ಅಯ್ಯೋ ತೂಕ ಇಳಿಯೋಲ್ಲ ಅಂತ ಗೊಣಗೋದು ಬಿಡಿ, ದಕ್ಷಿಣ ಭಾರತೀಯ ಡಯಟ್ ಮಾಡಿ!

Published : Nov 22, 2023, 11:20 AM IST

ಪ್ರತಿಯೊಬ್ಬರೂ ದಕ್ಷಿಣ ಭಾರತದ ಊಟ ಇಷ್ಟಪಡ್ತಾರೆ. ಮಸಾಲೆಯುಕ್ತ ಮತ್ತು ಗಾಢವಾದ ರಸಂ, ಸ್ಪಾಂಜಿ ಇಡ್ಲಿಗಳು ಮತ್ತು ಗರಿಗರಿಯಾದ ದೋಸೆಗಳು ಹೊಟ್ಟೆ ಮತ್ತು ಹೃದಯ ಎರಡನ್ನೂ ತುಂಬುತ್ತವೆ. ಈ ಆಹಾರಗಳನ್ನು ತಿನ್ನಲು ಖುಷಿಯಾಗುತ್ತೆ ಮತ್ತು ಜೊತೆಗೆ ಇವು ಆರೋಗ್ಯಕರ ಮತ್ತು ಪೌಷ್ಟಿಕವಾಗಿವೆ. ಇದರಿಂದ ತೂಕವನ್ನು ಇಳಿಸಬಹುದು ಗೊತ್ತಾ?   

PREV
18
ಅಯ್ಯೋ  ತೂಕ ಇಳಿಯೋಲ್ಲ ಅಂತ ಗೊಣಗೋದು ಬಿಡಿ, ದಕ್ಷಿಣ ಭಾರತೀಯ ಡಯಟ್ ಮಾಡಿ!

ದಕ್ಷಿಣ ಭಾರತದ ಆಹಾರಗಳು (South Indian Food) ಸಾಮಾನ್ಯವಾಗಿ ತರಕಾರಿಗಳು, ಅಕ್ಕಿ ಮತ್ತು ಸಿರಿಧಾನ್ಯಗಳಿಂದ ತುಂಬಿರುತ್ತವೆ;ಇದರಿಂದಾಗಿಯೇ ಇಲ್ಲಿನ ಆಹಾರ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುತ್ತೆ ಮತ್ತು ಆರೋಗ್ಯಕರ ಕ್ಯಾಲೊರಿ ಅವಶ್ಯಕತೆಗಳನ್ನು ಪೂರೈಸುತ್ತದೆ. ನೀವು ತೂಕ ಇಳಿಸಲು ಬಯಸಿದ್ರೆ ದಕ್ಷಿಣ ಭಾರತದ ಆಹಾರ ಸೇವಿಸಬಹುದು. ರುಚಿಗಳಲ್ಲಿ ರಾಜಿ ಮಾಡಿಕೊಳ್ಳದೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ದಕ್ಷಿಣ ಭಾರತದ ಈ ಆಹಾರಗಳನ್ನು ನೀವು ತಿಂದ್ರೆ ತೂಕ ಇಳಿಯೋದು ಖಚಿತ. ಏಳು ದಿನಕ್ಕೆ ಏಳು ಆಹಾರಗಳು ಇಲ್ಲಿವೆ. ನೀವು ಟ್ರೈ ಮಾಡಿ ನೋಡಿ. 
 

28

ದಿನ 1
ಬೆಳಗಿನ ಉಪಾಹಾರಕ್ಕೆ, ಒಂದು ದೊಡ್ಡ ತಟ್ಟೆ ಸಾಂಬಾರ್ ಮತ್ತು ಒಂದು ಚಮಚ ಚಟ್ನಿಯೊಂದಿಗೆ 2-4 ಇಡ್ಲಿಗಳನ್ನು (Idli Sambar) ಸೇವಿಸಿ. ಮಧ್ಯಾಹ್ನದ ಊಟಕ್ಕೆ, ನಿಮ್ಮ ತಟ್ಟೆಗೆ ಸ್ವಲ್ಪ ಬ್ರೌನ್ ರೈಸ್, ಮಿಶ್ರ ತರಕಾರಿ ಪಲ್ಯ ಸೇರಿಸಿ (ಕ್ಯಾರೆಟ್, ಬೀನ್ಸ್, ಬಟಾಣಿ ಸೇರಿಸಿ). ಸಂಜೆ ನಿಮಗೆ ಹಸಿವಾಗಿದ್ದರೆ, ಸ್ವಲ್ಪ ಹುರಿದ ಕಡಲೆ ಅಥವಾ ನೆಲಗಡಲೆ ತಿನ್ನಿ. ರಾತ್ರಿ ಊಟಕ್ಕೆ, ಪುದೀನಾ ಚಟ್ನಿ ಜೊತೆ ದೋಸೆ ತಿನ್ನಿ.

38

ದಿನ 2
ಎರಡನೇ ದಿನದ ಉಪಾಹಾರಕ್ಕಾಗಿ, ತೆಂಗಿನಕಾಯಿ ಚಟ್ನಿಯೊಂದಿಗೆ ಒಂದು ದೊಡ್ಡ ಬಟ್ಟಲು ತರಕಾರಿ ಉಪ್ಮಾ (vegetable upma) ಸೇವಿಸಿ. ನಂತರ ಮಧ್ಯಾಹ್ನದ ಊಟಕ್ಕೆ, ಒಂದು ತಟ್ಟೆ ಕ್ವಿನೋವಾ ಪುಲಾವ್ ಮತ್ತು ಮಿಶ್ರ ತರಕಾರಿ ಸಲಾಡ್ ಸೇವಿಸಿ. ನಂತರ ಸಂಜೆ ನಿಮಗೆ ಹಸಿವಾಗಿದ್ದರೆ, ಒಂದು ಬಟ್ಟಲು ಫ್ರೂಟ್ ಸಲಾಡ್ ತಿನ್ನಿ ಮತ್ತು ಅದರಲ್ಲಿ ನೀರು ಆಧಾರಿತ ಹಣ್ಣುಗಳಿರಲಿ. ರಾತ್ರಿ ಊಟಕ್ಕೆ, ರಾಯಿತಾದೊಂದಿಗೆ ವೆಜ್ ಬಿರಿಯಾನಿ ತಿನ್ನಿ.

48

ದಿನ 3 
3 ನೇ ದಿನ, ಬೆಳಗಿನ ಉಪಾಹಾರಕ್ಕಾಗಿ ತರಕಾರಿ ಪೋಹಾವನ್ನು (Vegetable Poha) ಸೇವಿಸಿ ಮತ್ತು ಸುಮಾರು 15-20 ಗ್ರಾಂ ನಮ್ಕೀನ್ ಸೇವಿಸಿ. ನಂತರ ಮಧ್ಯಾಹ್ನದ ಊಟಕ್ಕೆ, ಪಾಲಕ್ ದಾಲ್ ಮತ್ತು ಮಾವಿನ ಉಪ್ಪಿನಕಾಯಿಯೊಂದಿಗೆ ಸ್ವಲ್ಪ ಬ್ರೌನ್ ರೈಸ್ (Brown Rice) ಸೇವಿಸಿ. ಸಂಜೆಯ ತಿಂಡಿಗಾಗಿ, ನಿಮ್ಮ ಚಯಾಪಚಯ ಕ್ರಿಯೆ ಸರಿಯಾಗಿರಿಸಲು ಗ್ರೀನ್ ಟೀಯೊಂದಿಗೆ ಸ್ವಲ್ಪ ಕುರುಕಲು ತಿಂಡಿ ಸೇವಿಸಬಹುದು ಮತ್ತು ನಂತರ ರಾತ್ರಿ ಊಟದ ಸಮಯದಲ್ಲಿ, ತೆಂಗಿನಕಾಯಿ ಚಟ್ನಿಯೊಂದಿಗೆ 2 ರಾಗಿ ದೋಸೆಗಳನ್ನು ಮಾಡಿ ತಿನ್ನಿ.

58

ದಿನ 4 
4 ನೇ ದಿನದ ಉಪಾಹಾರಕ್ಕಾಗಿ, ಟೊಮೆಟೊ ಚಟ್ನಿ ಮತ್ತು ಸ್ವಲ್ಪ ಮಜ್ಜಿಗೆಯೊಂದಿಗೆ ರಾಗಿ ದೋಸೆ ಸೇವಿಸಿ. ಮಧ್ಯಾಹ್ನದ ಊಟಕ್ಕೆ, ಮಿಕ್ಸ್ಡ್ ವೆಜಿಟೇಬಲ್ ಕ್ವಿನೋವೋ ತಿನ್ನಿ. ಸಂಜೆಯ ತಿಂಡಿಗಾಗಿ, ಕತ್ತರಿಸಿದ ಈರುಳ್ಳಿ, ಟೊಮೆಟೊ ಮತ್ತು ನಿಂಬೆ ರಸದೊಂದಿಗೆ ಕೆಲವು ಮೊಳಕೆ ಕಾಳುಗಳನ್ನು (Sprouted Dal) ತಿನ್ನಿ., ರಾತ್ರಿ ಊಟಕ್ಕೆ, 2 ಚಪಾತಿಗಳನ್ನು ಬೇಯಿಸಿ ಮತ್ತು ಬದನೆಕಾಯಿ ಪಲ್ಯ ಸೇವಿಸಿ. 

68

ದಿನ 5 
ಶುಕ್ರವಾರ, ಪ್ರೋಟೀನ್ (Protein) ಭರಿತ ಎಲ್ಲಾ ಬೇಳೆಯನ್ನು ಹಾಕಿ ದೋಸೆಯನ್ನು ತಯಾರಿಸಿ ಪುದೀನಾ ಮತ್ತು ಮೊಸರು ಚಟ್ನಿಯೊಂದಿಗೆ ಸೇವಿಸಿ. ಮಧ್ಯಾಹ್ನದ ಊಟಕ್ಕೆ, ಆಲೂ-ಗೋಬಿ ಪಲ್ಯ ಮತ್ತು ಒಂದು ಕಪ್ ಟೊಮೆಟೊ ರಸಂ ಜೊತೆ ಸ್ವಲ್ಪ ಬ್ರೌನ್ ರೈಸ್ ಸೇವಿಸಿ. ಸಂಜೆಯ ಸಮಯದಲ್ಲಿ ನಿಮಗೆ ಹಸಿವಾಗಿದ್ದರೆ, ಸಾಲ್ಟ್ ಪೆಪ್ಪರ್ ಬೆರೆಸಿದ ಸಣ್ಣ ಕಪ್ ಹಬೆಯಲ್ಲಿ ಬೇಯಿಸಿದ ಜೋಳವನ್ನು ಸೇವಿಸಿ. ಸುಮಾರು 8 ಗಂಟೆ ಸುಮಾರಿಗೆ, ರಾತ್ರಿ ಊಟಕ್ಕೆ ಸ್ವಲ್ಪ ಟೊಮೆಟೊ ರೈಸ್  ಮತ್ತು ಹುರಿದ ಆಲೂಗಡ್ಡೆ ಪಲ್ಯ ಸೇವಿಸಿ.

78

ದಿನ 6
6 ನೇ ದಿನ, ತರಕಾರಿ ಮತ್ತು ಕಡಲೆಕಾಯಿಯನ್ನು ಸೇರಿಸಿ ಸ್ವಲ್ಪ ರುಚಿಕರವಾದ ಶ್ಯಾವಿಗೆ ತಯಾರಿಸಿ. ಹೆಚ್ಚುವರಿ ಮಸಾಲೆಯುಕ್ತ ಕಿಕ್ ಗಾಗಿ ಇದನ್ನು ಕಡಲೆಕಾಯಿ-ಮೆಣಸಿನಕಾಯಿ ಚಟ್ನಿಯೊಂದಿಗೆ ತಿನ್ನಿ. ನಂತರ ಮಧ್ಯಾಹ್ನದ ಊಟಕ್ಕೆ, ಬ್ರೌನ್ ರೈಸ್ ಜೊತೆ ತರಕಾರಿಗಳಿಂದ ತುಂಬಿದ ಸಾಂಬಾರ್ ಸೇವಿಸಿ ಅಥವಾ ನೀವು ಅದನ್ನು ಸಾಮಾನ್ಯ, ಬಿಳಿ ಅನ್ನದೊಂದಿಗೆ ತಿನ್ನಬಹುದು. ರಾತ್ರಿ ಮಲ್ಟಿಗ್ರೇನ್ ಚಪಾತಿ (Mult Grain Chapati) ಮತ್ತು ತರಕಾರಿ ಪಲ್ಯ ತಿನ್ನಿ. ಒಂದು ಕಪ್ ಗ್ರೀನ್ ಟೀಯೊಂದಿಗೆ ದಿನವನ್ನು ಮುಗಿಸಿ.
 

88

ದಿನ 7
7 ನೇ ದಿನ, ಕೆಲವು ರವೆ ಇಡ್ಲಿಗಳು, ತೆಂಗಿನಕಾಯಿ ಚಟ್ನಿ ಮತ್ತು ಟೊಮೆಟೊ ಗೊಜ್ಜಿನೊಂದಿಗೆ ದಿನವನ್ನು ಪ್ರಾರಂಭಿಸಿ. ನಂತರ ಮಧ್ಯಾಹ್ನದ ಊಟಕ್ಕೆ, ಉಳಿದ ಟೊಮೆಟೊ ಪಲ್ಯದೊಂದಿಗೆ ಅನ್ನ ಸಾರು ಸೇವಿಸಿ. ರಾತ್ರಿ ಊಟಕ್ಕೆ, ಟೊಮೆಟೊ-ಈರುಳ್ಳಿ ಚಟ್ನಿಯೊಂದಿಗೆ ಸ್ವಲ್ಪ ಪೊಂಗಲ್ ಮಾಡಿ ತಿನ್ನಿ.

Read more Photos on
click me!

Recommended Stories