5 ನಿಮಿಷದಲ್ಲಿ ರೆಡಿಯಾಗುವ ತವಾ ಮಸಾಲಾ ಚಿಕನ್ ಫ್ರೈ ರೆಸಿಪಿ!

First Published | Sep 30, 2020, 8:06 PM IST

ಭಾರತದಲ್ಲಿ ಚಿಕನ್ ಖಾದ್ಯ ಸಖತ್‌ ಫೇಮಸ್‌. ಆದರೆ ನಿಮಗೆ ಗೊತ್ತಾ  ವಿಶ್ವದಲ್ಲಿ ಅತಿ ಕಡಿಮೆ ನಾನ್‌ ವೆಜ್‌ ತಿನ್ನುವುದು ಭಾರತದಲ್ಲಿ ಮಾತ್ರ. ಕೆಎಫ್‌ಸಿ ಚಿಕನ್ ಕೂಡ ಭಾರತದಲ್ಲಿ ಸಾಕಷ್ಟು ಜನಪ್ರಿಯ. ಅದನ್ನು ಮೀರಿಸುವ ಚಿಕನ್‌ ರೆಸಿಪಿ ಇಲ್ಲಿದೆ. ಕಬ್ಬಿಣದ ಪ್ಯಾನ್ ಮೇಲೆ ಈ ಚಿಕನ್‌ ಡಿಶ್‌ ಅನ್ನು ಸುಭವಾಗಿ ಮನೆಯಲ್ಲೇ ತಯಾರಿಸಬಹುದು ಹಾಗೂ ಬೇಕಾದ ಎಲ್ಲಾ ಮಸಾಲೆಗಳು ನಿಮ್ಮ ಅಡುಗೆಮನೆಯಲ್ಲಿ ಇರುತ್ತವೆ. ಇಲ್ಲಿದೆ ನೋಡಿ ತವಾ ಮಸಾಲಾ ಚಿಕನ್ ಫ್ರೈ ರೆಸಿಪಿ.
ಕಬಿಣ್ಣದ ತವಾ 
1 ಕೆಜಿ ಚಿಕನ್ 
ಶುಂಠಿ-ಬೆಳ್ಳುಳ್ಳಿ  ಪೇಸ್ಟ್‌ 
ಅರಿಶಿನ, 
ಮೆಣಸಿನಕಾಯಿ, 
ಕೊತ್ತಂಬರಿ ಪುಡಿ,
ಜೀರಿಗೆ ಪುಡಿ
2 ಟೊಮ್ಯಾಟೊ, 
1 ಈರುಳ್ಳಿ 
ಗರಂ ಮಸಾಲ ಪುಡಿ

ಮೊದಲು ಕಬ್ಬಿಣ ಪ್ಯಾನ್ ಮೇಲೆ ನಾಲ್ಕು ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
ಈಗ ಚಿಕನ್ ಹಾಕಿ ಈ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
Tap to resize

5 ನಿಮಿಷ ದೊಡ್ಡ ಉರಿಯಲ್ಲಿ ಫ್ರೈ ಮಾಡಿದ ನಂತರ, ಚಮಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು.
ನಂತರ, ಚಿಕನ್‌ಗೆ ಎರಡು ಕತ್ತರಿಸಿದ ಟೊಮ್ಯಾಟೊ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವ ಹಾಗೆ ಚೆನ್ನಾಗಿ ಫ್ರೈ ಮಾಡಿ.
ಈಗ ಮಸಾಲೆಗಳನ್ನು ಆ್ಯಡ್ಮಾಡಬೇಕು. ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ ಜೀರಿಗೆ ಪುಡಿ ಮಿಕ್ಸ್‌ ಮಾಡಿ. ಮಸಾಲೆಗಳು ಸುಡದಿರಲು ಒಲೆಯ ಉರಿ ಕಡಿಮೆ ಇರಲಿ .
ಸ್ವಲ್ಪ ಸಮಯದ ನಂತರ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ನೀರು ಸೇರಿಸಿ ತವಾವನ್ನು ಮುಚ್ಚಿ.
15 ನಿಮಿಷಗಳ ನಂತರ ಮುಚ್ಚಳ ತೆಗೆದು ಇದಕ್ಕೆ ಗರಂ ಮಸಾಲಾ ಒಂದು ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ
ಇದಕ್ಕೆ ಒಂದು ನಿಂಬೆ ರಸವನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಪುನಃ ಮುಚ್ಚಳ ಮುಚ್ಚಿಡಿ. 5 ನಿಮಿಷಗಳ ನಂತರ ಚಿಕನ್‌ ಅನ್ನು ಕೈಯಾಡಿಸಿ.
ಗ್ಯಾಸ್‌ ಬಂದ್‌ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ. ತವಾ ಸ್ಟೈಲ್ ಚಿಕನ್ ಫ್ರೈ ರೆಡಿ.

Latest Videos

click me!