ಮೈದಾ ಹಿಟ್ಟು ಆರೋಗ್ಯಕ್ಕೆ ಮಾರಕ ಎನ್ನುತ್ತಾರೆ, ಹೌದೋ, ಅಲ್ಲವೋ?

First Published Sep 12, 2020, 5:40 PM IST

ಆರೋಗ್ಯ ಮೈದಾ ಒಳ್ಳೆಯದಲ್ಲ ಎಂದು ಹೇಳಲಾಗಿದ್ದರೂ, ಸಮೋಸಾಗಳು- ಕಚೋರಿಯಿಂದ ಹಿಡಿದು ಅನೇಕ ರೋಡ್‌ ಸೈಡ್‌ ಆಹಾರಗಳು, ಬೇಕರಿ ಮತ್ತು ಸಿಹಿ ತಿಂಡಿಗಳಲ್ಲಿ ಮೈದಾ ಬಳಕೆ ಕಾಮನ್. ಈ ತಿಂಡಿಗಳ ರುಚಿಯನ್ನು ಹೆಚ್ಚಿಸುವುದು ಕೂಡ ಮೈದಾನೇ. ಈ ಸಂಸ್ಕರಿಸಿದ ಹಿಟ್ಟನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆಗೆ ಕೂಡ ತೊಂದರೆ. ತೂಕ ಇಳಿಸಿಕೊಳ್ಳಲು ಬಯಸುವವರು ಈ ಹಿಟ್ಟಿನಿಂದ ತಯಾರಿಸಿದ ವಸ್ತುಗಳನ್ನು ತಿನ್ನುವುದಿಲ್ಲ. ಆದರೆ ಮೈದಾ ಆರೋಗ್ಯಕ್ಕೆ ಒಳ್ಳೆಯದು ಎಂಬುವುದು ಗೊತ್ತಾ? ಹೌದು, ಅದರ ಬಗ್ಗೆ ವಿವರ ಇಲ್ಲಿದೆ.
 

ಮೊದಲನೆಯದಾಗಿ, ಈ ಆಲ್‌ ಪರ್ಪಸ್‌ ಹಿಟ್ಟು ಗೋಧಿಯಿಂದ ತಯಾರಿಸಲ್ಪಟ್ಟಿದೆ.
undefined
ಗೋಧಿಯನ್ನು ಪರಿಷ್ಕರಿಸಿ, ಅದರ ಹೊಟ್ಟು ತೆಗೆದು ಮೈದಾ ತಯಾರಿಸಲಾಗುತ್ತದೆ,ಫೈಬರ್ ತೆಗೆದುಹಾಕಿದ ನಂತರಅದನ್ನು benzoyl peroxide ಬ್ಲೀಚ್‌ ಮಾಡಿದರಿಂದ ಬಿಳಿ ಬಣ್ಣ ನೀಡುತ್ತದೆ.
undefined
ಮೈದಾ ಹಿಟ್ಟು ಪ್ರತಿದಿನ ಸೇವಿಸುವುದು ಹಾನಿಕಾರಕ. ಹಿಟ್ಟುತುಂಬಾ ನೈಸಾಗಿರುವುದರಿಂದ ಹೊಟ್ಟೆಯಲ್ಲಿ ಅಂಟಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಹಿಟ್ಟು ಅನೇಕ ರೋಗಗಳಿಗೆ ಕಾರಣವಾಗಬಹುದು.
undefined
ಆದರೆ ಕಡಿಮೆ ಪ್ರಮಾಣದಲ್ಲಿ ಮೈದಾವನ್ನು ಬಳಸಿದರೆ, ಈ ಹಾನಿಗಳನ್ನು ತಪ್ಪಿಸಬಹುದು. ಸಂಸ್ಕರಿಸಿದ ಹಿಟ್ಟನ್ನು ಸೇವಿಸಿದ ನಂತರವೂ ದೇಹಕ್ಕೆ ಆಗುವ ತೊಂದರೆಗಳನ್ನು ತಡೆಗಟ್ಟಲು ಕೆಲವು ಟಿಪ್ಸ್‌ಗಳಿವೆ.
undefined
ಮೈದಾ ಹಿಟ್ಟು ಹೆಚ್ಚಿನ ಹಾನಿಯನ್ನುಂಟುಮಾಡಲು ಕಾರಣ ಅದರಿಂದ ತಯಾರಿಸಿದ ಹೆಚ್ಚಿನ ವಸ್ತುಗಳು ಡೀಪ್ ಫ್ರೈ ಆಗಿರುತ್ತವೆ.
undefined
ಎಣ್ಣೆಯಲ್ಲಿ ಕರಿಯುವ ಬದಲು, ಏರ್ ಫ್ರೈ, ಸ್ಟೀಮ್ ಅಥವಾ ಕುದಿಸಿದರೆ ಈ ಹಿಟ್ಟು ಯಾವುದೇ ಹಾನಿ ಮಾಡುವುದಿಲ್ಲ.
undefined
ಉದಾಹರಣೆಗೆ, ಫ್ರೈಡ್‌ ಮೊಮೊಗಳಿಗಿಂತ ಸ್ಟೀಮ್ಡ್‌ ಮೊಮೊಗಳು ಬೆಸ್ಟ್‌.
undefined
ಮೈದಾದಿಂದ ತಿಂಡಿಯಾರಿಸಿದಾಗಲೆಲ್ಲಾ, ಹೆಚ್ಚಿನ ಫೈಬರ್ ಹೊಂದಿರುವ ಹಿಟ್ಟನ್ನು ಗೋಧಿ, ರವೆ, ರಾಗಿ, ಜೋಳವನ್ನು ಹಿಟ್ಟಿನೊಂದಿಗೆ ಬೆರೆಸಬಹುದು.
undefined
ಸಮೋಸಾ ಅಥವಾ ಕಚೋರಿಸ್ ತಯಾರಿಸುವಾಗ, ನೀವು ಬೇರೆ ಯಾವುದೇ ಫೈಬರ್ ಭರಿತ ಹಿಟ್ಟನ್ನು ಮೈದಾ ಹಿಟ್ಟಿಗೆ ಸೇರಿಸಿದರೆ ಹಾನಿಯಾಗುವುದಿಲ್ಲ.
undefined
ಕೇಕ್, ಬಿಸ್ಕತ್ತು ಮತ್ತು ಕುಕಿಯನ್ನು ಮನೆಯಲ್ಲಿ ತಯಾರಿಸುವಾಗ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದು ಉತ್ತಮ. ಮೈದಾ ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನುವುದು ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
undefined
ಅಲ್ಲದೆ, ಕೇಕ್ ಅಥವಾ ಬಿಸ್ಕತ್ತುಗಳನ್ನು ತಯಾರಿಸುವಾಗ, ಮೈದಾದೊಂದಿಗೆ ಸಮಾನ ಪ್ರಮಾಣದ ಬೇರೆ ಹಿಟ್ಟನ್ನು ತಯಾರಿಸಿ. ಓಟ್ಸ್ ಬೆರೆಸುವ ಮೂಲಕ ಉತ್ತಮ ಓಟ್ಸ್ ಕೇಕ್ ತಯಾರಿಸಬಹುದು.
undefined
ಆಹಾರದಲ್ಲಿ ಸಮತೋಲನವನ್ನು ಹೊಂದಿರುವುದು ಬಹಳ ಮುಖ್ಯ.ಒಂದು ಊಟ ಹೇವಿ ಆದರೆ, ಇನ್ನೊಂದು ಊಟ ಲೈಟ್‌ ಆಗಿರುವಂತೆ ಗಮನದಲ್ಲಿರಿಸಿ. ಉದಾಹರಣೆಗೆ ಹೆಚ್ಚಿನ ಜನರು ಭಾನುವಾರ ಫಾಸ್ಟ್‌ ಫುಡ್‌ ತಿನ್ನುತ್ತಾರೆ, ಆದ್ದರಿಂದ ಸೋಮವಾರ ಬೆಳಿಗ್ಗೆಸ್ವಲ್ಪ ಹಗುರವಾದ ಆಹಾರಮತ್ತು ಅದರೊಂದಿಗೆ ಹಣ್ಣುಗಳನ್ನು ತಿನ್ನಬೇಕು.
undefined
click me!