ಕೊತ್ತಂಬರಿ ಸೊಪ್ಪು ದೀರ್ಘ ಕಾಲ ಉಳಿಯುವಂತೆ ಕಾಪಾಡೋದು ಹೇಗೆ?

Published : Jul 09, 2022, 05:29 PM IST

ಕೊತ್ತಂಬರಿ ಸೊಪ್ಪು (coriander leaves) ಸರಳ ಆಹಾರಕ್ಕೂ ಸಹ ಪರಿಮಳ ಮತ್ತು ರುಚಿ ನೀಡುತ್ತೆ. ಇದನ್ನು ಬಹುತೇಕ ಎಲ್ಲಾ ರೀತಿಯ ಆಹಾರಗಳಿಗೆ ರುಚಿ ಸೇರಿಸಲು ಬಳಸಲಾಗುತ್ತೆ. ಆದರೆ ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಬಹಳ ಬೇಗನೆ ಕೊಳೆಯುತ್ತದೆ ಅಥವಾ ಅದರ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತೆ ಅಲ್ವಾ?. ಹೀಗಿರೋವಾಗ, ಮಳೆಗಾಲದ ದಿನಗಳಲ್ಲಿ ಕೊತ್ತಂಬರಿ ಸೊಪ್ಪನ್ನು ತಾಜಾ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಇಡೋದು ಹೇಗೆ ಎಂಬುದು ಜನರ ಪ್ರಶ್ನೆಯಾಗಿದೆ. ಇಲ್ಲಿದೆ ನೋಡಿ ಕೊತ್ತಂಬಾರಿ ಸೊಪ್ಪನ್ನು ದೀರ್ಘಕಾಲ ಇಡುವಂತಹ ಟಿಪ್ಸ್….   

PREV
17
 ಕೊತ್ತಂಬರಿ ಸೊಪ್ಪು ದೀರ್ಘ ಕಾಲ ಉಳಿಯುವಂತೆ ಕಾಪಾಡೋದು ಹೇಗೆ?

ಮೊದಲಿಗೆ, ಕೊತ್ತಂಬರಿ ಸೊಪ್ಪನ್ನು ಕನಿಷ್ಠ ಮೂರು ಬಾರಿ ತೊಳೆಯಿರಿ. ಇದರಿಂದ ಸೊಪ್ಪಿನ ಎಲ್ಲಾ ಮಣ್ಣು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ನಂತರ ಅದನ್ನು ಜರಡಿಗೆ ಹಾಕಿ ಮತ್ತು ನೀರನ್ನು ಚೆನ್ನಾಗಿ ಡ್ರೈ ಆಗುವಂತೆ ಮಾಡಿ. ಅದರ ಎಲ್ಲಾ ನೀರು ಒಣಗಿದ ನಂತರ, ಅದನ್ನು ಹತ್ತಿ ಬಟ್ಟೆ ಮೇಲೆ ಇರಿಸಿ ಮತ್ತು ಗಾಳಿಯಾಡದ ಕಂಪಾರ್ಟ್ಮೆಂಟ್ನಲ್ಲಿ ಅದನ್ನು ತುಂಬಿಸಿ.

27

ನೀವು ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಅದು ಒಣಗುವವರೆಗೆ ಬಿಸಿಲಿನಲ್ಲಿ ಒಣಗಿಸಿ. ಈಗ ಅದನ್ನು ಫ್ರಿಡ್ಜ್ ನಲ್ಲಿರುವ (fridge) ಪೆಟ್ಟಿಗೆಯಲ್ಲಿ ಹಾಕಿ. ಕೊತ್ತಂಬರಿ ಸೊಪ್ಪನ್ನು ಹೊರತುಪಡಿಸಿ, ನೀವು ಪುದೀನಾ ಅಥವಾ ಮೆಂತ್ಯ ಎಲೆಗಳನ್ನು ಸಹ ಒಣಗಿಸಬಹುದು.

37

ಕೊತ್ತಂಬರಿ ಸೊಪ್ಪನ್ನು ತಾಜಾವಾಗಿಡಲು, ಅದರ ಕಾಂಡಗಳನ್ನು ಕತ್ತರಿಸಿ, ಅದನ್ನು ಕಿಚನ್ ರೋಲ್ (kitchen role) ಅಥವಾ ಕ್ಲಿಂಗ್ ರ್ಯಾಪ್ ನಲ್ಲಿ ಸುತ್ತಿ ಮತ್ತು ಸ್ಟೀಲ್ ಗಾಳಿಯಾಡದ ಡಬ್ಬಿಯಲ್ಲಿ ಫ್ರಿಜ್ ನಲ್ಲಿ ಇರಿಸಿ. ಇದು ಕೊತ್ತಂಬರಿಯನ್ನು ಸುಮಾರು ೧೦ ದಿನಗಳವರೆಗೆ ತಾಜಾವಾಗಿರಿಸುತ್ತದೆ.

47

ಎರಡು ಮಸ್ಲಿನ್ ಬಟ್ಟೆಗಳನ್ನು (maslin cloths) ತೆಗೆದುಕೊಂಡು ಅದನ್ನು, ಒಂದು ಪೆಟ್ಟಿಗೆಯಲ್ಲಿ ಇರಿಸಿ, ಅದರ ಮೇಲೆ ಕೊತ್ತಂಬರಿಯನ್ನು ಇರಿಸಿ, ಅದರ ಮೇಲೆ ಮತ್ತೊಂದು ಮಸ್ಲಿನ್ ಬಟ್ಟೆಯನ್ನು ಇಡಿ, ನಂತರ ಅದನ್ನು ಮುಚ್ಚಿ ಫ್ರಿಡ್ಜ್ ನಲ್ಲಿ ಇರಿಸಿ. ಇದು ಅದನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.

57

ಇದಲ್ಲದೆ, ಕೊತ್ತಂಬರಿಯನ್ನು ತಾಜಾವಾಗಿಡಲು, ನೀವು ಒಂದು ಗಾಜಿನ ಜಾರ್ ನಲ್ಲಿ ನೀರು ತುಂಬಿ. ಈಗ ಕೊತ್ತಂಬರಿಯನ್ನು ಕಾಂಡದಿಂದ ಹಾಕಿ ಮತ್ತು ಅದರ ಮೇಲೆ ಪಾಲಿಥಿನ್ ಅನ್ನು ಹಾಕಿ. ಇದು ಕೊತ್ತಂಬರಿಯನ್ನು ದೀರ್ಘಕಾಲದವರೆಗೆ ತಾಜಾವಾಗಿರಿಸುತ್ತದೆ.

67

ಕೊತ್ತಂಬರಿ ಅಥವಾ ಇತರ ಗಿಡಮೂಲಿಕೆಗಳನ್ನು ಸಂಗ್ರಹಿಸಲು, ನೀವು ಅದನ್ನು ಕತ್ತರಿಸಿ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆಯಲ್ಲಿ ಬೆರೆಸಿದ ಐಸ್ ಟ್ರೇಯಲ್ಲಿ ಸಂಗ್ರಹಿಸಬಹುದು. ಅಗತ್ಯವಿದ್ದಾಗ ಅದನ್ನು ಫ್ರೀಜರ್ ನಿಂದ ತೆಗೆದು ತರಕಾರಿಗಳು, ರಾಯ್ತಾ ಸಲಾಡ್ ಗಳಲ್ಲಿ ಹಾಕಬಹುದು.

77

ಕೊತ್ತಂಬರಿ ಸೊಪ್ಪನ್ನು ನ್ಯೂಸ್ ಪೇಪರ್ ನಲ್ಲಿ ಸುತ್ತಬಾರದು ಎಂಬುದನ್ನು ನೆನಪಿಡಿ. ನ್ಯೂಸ್ ಪೇಪರ್ ನಲ್ ಮುದ್ರಿಸಲಾದ ಕಾರ್ಬನ್ (ಶಾಯಿ) ಒಂದು ಕ್ಯಾನ್ಸರ್ ಅಂಶವಾಗಿದೆ. ಕೊತ್ತಂಬರಿ ಸೊಪ್ಪನ್ನು ಯಾವಾಗಲೂ ಕಿಚನ್ ರೋಲ್ ನಲ್ಲಿ ಸುತ್ತಿ, ವೃತ್ತಪತ್ರಿಕೆಯಲ್ಲ.

Read more Photos on
click me!

Recommended Stories