ರುಚಿಕರವಾದ ಆಹಾರ ತಯಾರಿಸುವುದು ಒಂದು ಕಲೆ. ಆಹಾರದ ಸ್ವಾದ ಹೆಚ್ಚಿಸಲು ಮಸಾಲೆಗಳು, ಹಸಿರು ಸೊಪ್ಪುಗಳೂ ಹೇಗೆ ಸಹಕಾರಿಯೋ ಹಾಗೆಯೇ ಮದ್ಯವೂ ಅಡುಗೆಯ ರುಚಿ ಹೆಚ್ಚಿಸಬಲ್ಲದು.
ಆಹಾರ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸುವಲ್ಲಿ ಆಲ್ಕೋಹಾಲ್ ಪ್ರಮುಖ ಪಾತ್ರ ವಹಿಸುತ್ತದೆ.
ಆಲ್ಕೋಹಾಲ್ ಮಾಂಸವನ್ನು ಮೃದುಗೊಳಿಸುವುದರ ಜೊತೆಗೆ ಅದ್ಭುತ ರುಚಿಯನ್ನೂ ಕೊಡುತ್ತದೆ.
ಕೊಬ್ಬು ಮತ್ತು ನೀರಿನ ಅಣುಗಳೊಂದಿಗೆ ಸೇರುವ ಆಲ್ಕೋಹಾಲ್ ಸುವಾಸನೆ ಹೆಚ್ಚಿಸುತ್ತದೆ.
ಆಹಾರವನ್ನು ಬೇಯಿಸಲು ವೈನ್ ಮತ್ತು ಬಿಯರ್ ಸಾಮಾನ್ಯವಾಗಿ ಬಳಸುತ್ತಾರೆ. ರುಚಿಕರವಾದ ಭಕ್ಷ್ಯಗಳನ್ನು ಬೇಯಿಸಲು ಇನ್ನೂ ಅನೇಕ ಮದ್ಯಗಳಿವೆ. ಅವು ಯಾವುದೆಲ್ಲ..? ಇಲ್ಲಿದೆ ಮಾಹಿತಿ
ಡ್ರೈ ವೈಟ್ ವೈನ್: ಮದ್ಯ ಬಳಸಿಕೊಂಡಯ ಅಡುಗೆ ಮಾಡುವಾಗ ಮೊದಲು ನೆನಪಾಗೋ ಹೆಸರು ವೈಟ್ ವೈನ್. ಇದರಲ್ಲಿ ಅಸಿಡಿಕ್ ಅಂಶ ಜಾಸ್ತಿ ಇದೆ. ಇದು ಆಹಾರಕ್ಕೆ ಹೆಚ್ಚಿನ ರುಚಿ ಒದಗಿಸುತ್ತದೆ.
ಇದು ಶಾಖಾಹಾರ ಖಾದ್ಯಗಳಿಗೆ ಬೆಸ್ಟ್. ಮೀನು, ಕೋಳಿ ಮಾಂಸದ ಅಡುಗೆಗೆ ಇದನ್ನು ಬಳಸಿಕೊಳ್ಳಬಹುದು.
ರೆಡ್ ವೈನ್: ವೈಟ್ ವೈನ್ ಮನೆಯಲ್ಲಿರದಿದ್ದರೆ ನೀವೂ ರೆಡ್ ವೈನ್ ಅಡುಗೆಗೆ ಬಳಸಬಹುದು. ರೆಡ್ ವೈನ್‌ನಲ್ಲಿ ಪಿನೋಟ್ ನೋಯಿರ್ ಹಾಗೂ ಕಾಬರ್‌ನೆಟ್ ಬೆಸ್ಟ್ ಚಾಯ್ಸ್.
ಇದು ಪೋರ್ಕ್‌ನಂತಹ ರೆಡ್ ಮೀಟ್ ಅಡುಗೆಗೆ ಬಳಸಲಾಗುತ್ತದೆ. ಇದನ್ನು ಹೆಚ್ಚಾಗಿ ಸಾಸ್ ಹಾಗೂ ಟಾಪಿಂಗ್‌ಗಾಗಿ ಬಳಸಲಾಗುತ್ತದೆ.
ರಮ್: ರಮ್ ಸ್ವೀಟ್ ಡಿಶ್‌ಗಳಿಗೆ ಸೂಕ್ತ. ಡಾರ್ಕ್ ಅಥವಾ ಸ್ಪೈಸ್ ರಮ್ ಬಳಸುವುದು ಸೂಕ್ತ.
ವೈಟ್ ರಮ್ ಆಯ್ಕೆ ಮಾಡಬಹುದು. ರೆಡ್ ಮೀಟ್‌ಗೆ ಸರಿಯಾದ ಫ್ಲೇವರ್ ಸಿಗಲು ರಮ್ ಬಳಸಲಾಗುತ್ತದೆ.
ವೋಡ್ಕಾ: ವೋಡ್ಕಾ ಎಣ್ಣೆಯಂಶ ಹಾಗೂ ನೀರನ್ನು ಸುಲಭವಾಗಿ ಹಿಡಿದಿಡುತ್ತದೆ. ವೋಡ್ಕಾ ಖಾದ್ಯದ ರುಚಿಯಲ್ಲಿ ದೊಡ್ಡ ಬದಲಾವಣೆ ತರುವುದಿಲ್ಲ ಆದರೆ ಅದ್ಭುತವಾದ ಪರಿಮಳವನ್ನು ಕೊಡುತ್ತದೆ.
ಇದನ್ನು ಬೇಯಿಸಿದ ಆಹಾರ ಪದಾರ್ಥಗಳಿಗೆ ಬಳಸಬಹುದು. ವೊಡ್ಕಾ ಆಹಾರದಲ್ಲಿರುವ ಅಂಟು ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ. ಕೊನೆಗೆ ಆವಿಯಾಗುತ್ತದೆ. ಇದು ಆಹಾರದಲ್ಲಿ ಪರಿಮಳವನ್ನು ಸೇರಿಸುವುದಿಲ್ಲ.
ವಿಸ್ಕಿ: ಆಹಾರಕ್ಕೆ ಉಪ್ಪು ಹೇಗೆ ರುಚಿ ಸೇರಿಸುತ್ತದೋ, ವಿಸ್ಕಿಯೂ ಇದೇ ರೀತಿ ಕೆಲಸ ಮಾಡುತ್ತದೆ. ಇದನ್ನು ಬಳಸುವುದು ಕಡಿಮೆ. ಆದರೆ ಬಳಸಿದಾಗ ಮಾತ್ರ ವಾವ್ ಎನಿಸುವ ರುಚಿ ಸಿಗುತ್ತದೆ.
ವಿಸ್ಕಿ ಯಾವುದೇ ಆಹಾರಕ್ಕ ಬೆರೆಸಿದಾಗ ಅದು ಉಪ್ಪು ಬೆರೆಯುವಂತೆಯೇ ಬೇಗನೆ ಬೆರೆಯುತ್ತದೆ.
ಬಿಯರ್: ಸೂಪ್ ಸೇರಿ ಹಲವು ಆಹಾರಕ್ಕೆ ಬಿಯರ್ ಹೆಚ್ಚಿನ ರುಚಿ ನೀಡುತ್ತದೆ. ಯಾವುದೇ ಬೇಯಿಸಿದ ಆಹಾರಕ್ಕೆ ಸೇರಿಸಿದರೂ ಭಿನ್ನ ರುಚಿ ಸಿಗುತ್ತದೆ.