Indian Food History: ಪಾನಿಪುರಿಯಿಂದ ಮೊಸರಿನವರೆಗೂ… ಭಾರತೀಯ ಭಕ್ಷ್ಯಗಳ ಶ್ರೀಮಂತ ಇತಿಹಾಸ ತಿಳಿಯಿರಿ

Published : Jun 11, 2025, 02:36 PM ISTUpdated : Jun 11, 2025, 02:40 PM IST

ಪಾನಿಪುರಿಯಿಂದ ಹಿಡಿದು, ಮೊಸರು, ಖಿಚ್ಡಿವರೆಗೂ ಹೆಚ್ಚಿನ ಆಹಾರಗಳು ಇಂದಿನ ಕಾಲದ್ದು ಅಲ್ಲ. ದ್ವಾಪರಯುಗದಲ್ಲಿ, ತ್ರೇತಾಯುಗದಲ್ಲಿ ತಯಾರಾದದ್ದು, ಇಲ್ಲಿದೆ ನೋಡಿ, ಭಾರತೀಯ ಭಕ್ಷ್ಯಗಳ ಶ್ರೀಮಂತ ಇತಿಹಾಸ. 

PREV
17

ಸತ್ಯ ಯುಗದ ಶುದ್ಧತೆಯಿಂದ ಹಿಡಿದು ಕಲಿಯುಗದ ವೈವಿಧ್ಯಮಯ ಸುವಾಸನೆಗಳವರೆಗೆ ಪ್ರತಿಯೊಂದು ಖಾದ್ಯವು ವಿಭಿನ್ನ ಯುಗಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತೆ. ಅಂತಹ ಭಾರತೀಯ ಭಕ್ಷ್ಯಗಳ ಶ್ರೀಮಂತ ಇತಿಹಾಸವನ್ನು (rich history) ತಿಳಿಯೋಣ ಬನ್ನಿ!

27

ಗೋಲ್ಗಪ್ಪಾ (ಪಾನಿ ಪುರಿ) :

ಪಾನಿಪುರಿಯನ್ನು ಮಹಾಭಾರತದ ಕಾಲದಲ್ಲಿ ದ್ರೌಪದಿ ತಯಾರಿಸಿದ್ದಾಳೆಂದು ಹೇಳಲಾಗಿದೆ. ಕುಂತಿ ತನ್ನ ಸೊಸೆಗೆ ಸ್ವಲ್ಪ ಸಾಮಾಗ್ರಿಗಳನ್ನು ಬಳಸಿ, ಎಲ್ಲರ ಹೊಟ್ಟೆ ತುಂಬುವಂತೆ ಆಹಾರ ತಯಾರಿಸುವ ಎಂದಾಗ ಪಾನಿಪುರಿ (Pani Puri) ತಯಾರಾಗಿತ್ತಂತೆ.

37

ಪೇಡಾ

ಹಾಲಿನಿಂದ ಮಾಡಲಾಗುವ ಸಿಹಿಯಾದ, ರುಚಿಯಾದ ಸಿಹಿ ತಿಂಡಿ ಪೇಡಾ (Peda) ದ್ವಾಪರ ಯುಗಕ್ಕೆ ಸಂಬಂಧಿಸಿದೆ. ಇದನ್ನು ಕೃಷ್ಣನಿಗಾಗಿ ತಯಾರಿಸಲಾಗಿತ್ತಂತೆ.

47

ಪಾಯಸ (ಖೀರು)

ಈ ಸಿಹಿಯಾದ ಪಾಯಸವು ತ್ರೇತಾಯುಗಕ್ಕೆ ಸಂಬಂಧಿಸಿದೆ. ರಾಜ ದಶರಥ ಯಜ್ಞ ಮಾಡುತ್ತಿದ್ದ ಸಂದರ್ಭದಲ್ಲಿ, ಅದೃಷ್ಟದ ಸಂಕೇತವಾಗಿ ಪಾಯಸ (Kheer) ಮಾಡಿ ಎಲ್ಲರಿಗೂ ಹಂಚಲಾಗಿತ್ತಂತೆ.

57

ಮಾಲ್ಫೊವ

ಪ್ಯಾನ್ ಕೇಕ್ ನಂತಿರುವ ಈ ಸಿಹಿ ತಿನಿಸು ದ್ವಾಪರ ಯುಗದಲ್ಲಿ ತಯಾರಾದಂತದ್ದು. ಇದು ಪುರಿ ಜಗನ್ನಾಥನಿಗೆ ಅತ್ಯಂತ ಪ್ರಿಯವಾದ ಸಿಹಿ ತಿನಿಸು ಕೂಡ ಹೌದು.

67

ಖಿಚ್ಡಿ

ಅಕ್ಕಿ ಮತ್ತು ಬೇಳೆಯೊಂದಿಗೆ, ಉಪ್ಪು, ಹುಳಿ, ಖಾರ ಬೆರೆಸಿ ಮಾಡಲಾಗುವ ಖಿಚ್ಡಿ (khichdi) ಸತ್ಯಯುದಲ್ಲಿ ತಯಾರಾದ ಆಹಾರ. ಇದು ಮಾಡಲು ತುಂಬಾನೆ ಸುಲಭ ಹಾಗೂ ಆರೋಗ್ಯಕರವಾದ ಆಹಾರವಾಗಿದೆ.

77

ಮೊಸರು

ಮೊಸರು ಅಥವಾ ಮೊಸರಿನಂತಿರುವ ಆಹಾರ ದ್ವಾಪರಯುಗಕ್ಕೆ ಸಂಬಂಧಿಸಿದೆ. ಕೃಷ್ಣನಿಗೆ ಹಾಲು ಹಾಗೂ ಹಾಲಿನಿಂದ ಮಾಡಿದ ಆಹಾರಗಳು ಬಲು ಪ್ರಿಯ. ಭಾರತೀಯ ಸಂಪ್ರದಾಯದಲ್ಲೂ ಮೊಸರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

Read more Photos on
click me!

Recommended Stories