ನಿಮ್ಮ ಎಲ್ಲಾ ಹಾರ್ಡ್ ವರ್ಕ್ ಮತ್ತು ಪ್ರಯತ್ನಗಳ ಹೊರತಾಗಿಯೂ, ಅಡುಗೆ ಟೇಸ್ಟಿಯಾಗದಿದ್ದರೆ(Tasty), ಎಷ್ಟೊಂದು ಬೇಜಾರ್ ಆಗುತ್ತೆ ಅಲ್ವಾ? ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಇಲ್ಲಿ ಕೆಲವು ತುಂಬಾ ಸಣ್ಣ ಮತ್ತು ಸುಲಭವಾದ ಟಿಪ್ಸ್ ಹೇಳಲಾಗಿದೆ ಇದು ನಿಮ್ಮ ಆಹಾರವನ್ನು ರುಚಿಕರವಾಗಿರಿಸುತ್ತೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಅಡುಗೆ ತಯಾರಿಸಿದರೆ, ಜನರು ನಿಮ್ಮ ಆಹಾರವನ್ನು ಹೊಗಳದೆ ಇರಲಾರರು.
ಅಡುಗೆ ಮಾಡುವಾಗ ಈ ಕುಕಿಂಗ್ ಟಿಪ್ಸ್ ಅನುಸರಿಸಿ
ನೀವು ಯಾವುದೇ ಗ್ರೇವಿ ತಯಾರಿಸುತ್ತಿದ್ದರೆ, ಮೊದಲು ಈರುಳ್ಳಿಯನ್ನು(Onion) ಎಣ್ಣೆಯಲ್ಲಿ ಹುರಿದು ರುಬ್ಬಿಕೊಳ್ಳಿ, ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತೆ ಮತ್ತು ಅಡುಗೆಯನ್ನು ಹೆಚ್ಚು ರುಚಿಕರವಾಗಿಸುತ್ತೆ.
ನೀವು ಬೆಳಗಿನ ಉಪಾಹಾರಕ್ಕೆ ಪರೋಟಾ ತಯಾರಿಸುತ್ತಿದ್ದರೆ ಮತ್ತು ಮನೆಯವರಿಗೆ ಇದು ಇಷ್ಟವಾಗದಿದ್ದರೆ, ನೀವು ಬೇಯಿಸಿದ ಆಲೂಗಡ್ಡೆಯನ್ನು(Potato) ಹಿಟ್ಟಿನಲ್ಲಿ ಸೇರಿಸ ಬಹುದು. ಇದು ನಿಮ್ಮ ಪರೋಟಾದ ರುಚಿ ಹೆಚ್ಚಿಸುತ್ತೆ.
ನೀವು ಪಾಲಕ್ ಸೊಪ್ಪನ್ನು(Palak) ಅಡುಗೆಯಲ್ಲಿ ಬಳಸುತ್ತಿದ್ದರೆ, ಅದರ ಬಣ್ಣವನ್ನು ಹಸಿರಾಗಿಡಲು ಬಯಸಿದರೆ, ಅಡುಗೆ ಮಾಡುವಾಗ ಅದಕ್ಕೆ ಒಂದು ಚಿಟಿಕೆ ಸಕ್ಕರೆಯನ್ನು ಸೇರಿಸಿ.ಆಗ ಪಾಲಕ್ ನ ಹಸಿರು ಬಣ್ಣ ಹಾಗೆಯೇ ಇರುತ್ತೆ. ಬಣ್ಣ ಬದಲಾಗೋದಿಲ್ಲ, ಟೇಸ್ಟ್ ಕೂಡ ಹಾಗೆಯೇ ಉಳಿಯುತ್ತೆ.
ಅನ್ನದಲ್ಲಿ(Rice) ಹೆಚ್ಚು ನೀರು ಇದ್ದರೆ ಏನು ಮಾಡಬೇಕು? ಈ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ.. ಅನ್ನದಲ್ಲಿ ನೀರಿದ್ದರೆ ಕುಕ್ಕರ್ ಅನ್ನು ಬಿಸಿ ಬಾಣಲೆಯ ಕೆಳಗೆ ಇಡಿ ಮತ್ತು ಅನ್ನವನ್ನು ತೆರೆದಿಡಿ. ಇದು ಅನ್ನ ಹೆಚ್ಚು ಅರಳುವಂತೆ ಮತ್ತು ಬಿಳಿಯಾಗಿ ಮಾಡುತ್ತೆ.
ಅನ್ನ ತಯಾರಿಸುವಾಗ ಮತ್ತೊಂದು ಸಲಹೆಯೆಂದರೆ ನೀವು ಅಕ್ಕಿಯನ್ನು ಬೇಯಿಸುವಾಗ ನಿಂಬೆ ರಸವನ್ನು(Lemon juice) ನೀರಿನೊಂದಿಗೆ ಬೆರೆಸೋದು ಉತ್ತಮ. ಯಾಕೆಂದರೆ ಇದು ಅಕ್ಕಿಯನ್ನು ಹೆಚ್ಚು ಅರಳುವಂತೆ ಮತ್ತು ಬಿಳಿಯಾಗಿ ಮಾಡುತ್ತೆ. ಬೆಳ್ತಿಗೆ ಅನ್ನ ತಯಾರಿಸುವಾಗ ನೀವಿದನ್ನು ಮಾಡಿ ನೋಡಬಹುದು.
ತರಕಾರಿ ಅಥವಾ ಬೇಳೆಯಲ್ಲಿ ಆಕಸ್ಮಿಕವಾಗಿ ಉಪ್ಪಿನಂಶ(Salt) ಹೆಚ್ಚಾದರೆ, ಅದರಲ್ಲಿ ಗೋಧಿ ಹಿಟ್ಟಿನ ಉಂಡೆಗಳನ್ನು ಮಾಡಿ ಹಾಕಿ ಮತ್ತು ನಂತರ 5 ನಿಮಿಷಗಳ ಕಾಲ ಬೇಯಿಸಿದ ನಂತರ, ಗೋಧಿಹಿಟ್ಟಿನ ಉಂಡೆ ಉಪ್ಪನ್ನು ಹೀರಿಕೊಳ್ಳುತ್ತವೆ ಮತ್ತು ಆಹಾರದಲ್ಲಿ ಉಪ್ಪು ಸರಿಯಾಗಿಸುತ್ತೆ.
ನೀವು ಬೆಂಡೆಕಾಯಿಯನ್ನು(Lady's finger) ಗರಿಗರಿಯಾಗಿ ಮತ್ತು ರುಚಿಕರವಾಗಿಸಲು ಬಯಸಿದರೆ, ಅದಕ್ಕೆ ಸ್ವಲ್ಪ ಹುರಿದ ಕಡಲೆ ಹಿಟ್ಟನ್ನು ಸೇರಿಸಿ. ನೀವು ಗ್ರೇವಿ ತಯಾರಿಸುತ್ತಿದ್ದರೆ, ಅದಕ್ಕೆ ಸ್ವಲ್ಪ ತುಪ್ಪವನ್ನು ಸೇರಿಸಿ, ಇದು ಗ್ರೇವಿಯ ರುಚಿಯನ್ನು ಇನ್ನೂ ಹೆಚ್ಚಿಸುತ್ತೆ. ಇಂದಿನಿಂದಲೇ ಈ ಟಿಪ್ಸ್ ಅನುಸರಿಸಿ ರುಚಿಯಾದ ಅಡುಗೆ ಮಾಡಿ.