೇರಿಸಿ ಚೆನ್ನಾಗಿ ಹಿಟ್ಟನ್ನು ಕಲಸಿ.
5 ನಿಮಿಷಗಳ ಕಾಲ ಹಿಟ್ಟನ್ನು ಚೆನ್ನಾಗಿ ನಾದಿ ಕೊಳ್ಳಿ. ಪುರಿಯ ಈ ಹಿಟ್ಟು ತುಂಬಾ ಸಾಫ್ಟ್‌ ಅಥವಾ ತುಂಬಾ ಗಟ್ಟಿಯಾಗಬಾರದು ಎಂದು ನೆನಪಿಡಿ. ನಂತರ ಕಲೆಸಿದ ಹಿಟ್ಟನ್ನು ಮುಚ್ಚಿ ಬದಿ ಇಡಿ.
Tap to resize

5 ನಿಮಿಷಗಳ ನಂತರ ಸಣ್ಣ ಸಣ್ಣ ಪುರಿಗಳನ್ನು ಲಟ್ಟಿಸಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಒಲೆ ಮೇಲೆ ಕಾಯಲು ಇಡಿ. ಎಣ್ಣೆ ಚೆನ್ನಾಗಿ ಬಿಸಿಯಾದಾಗ ಲಟ್ಟಿಸಿದ ಹಿಟ್ಟನ್ನು ಹಾಕಿ.
ಉರಿಯನ್ನು ಕಡಿಮೆ ಮಾಡಿ ಎರಡು ಬದಿ ಫ್ರೈ ಮಾಡಿ. ಪುರಿಗಳು ಚೆನ್ನಾಗಿ ಉಬ್ಬಿ ಗೋಲ್ಡನ್‌ ಬಣ್ಣಕ್ಕೆ ತಿರುಗಿದಾಗ ಎಣ್ಣೆಯಿಂದ ತೆಗೆಯಿರಿ.
ಈಗ ಪಾನಿಪುರಿಗೆ ಬೇಕಾದ ಕ್ರಿಸ್ಪಿ ಪುರಿ ರೆಡಿ. ಇನ್ನೂ ನೀವು ಮನೆಯಲ್ಲೇ ಚಾಟ್‌ ತಯಾರಿಸಲು ಬಯಸಿದಲ್ಲಿ ಕೆಳಗಿನ ರೆಸಿಪಿ ಫಾಲೋ ಮಾಡಿ
ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್‌ ಮಾಡಿಕೊಳ್ಳಿ.
ಅದಕ್ಕೆ ಬೇಯಿಸದ ಕಡಲೆಕಾಳು ಸೇರಿಸಿ. ರುಚಿಗೆ ಅನುಗುಣವಾಗಿ ಇದಕ್ಕೆ ಅಮ್‌ ಚೂರ್‌ ಪೌಡರ್‌. ಖಾರದ ಪುಡಿ, ಉಪ್ಪು ಮತ್ತು ಚಾಟ್‌ ಮಸಾಲಾ ಪುಡಿ ಮಿಕ್ಸ್ ಮಾಡಿ.
ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ ಸೇರಿಸಿ.
ಮೇಲಿನ ಮಿಶ್ರಣವನ್ನು ತಯಾರಿಸಿದ ಪುರಿಯೊಳಗೆ ತುಂಬಿ ಪಾನಿಯೊಂದಿಗೆ ಸವಿಯಿರಿ.

Latest Videos

click me!