ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕ್ಕೊಂಡು ತಿನ್ನುತ್ತಿದ್ದರೆ ಆಹಾ ಅದರ ರುಚಿಗೆ ಸಾಟಿನೇ ಇಲ್ಲ. ಮನೆಯಲ್ಲೇ ಮಾಡಿದ ಶುದ್ಧ ತುಪ್ಪವಾದರಂತೂ ಅದರ ಘಮವೇ ಬೇರೆ. ಆದರೆ ಮನೆಯಲ್ಲಿ ತುಪ್ಪ ಮಾಡುವುದು ತುಂಬಾ ರೇಜಿಗೆಯ ಕೆಲಸ ಅನ್ನುವುದು ಹೆಚ್ಚಿನವರ ಅಭಿಪ್ರಾಯ. ಇಲ್ಲಿದೆ ನೋಡಿ ತುಪ್ಪ ಮಾಡುವ ಒಂದು ವಿಧಾನ. ಕಡಿಮೆ ಕೆನೆಯಲ್ಲಿ ಸುಲಭವಾಗಿ ಮನೆಯಲ್ಲೇ ಶುದ್ಧ ತುಪ್ಪ ತಯಾರಿಸಬಹುದು. 4-5 ದಿನಗಳ ಕೆನೆ ಹಾಗೂ ಒಂದು ಚಮಚ ಮೊಸರು ಅಷ್ಟೇ ತುಪ್ಪ ಮಾಡಲು ಬೇಕಾಗಿರುವುದು.