ಆನೆ ಲದ್ದಿ ಕಾಫೀ ಬಗ್ಗೆ ಕೇಳಿದ್ರಾ..? ಸಿಕ್ಕಾಪಟ್ಟೆ ಕಾಸ್ಟ್ಲಿಇದು

First Published Sep 11, 2020, 7:42 PM IST

ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆನೆ ಲದ್ದಿ ಟೀ ಕುಡಿದು ಭಾರೀ ಸುದ್ದಿ ಮಾಡಿದ್ದರು. ಇದು ಸಿಕ್ಕಾ ಪಟ್ಟೆ ಕಾಸ್ಲ್ಟಿ ಅಂತೆ. ಇದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಇತ್ತೀಚೆಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆನೆ ಲದ್ದಿ ಟೀ ಕುಡಿದು ಭಾರೀ ಸುದ್ದಿ ಮಾಡಿದ್ದರು.
undefined
ಬೇರ್ ಗ್ರಿಲ್ಸ್ ಜೊತೆ ಇಂಟು ದಿ ವೈಲ್ಡ್ ಎಪಿಸೋಡ್‌ಗಾಗಿ ಶೂಟ್ ಮಾಡಿದ ಸಂದರ್ಭ ಆನೆ ಲದ್ದಿ ಟೀ ಕುಡಿದಿದ್ದಾರೆ.
undefined
ಅಂದ ಹಾಗೆ ಇದು ಸಿಕ್ಕಾ ಪಟ್ಟೆ ಕಾಸ್ಲ್ಟಿ ಅಂತೆ. ಇದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
undefined
ಆನೆ ಲದ್ದಿ ಟೀ ಮಾಡೋದು ಹೇಗೆ ಅಂತ ವಿಡಿಯೋದಲ್ಲಿ ತೋರಿಸುವುದಿಲ್ಲ.
undefined
ವೇಸ್ಟ್ ಆಗೋ ಆನೆ ಲದ್ದಿಯಿಂದ ತಯಾರಿಸೋ ಕಾಫಿ ಅಥವಾ ಟೀಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
undefined
ಈ ಲದ್ದಿಯಿಂದಲೇ ಹೈಬ್ರೀಡ್ ಕಾಫಿ ಅಥವಾ ಟೀ ತಯಾರಿಸಲಾಗುತ್ತದೆ.
undefined
ಆನೆ ಲದ್ದಿ ಕಾಫಿ ಅಥವಾ ಟೀ ಬಗ್ಗೆ ನೀವರಿಯದ ವಿಚಾರಗಳು ಇಲ್ಲಿವೆ. ಕೇಳಿದ್ರೆ ಅಬ್ಬಾ ಅನ್ಸುತ್ತೆ. ಅಂದ ಹಾಗೆ ಇದು ತುಂಬಾ ಟೇಸ್ಟಿ.!
undefined
ಆನೆ ಲದ್ದಿಯಿಂದ ಟೀ, ಕಾಫಿ ಮಾಡೋ ಐಡಿಯಾ ಹುಟ್ಟುಕೊಂಡಿದ್ದು ಥಾಯ್‌ಲೆಂಡ್‌ನಲ್ಲಿ.
undefined
ಇದಕ್ಕಾಗಿ ಆನೆಗಳಿಗೆ ಅವುಗಳ ಮಾಮೂಲು ಆಹಾರದಲ್ಲಿ ಥಾಯ್ ಅರೆಬಿಕಾ ಚೆರಿಯನ್ನು ಮೊದಲು ತಿನ್ನಿಸಲಾಗುತ್ತದೆ.
undefined
ಇವು ಸಸ್ಯಹಾರಿ ಪ್ರಾಣಿಗಳಾಗಿದ್ದು ತಮ್ಮ ಆಹಾರದಲ್ಲಿರುವ ಸೆಲ್ಯುಲೋಸ್ ಒಡೆಯಲು ಅವು ಬಳಸುವ ಪ್ರಕ್ರಿಯೆಯು ತ್ಯಾಜ್ಯದಲ್ಲಿ ಸಿಹಿ, ಹಣ್ಣಿನ ಸುವಾಸನೆಯನ್ನು ಹೊರತರುತ್ತದೆ.
undefined
ಈ ಮೂಲಕ ಕಾಫಿಗೆ ಚಾಕಲೇಟ್, ಚೆರಿ ಟೇಸ್ಟ್ ಸಿಗುತ್ತದೆ.
undefined
ಆನೆ ಚೆರಿಯನ್ನು ವಿಸರ್ಜಿಸಿದಾಗ ಅದನ್ನು ಹೆಕ್ಕಿ ಸಂಗ್ರಹಿಸಲಾಗುತ್ತದೆ. ಅವುಗಳನ್ನು ತೊಳೆದು ಒಣಗಿಸಲಾಗುತ್ತದೆ.
undefined
ಅವುಗಳನ್ನು ಯಂತ್ರದ ಸಹಾಯದಿಂದ ಪ್ರತ್ಯೇಕಿಸಿ ಅಂತಿಮವಾಗಿ ಹುರಿಯಲಾಗುತ್ತದೆ.ಈ ಕಾಫಿ ಬ್ಲಾಕ್ ಐವರಿ ಕಾಫಿ ಎಂದೇ ಫೇಮಸ್.
undefined
ಇದನ್ನು ಮೊದಲು ತಯಾರಿಸಿದ್ದು, ಆನೆಗಳ ನಿರಾಶ್ರಿತ ಕೇಂದ್ರ ಚಿಯಾಂಗ್ ಸಯೇನ್‌ನ ಗೋಲ್ಡನ್ ಟ್ರಿಯಾಂಗಲ್ ಏಷ್ಯನ್ ಎಲಿಫೆಂಟ್ ಫೌಂಡೇಶನ್‌ ಹೆಸರಿನ ಕಂಪನಿಯಲ್ಲಿ.
undefined
ಇದು ಜಗತ್ತಿನ ಅಪರೂಪದ ಮತ್ತು ದುಬಾರಿ ಕಾಫಿಗಳಲ್ಲಿ ಒಂದು. ಮುಖ್ಯವಾಗಿ ಫೈಸ್ಟಾರ್ ಹೋಟೆಲ್‌ಗಳಲ್ಲಿಯೇ ಇದನ್ನು ಮಾರಲಾಗುತ್ತದೆ.
undefined
ಒಂದು ಕೆಜಿ ಕಾಫಿ ತಯಾರಿಸಲು ಬರೋಬ್ಬರಿ 33 ಕೆಜಿ ಕಾಫಿ ಚೆರಿಗಳು ಬೇಕಾಗುತ್ತೆ.
undefined
35 ಗ್ರಾಂನಷ್ಟು ಬ್ಲಾಕ್ ಐವರಿ ಕಾಫಿ ಬೆಲೆ 100 ಅಮೆರಿಕನ್ ಡಾಲರ್. ಅಂದರೆ ಬರೋಬ್ಬರಿ 7,357 ರೂಪಾಯಿ
undefined
click me!