ಲೇಸ್‌ ಸ್ಟೈಲ್‌ನ ಆಲೂಗೆಡ್ಡೆ ಚಿಪ್ಸ್‌ ರಿಸಿಪಿ ಇಲ್ಲಿದೆ ನೋಡಿ...

First Published | Jul 27, 2020, 1:42 PM IST

ಕೇವಲ  ಮಕ್ಕಳಿಗೆ ಮಾತ್ರವಲ್ಲ ದೋಡ್ಡವರಿಗೂ  ಲೆಸ್‌  ಚಿಪ್ಸ್‌ ಅಂದರೆ ಪ್ರೀತಿನೇ. ಆದರೆ ಲೆಸ್‌ ಪ್ಯಾಕೆಟ್‌ಗಳಲ್ಲಿ  ಚಿಪ್ಸ್ ಕಡಿಮೆ ಮತ್ತು ಗಾಳಿ ಹೆಚ್ಚು ತುಂಬಿರುತ್ತದೆ. ಮಾರ್ಕೆಟ್‌ ಸ್ಟೈಲ್‌ನ  ಆಲೂಗೆಡ್ಡೆ ಚಿಪ್ಸ್ ಮನೆಯಲ್ಲೇ ತಯಾರಿಸಬಹುದು. ಇಲ್ಲಿದೆ ನೋಡಿ ಲೇಸ್‌ ರೀತಿಯ ಚಿಪ್ಸ್‌ ಮನೆಯಲ್ಲೇ  ತಯಾರಿಸುವ ಈಸಿ ವಿಧಾನ. ಅವುಗಳನ್ನು ತಿಂದ ನಂತರ ಇನ್ನೊಂದು ಸಾರಿ ಪ್ಯಾಕೆಟ್‌ ಚಿಪ್ಸ್‌ ಮೋರೆಹೋಗಲ್ಲ.

1 ಕೆಜಿ ಆಲೂಗಡ್ಡೆ, ನೀರು, ರುಚಿಗೆ ತಕ್ಕಷ್ಟು ಉಪ್ಪು, ಚಿಪ್ಸ್ ಕಟ್ಟರ್, 1 ಪಾಲಿಥೀನ್ ಶೀಟ್, ಕರಿಯಲು ಎಣ್ಣೆ

ಮೊದಲು ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗಿಯಿರಿ.
ಆಲೂಗಡ್ಡೆಯನ್ನು ಕಟ್ಟರ್‌ನಿಂದ ತೆಳುವಾದ ಸ್ಲೈಸ್‌ ಮಾಡಿ.
Tap to resize

ನಂತರ, ಅವುಗಳನ್ನು ಕನಿಷ್ಠ 1 ಗಂಟೆ ನೀರಿನಲ್ಲಿ ನೆನೆಸಿ.
ಒಲೆಯ ಮೇಲೆ ನೀರು ಕುದಿಯಲು ಇಡಿ. ಕುದಿಯುವ ನೀರಿಗೆ ಉಪ್ಪು ಹಾಕಿ ನಂತರ ಆಲೂಗೆಡ್ಡೆ ಸ್ಲೈಸ್‌ಗಳನ್ನು ಹಾಕಿ ಕುದಿಸಿ.
ನಂತರ ಆಲೂಗೆಡ್ಡೆಯ ಬಿಸಿನೀರನ್ನು ಬಸಿದುತಣ್ಣೀರಿನಿಂದ ತೊಳೆಯಿರಿ.
ಪ್ಲಾಸ್ಟಿಕ್ ಶೀಟ್‌ ಮೇಲೆ ಆ ಆಲೂ ಪೀಸ್‌ಗಳನ್ನುಬಿಸಿಲಿನಲ್ಲಿ ಹರಡಿ .
ಚಿಪ್ಸ್ ಒಣಗಿದಾಗ, ಗಾಳಿಯಾಡದ ಡಭ್ಬಿಯಲ್ಲಿ ಮುಚ್ಚಿಡಿ. ಚಿಪ್ಸ್ ತಿನ್ನಬೇಕೆಂದು ಅನಿಸಿದಾಗ, ಈ ಚಿಪ್ಸ್‌ನ್ನು ಬಿಸಿ ಎಣ್ಣೆಯಲ್ಲಿ ಕರಿಯಿರಿ.
ನಿಮ್ಮ ರುಚಿಗೆ ಅನುಗುಣವಾಗಿ, ಫ್ರೈ ಮಾಡಿದ ಚಿಪ್ಸ್‌ಗೆ ಚಾಟ್ ಮಸಾಲಾ ಅಥವಾ ಮ್ಯಾಗಿ ಮಸಾಲಾ ಬೆರೆಸಿ. ಎಂಜಾಯ್‌ ಮಾಡಿ.

Latest Videos

click me!