Perfect ಕ್ರಿಸ್ಪಿ ಪೂರಿ ಮಾಡುವ ಈಸಿ ವಿಧಾನ

First Published | Jul 25, 2020, 5:25 PM IST

ಗರಿಗರಿಯಾದ ಬಿಸಿ ಬಿಸಿ ಪೂರಿ ನೆನಪು ಮಾಡಿಕೊಂಡರೆ ಬಾಯಿಯಲ್ಲಿ ನೀರು ಬರುತ್ತದೆ.  ಗೋಲ್ಡನ್‌ ಬ್ರೌನ್‌ ಬಣ್ಣದ ಹೋಟಲ್‌ ಶೈಲಿಯ ಪೂರಿ ಮನೆಯಲ್ಲೇ ಮಾಡಿಕೊಂಡು ತಿನ್ನೋ ಹಾಗೆ ಅದರೆ.. ಆಹಾ ಏನು ಸೂಪರ್‌ ಆಗಿ ಇರುತ್ತೆ ಅಲ್ವಾ? ಈ ಮಳೆಗಾಲಕ್ಕೂ ಹಾಗೂ ಹೊರಗಡೆ ಹೋಗದೆ ಇರೋ ಪರಿಸ್ಥಿತಿಗೂ. ನೀವು ಮಾಡಬಹುದು ಈಸಿಯಾಗಿ ಕ್ರಿಸ್ಪಿ ಪ್ರೆಶ್‌ ಪೂರಿ. ಇಲ್ಲಿದೆ ನೋಡಿ  ಮಾಡುವ ಈಸಿ ವಿಧಾನ
2 ಕಪ್ ಗೋಧಿ ಹಿಟ್ಟು   
2 ಟೀಸ್ಪೂನ್ ರವೆ / ಬಾಂಬೆ ರವೆ
ಚಿಟಿಕೆ  ಸಕ್ಕರೆ
ರುಚಿಗೆ ಉಪ್ಪು
ನೀರು - ಅಗತ್ಯವಿರುವಷ್ಟು
ಎಣ್ಣೆ, ಕರಿಯಲು

ಒಂದು ಅಗಲವಾದ ಪಾತ್ರೆಯಲ್ಲಿ ಮಿಶ್ರಣ ಬಟ್ಟಲಿನಲ್ಲಿ, ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ರವೆ ತೆಗೆದುಕೊಳ್ಳಿ. ಚೆನ್ನಾಗಿ ಮಿಕ್ಸ್‌ ಮಾಡಿ.
Easy steps prepare crispy puris at home
Tap to resize

ನೀರನ್ನು ಸ್ವಲ್ಪ ಸ್ವಲ್ಪ ಸೇರಿಸಿ ಗಟ್ಟಿಯಾಗಿ ಹಿಟ್ಟು ಕಲೆಸಿಕೊಳ್ಳಿ. ಹಿಟ್ಟನ್ನು ಮೃದುವಾಗಿಸಲು ಕೆಲವು ನಿಮಿಷಗಳ ಕಾಲ ಚೆನ್ನಾಗಿ ನಾದಿ .
ಕಲಸಿದ ಹಿಟ್ಟಿಗೆ ಒಂದು ಚಮಚ ಎಣ್ಣೆ ಸೇರಿಸಿ ಮತ್ತೊಮ್ಮೆ ನಾದಿ. ಅಂಗೈಗಳ ನಡುವೆ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ. ಹಿಟ್ಟಿನ ಉಂಡೆಗೆ ಎಣ್ಣೆ ಸವರಿಕೊಳ್ಳಿ.
ಲಟ್ಟಣಿಗೆಯಿಂದ ರೌಂಡ್‌ ಶೇಪ್‌ಗೆ ರೋಲ್ ಮಾಡಿ. ಲಟ್ಟಿಸಿದ ಪುರಿಯು ತುಂಬಾ ತೆಳು ಅಥವಾ ದಪ್ಪವಾಗಬಾರದು.
ಡೀಪ್‌ ಫ್ರೈಯಿಂಗ್‌ ಪ್ಯಾನ್ ಅಥವಾ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
ಎಣ್ಣೆ ಸಾಕಷ್ಟು ಬಿಸಿಯಾದಾಗ, ಒಂದೊಂದೇ ಪೂರಿಯನ್ನು ಗೋಲ್ಡನ್‌ ಬ್ರೌನ್‌ ಬಣ್ಣವರೆಗೆ ಎರಡು ಬದಿ ಕರಿಯಿರಿ
Easy steps prepare crispy puris at home
ಕೆಲವು ಟಿಪ್‌ಗಳನ್ನು ನೆನಪಿಟ್ಟು ಕೊಳ್ಳಿ.ಚಪಾತಿ ಹಿಟ್ಟಿನಂತೆ ತುಂಬಾ ಮೃದುವಾಗಿರಬಾರದು ಅಥವಾ ತೀರ ಗಟ್ಟಿಯಾಗಿಯೂ ಇರಬಾರದು.
ಎಣ್ಣೆಯ ತಾಪಮಾನವನ್ನು ಒಂದೇರೀತಿ ಕಾಪಾಡಿಕೊಳ್ಳಿ ಹಾಗೂ ಉಬ್ಬಿದ ಪುರಿ ಪಡೆಯಲು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ
ರವೆ ಸೇರಿಸುವುದರಿಂದ ಪುರಿಗೆ ಗರಿಗರಿಯಾದರೆ, ಚಿಟಿಕೆ ಸಕ್ಕರೆ ಪೂರಿಗೆ ಚಿನ್ನದ ಬಣ್ಣವನ್ನು ನೀಡುತ್ತದೆ.
ಕಲಿಸಿದ ಹಿಟ್ಟನ್ನು ಗಾಳಿಯಾಡದಂತೆ ಮುಚ್ಚಿಡುವುದರಿಂದ ಪುರಿಗಳು ಹೆಚ್ಚು ಎಣ್ಣೆಯನ್ನು ಕುಡಿಯುವುದನ್ನು ತಪ್ಪಿಸಬಹುದು.

Latest Videos

click me!