ಫ್ರಿಡ್ಜ್‌ನಲ್ಲಿ ಕಲಸಿದ ಹಿಟ್ಟು ಇಡುವ ಮುನ್ನ ಈ ಕೆಲಸ ಮಾಡಿ.. 3 ದಿನವಾದ್ರೂ ಕಪ್ಪಾಗಲ್ಲ, ಚಪಾತಿಯೂ ಸಾಫ್ಟ್ ಆಗಿರುತ್ತೆ

Published : Jul 01, 2026, 04:05 PM IST

Soft Chapati tips: ಪ್ರತಿದಿನ ಮೃದುವಾದ ಚಪಾತಿ ಮಾಡಲು ಹಿಟ್ಟು ಕಲಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಹಿಟ್ಟು ಉಳಿದಾಗ ಅದನ್ನು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆದರೆ ಮರುದಿನ ನೋಡುವಾಗ ಹಿಟ್ಟಿನ ಮೇಲ್ಪದರ ಗಟ್ಟಿಯಾಗಿರುತ್ತದೆ ಅಥವಾ ಕಪ್ಪಾಗಿರುತ್ತದೆ. ಯಾಕೆ ಗೊತ್ತಾ?. 

PREV
14
ಕಪ್ಪಾಗುವುದೇಕೆ?

ಕಪ್ಪಾಗುವುದೇಕೆ?
ಕಲಸಿದ ಹಿಟ್ಟಿನಲ್ಲಿ ತೇವಾಂಶವಿರುತ್ತದೆ. ಇದು ಗಾಳಿಯ ಸಂಪರ್ಕಕ್ಕೆ ಬಂದಾಗ ಆಕ್ಸಿಡೀಕರಣ (Oxidation) ಪ್ರಕ್ರಿಯೆ ಆರಂಭವಾಗುತ್ತದೆ. ಈ ಕಾರಣದಿಂದಲೇ ಫ್ರಿಡ್ಜ್‌ನಲ್ಲಿಟ್ಟ ಹಿಟ್ಟು ನಿಧಾನವಾಗಿ ಗಟ್ಟಿಯಾಗಿ ಕಪ್ಪಾಗಲು ಪ್ರಾರಂಭಿಸುತ್ತದೆ. ಇದರ ಜೊತೆಗೆ ಹಿಟ್ಟಿನಲ್ಲಿರುವ ನೈಸರ್ಗಿಕ ಎಂಜೈಮ್‌ಗಳು ಮತ್ತು ಸೂಕ್ಷ್ಮಜೀವಿಗಳ ಚಟುವಟಿಕೆಯಿಂದಾಗಿ ಹಿಟ್ಟಿನ ಬಣ್ಣ ಬದಲಾಗುತ್ತದೆ. ಹೆಚ್ಚು ದಿನ ಹಿಟ್ಟನ್ನು ಹಾಗೆಯೇ ಬಿಟ್ಟರೆ ಅದರ ಮೇಲೆ ಬೂಸ್ಟು (Fungus) ಕೂಡ ಬರಬಹುದು.

24
ಹಿಟ್ಟನ್ನು ತಾಜಾವಾಗಿಡಲು ಟಿಪ್ಸ್

ಹಿಟ್ಟನ್ನು ತಾಜಾವಾಗಿಡಲು ಟಿಪ್ಸ್

ಏರ್‌ಟೈಟ್ ಕಂಟೇನರ್ ಬಳಸಿ
ಕಲಸಿದ ಹಿಟ್ಟನ್ನು ಯಾವಾಗಲೂ ಗಾಳಿ ಒಳಹೋಗದ ಡಬ್ಬಿಯಲ್ಲಿ (Airtight Container) ಇಡಬೇಕು. ಇದು ಹಿಟ್ಟು ದೀರ್ಘಕಾಲ ತಾಜಾವಾಗಿರಲು ಸಹಾಯ ಮಾಡುತ್ತದೆ.

ಎಣ್ಣೆ ಅಥವಾ ತುಪ್ಪ ಸವರಿ
ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುವ ಮೊದಲು ಅದರ ಮೇಲ್ಭಾಗಕ್ಕೆ ಸ್ವಲ್ಪ ಅಡುಗೆ ಎಣ್ಣೆ ಅಥವಾ ತುಪ್ಪವನ್ನು ಸವರಿ. ಇದು ಹಿಟ್ಟಿನ ಮೇಲ್ಪದರ ಒಣಗದಂತೆ ತಡೆಯುತ್ತದೆ ಮತ್ತು ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

34
ಫುಡ್ ರಾಪ್ ಬಳಸಿ

ಫುಡ್ ರಾಪ್ ಬಳಸಿ
ಒಂದು ವೇಳೆ ಏರ್‌ಟೈಟ್ ಡಬ್ಬಿ ಇಲ್ಲದಿದ್ದರೆ, ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಇಟ್ಟು ಅದರ ಮೇಲೆ ಪ್ಲಾಸ್ಟಿಕ್ ರಾಪ್ ಅಥವಾ ಬಿಗಿಯಾದ ಮುಚ್ಚಳವನ್ನು ಮುಚ್ಚಿ. ಇದರಿಂದ ಗಾಳಿ ಒಳಹೋಗುವುದಿಲ್ಲ.

ತಕ್ಷಣ ಫ್ರಿಡ್ಜ್‌ನಲ್ಲಿಡಿ
ಹಿಟ್ಟು ಕಲಸಿದ ತಕ್ಷಣ ಅದನ್ನು ಫ್ರಿಡ್ಜ್‌ನಲ್ಲಿ ಇಡಬೇಕು. ದೀರ್ಘಕಾಲ ಹೊರಗೆ ಇಡುವುದರಿಂದ, ವಿಶೇಷವಾಗಿ ಬೇಸಿಗೆಯಲ್ಲಿ ಹಿಟ್ಟು ಬೇಗನೆ ಹಾಳಾಗುತ್ತದೆ.

44
ಅಗತ್ಯವಿದ್ದಷ್ಟು ಮಾತ್ರ ಕಲಸಿ

ಅಗತ್ಯವಿದ್ದಷ್ಟು ಮಾತ್ರ ಕಲಸಿ
ಆರೋಗ್ಯದ ದೃಷ್ಟಿಯಿಂದ ಅಂದಿನ ಹಿಟ್ಟನ್ನು ಅಂದೇ ಬಳಸುವುದು ಉತ್ತಮ. ಒಂದೇ ದಿನಕ್ಕೆ ಸಾಕಾಗುವಷ್ಟು ಹಿಟ್ಟನ್ನು ಕಲಸುವುದರಿಂದ ರುಚಿ ಮತ್ತು ಗುಣಮಟ್ಟ ಎರಡೂ ಚೆನ್ನಾಗಿರುತ್ತದೆ.

ಫ್ರಿಡ್ಜ್‌ನಲ್ಲಿ ಹಿಟ್ಟನ್ನು ಎಷ್ಟು ದಿನ ಇಡಬಹುದು?
ಹಿಟ್ಟನ್ನು ಉತ್ತಮ ಗುಣಮಟ್ಟದ ಏರ್‌ಟೈಟ್ ಡಬ್ಬಿಯಲ್ಲಿಟ್ಟು, ಫ್ರಿಡ್ಜ್‌ನ ತಾಪಮಾನ 4°C ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಅದನ್ನು 2 ರಿಂದ 3 ದಿನಗಳ ಕಾಲ ಬಳಸಬಹುದು. ಆದರೆ, ಹಿಟ್ಟು ಅಂಟಂಟಾಗಿದ್ದರೆ, ಹುಳಿ ವಾಸನೆ ಬರುತ್ತಿದ್ದರೆ ಅಥವಾ ಬಣ್ಣ ಬದಲಾಗಿದ್ದರೆ ಅದನ್ನು ಬಳಸಬೇಡಿ. ಹಿಟ್ಟಿನ ಮೇಲೆ ಬೂಸ್ಟು ಕಂಡುಬಂದರೆ ತಕ್ಷಣ ಬಿಸಾಡಿ, ಇಲ್ಲದಿದ್ದರೆ ಫುಡ್ ಪಾಯ್ಸನಿಂಗ್ ಆಗುವ ಅಪಾಯವಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories