Kitchen Tips : ಅಡುಗೆ ಮಾಡುವಾಗ ಈ 5 ತಪ್ಪುಗಳನ್ನು ಮರೆತು ಕೂಡ ಮಾಡಬೇಡಿ

First Published | Nov 3, 2022, 12:40 PM IST

ಅಡುಗೆ ಮಾಡುವಾಗ, ನಾವು ಆಗಾಗ್ಗೆ ಅಂತಹ ತಪ್ಪನ್ನು ಮಾಡುತ್ತೇವೆ, ಇದು ಆಹಾರದ ಪೋಷಕಾಂಶಗಳಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಅಡುಗೆ ಮಾಡುವಾಗ ನೀವು ಯಾವ 5 ತಪ್ಪುಗಳನ್ನು ಮಾಡಬಾರದು ಅನ್ನೋದರ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತೇವೆ. ನೀವು ಅವುಗಳನ್ನು ಪಾಲಿಸುವ ಮೂಲಕ ಆಹಾರದಲ್ಲಿನ ಪೋಷಕಾಂಶಗಳನ್ನು ಉಳಿಯುವಂತೆ ಮಾಡಬಹುದು.

ಅಡುಗೆ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಒಂದು ಕಲೆಯಾಗಿದೆ. ಅನೇಕ ಜನರು ತುಂಬಾ ರುಚಿಕರವಾದ ಆಹಾರ ತಯಾರಿಸುತ್ತಾರೆ, ಆದರೆ ಅಡುಗೆ ಮಾಡೋವಾಗ ಕೆಲವು ಪ್ರಮುಖವಾದ ತಪ್ಪುಗಳನ್ನು ಮಾಡುತ್ತಾರೆ, ಇದು ಆಹಾರದ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಆಹಾರವನ್ನು (healthy food) ಸೇವಿಸಿದ ನಂತರವೂ, ದೇಹ ಬಳಲುವಂತೆ ಮಾಡುತ್ತೆ.

ಇಂದು ಆಹಾರ ತಯಾರಿಸೋವಾಗ ನೀವು ಮಾಡುವಂತಹ ತಪ್ಪುಗಳ ಬಗ್ಗೆ ಮಾತಮಾಡೋಣ. ನಿಮ್ಮ ಈ ಸಮಸ್ಯೆಯನ್ನು ತೆಗೆದುಹಾಕೋಣ ಮತ್ತು ನೀವು ತಿಳಿಯದೆ ಮಾಡುವ ಅಂತಹ ಸಾಮಾನ್ಯ ಅಡುಗೆ ತಪ್ಪನ್ನು (kitchen mistakes) ಹೇಗೆ ಸರಿ ಪಡಿಸೋದು, ಜೊತೆಗೆ ಟೇಸ್ಟಿ ಆಹಾರ ತಯಾರಿಸೋದೆ ಹೇಗೆ ಅನ್ನೋದನ್ನು ನೋಡೋಣ. 

Tap to resize

ಅತಿಯಾಗಿ ಬೇಯಿಸೋದು
ಹೆಚ್ಚಿನ ಭಾರತೀಯರು ಹೆಚ್ಚಿನ ರುಚಿಗಾಗಿ ಆಹಾರವನ್ನು ಹೆಚ್ಚು ಬೇಯಿಸುತ್ತಾರೆ. ಅತಿಯಾಗಿ ಬೇಯಿಸಿದ, ಕರಿದ ಮತ್ತು ಕುರುಕಲು ಆಹಾರಗಳು ರುಚಿಕರವಾಗಿ ಕಾಣುತ್ತವೆ. ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹೇಳಲಾಗುತ್ತೆ.

ಸಾಕಷ್ಟು ಎಣ್ಣೆಯವರೆಗೆ ಕರಿದ ಆಹಾರ ತಿನ್ನೋದು ಆರೋಗ್ಯಕರವಲ್ಲ. ಕೆಲವು ಸಂದರ್ಭಗಳಲ್ಲಿ, ಇದು ಹಾನಿಕಾರಕವೂ ಆಗಿರಬಹುದು, ಏಕೆಂದರೆ ಇದು ತರಕಾರಿಗಳ ಎಲ್ಲಾ ಪೋಷಕಾಂಶಗಳನ್ನು ನಾಶಪಡಿಸುತ್ತದೆ. ಆದುದರಿಂದ ಸಾದ್ಯವಾದಷ್ಟು ಆಹಾರಗಳನ್ನು ಹೆಚ್ಚು ಬೇಯಿಸೋದು, ಹೆಚ್ಚು ಕರಿಯೋದನ್ನು ಮಾಡಬೇಡಿ.

ತರಕಾರಿಗಳು ಮತ್ತು ಹಣ್ಣುಗಳ ಸಿಪ್ಪೆ ಸುಲಿಯೋದು ಸರಿಯಲ್ಲ
ತರಕಾರಿಗಳು ಮತ್ತು ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನಲು ನಾವು ಇಷ್ಟಪಡುತ್ತೇವೆ. ಆದಾಗ್ಯೂ, ಇದು ನಾವು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ನಾವು ತರಕಾರಿಗಳು ಮತ್ತು ಹಣ್ಣುಗಳ ಸಿಪ್ಪೆಯನ್ನು (fruit peel) ನಿಷ್ಪ್ರಯೋಜಕವೆಂದು ಪರಿಗಣಿಸುತ್ತೇವೆ ಮತ್ತು ಅವುಗಳ ಸಿಪ್ಪೆ ಸುಲಿದು ಅವುಗಳನ್ನು ಕಸವನ್ನಾಗಿ ಎಸೆಯುತ್ತೇವೆ. ಇದು ದೊಡ್ಡ ತಪ್ಪು. 

ತರಕಾರಿಗಳು ಮತ್ತು ಹಣ್ಣಿನ ಸಿಪ್ಪೆಗಳು ತಮ್ಮ ದೇಹದಲ್ಲಿ ಅತ್ಯಧಿಕ ಪ್ರಮಾಣದ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ತರಕಾರಿಗಳ ಸಿಪ್ಪೆ 30 ಪ್ರತಿಶತದಷ್ಟು ನಾರಿನಂಶವನ್ನು ಹೊಂದಿರುತ್ತವೆ. ಆದುದರಿಂದ ಇವುಗಳನ್ನು ವೇಸ್ಟ್ ಮಾಡದೇ ಸೇವಿಸೋದು ಬೆಸ್ಟ್

ತರಕಾರಿಗಳನ್ನು ತುಂಬಾ ಚಿಕ್ಕದಾಗಿ ಕತ್ತರಿಸೋದು
ಆಮ್ಲಜನಕ ಮತ್ತು ಬೆಳಕಿಗೆ ಒಡ್ಡಿಕೊಳ್ಳುವುದು ತರಕಾರಿಗಳು ಮತ್ತು ಹಣ್ಣುಗಳಲ್ಲಿ ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ. ನೀವು ಆಹಾರವನ್ನು ಕತ್ತರಿಸಿದಾಗ, ಅವುಗಳಲ್ಲಿ ಹೆಚ್ಚಿನವು ಬೆಳಕು ಮತ್ತು ಆಮ್ಲಜನಕಕ್ಕಾಗಿ ತೆರೆದುಕೊಳ್ಳುತ್ತವೆ. ಈ ಕಾರಣದಿಂದಾಗಿ ಅದರಲ್ಲಿರುವ ವಿಟಮಿನ್ ಸಿ (Vitamin C) ಕಡಿಮೆಯಾಗುತ್ತೆ. ಹಾಗಾಗಿ, ನಾವು ತರಕಾರಿಗಳು ಮತ್ತು ಹಣ್ಣುಗಳನ್ನು ದೊಡ್ಡದಾಗಿ ಕತ್ತರಿಸಬೇಕು.

ಹೆಚ್ಚು ನೀರಿನಲ್ಲಿ ಬೇಯಿಸುವುದು
ಅಡುಗೆಗೆ ಹೆಚ್ಚು ನೀರನ್ನು ಬಳಸುವುದರಿಂದ ತರಕಾರಿಗಳು ಮತ್ತು ಹಣ್ಣುಗಳಲ್ಲಿರುವ ಪೋಷಕಾಂಶಗಳನ್ನು ನಾಶಪಡಿಸುತ್ತದೆ ಮತ್ತು ಅದರಿಂದ ಅಗತ್ಯವಾದ ಜೀವಸತ್ವಗಳನ್ನು ಆವಿಯಾಗಿಸುತ್ತದೆ. ಆದುದರಿಂದ ಅಡುಗೆ ಮಾಡುವಾಗ ಕಡಿಮೆ ನೀರು ಬಳಸೋದು ಉತ್ತಮ.

ಹೆಚ್ಚುವರಿ ನೀರಿನಲ್ಲಿ ಬೇಯಿಸಿದಾಗ ತರಕಾರಿಗಳಿಂದ ವಿಟಮಿನ್ ಬಿ ಮತ್ತು ವಿಟಮಿನ್ ಸಿ ನಷ್ಟವಾಗುತ್ತೆ. ಇಷ್ಟೇ ಅಲ್ಲ, ಹೆಚ್ಚು ನೀರಿನಲ್ಲಿ ಅಡುಗೆ ಅಥವಾ ಮೈಕ್ರೋವೇವ್ ಮಾಡಿದಾಗ ವಿಟಮಿನ್ ಬಿ 12 (vitamin B 12), ವಿಟಮಿನ್ ಬಿ 6, ಫೋಲೇಟ್ ಮತ್ತು ಥಯಾಮಿನ್ ನಂತಹ ಪೋಷಕಾಂಶಗಳು ಸಹ  ನಾಶವಾಗುತ್ತವೆ..

ಆಹಾರವನ್ನು ಮತ್ತೆ ಬಿಸಿಮಾಡುವುದು
ಜನರು ಆಹಾರವನ್ನು ತಯಾರಿಸಿ, ಅದನ್ನು ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸುತ್ತಾರೆ ಮತ್ತು ತಿನ್ನಲು ಅದನ್ನು ಮತ್ತೆ ಬಿಸಿ ಮಾಡುತ್ತಾರೆ. ನಿಮ್ಮ ಈ ಅಭ್ಯಾಸವು ಪೋಷಕಾಂಶಗಳನ್ನು ಕೊಲ್ಲುವುದಲ್ಲದೆ, ವಿಷಕಾರಿತ್ವಕ್ಕೆ ಕಾರಣವಾಗಬಹುದು. ವಿಟಮಿನ್ ಸಿ-ಭರಿತ ವಸ್ತುಗಳು ಮತ್ತೆ ಬಿಸಿಮಾಡುವುದರಿಂದ ಆರೋಗ್ಯದ ಮೇಲೆ ಹೆಚ್ಚು ಅಡ್ಡ ಪರಿಣಾಮ ಬೀರುತ್ತವೆ.

Latest Videos

click me!