ಬೆಳ್ಳುಳ್ಳಿಯನ್ನು ಫ್ರಿಜ್ನಲ್ಲಿ ಇಡುವುದು ಸರಿಯೇ? ಬೆಳ್ಳುಳಿ ಪ್ರೆಶ್ ಆಗಿರಲು ಹೀಗೆ ಸ್ಟೋರ್ ಮಾಡಬೇಕು.
ಫ್ರಿಜ್‌ನಲ್ಲಿರುವ ತೇವಾಂಶದಿಂದಾಗಿ ಬೆಳ್ಳುಳ್ಳಿ ಮೊಳಕೆಯೊಡೆಯಲು ಹಾಗೂ ಹಾಳಾಗಲು ಪ್ರಾರಂಭಿಸುತ್ತದೆ.
ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡಬಹುದು. ಆದರೆ ಅವುಗಳ ಮೇಲೆ ನೇರವಾದ ಸೂರ್ಯನ ಬೆಳಕು ಬೀಳಬಾರದು.
ಹಾಗೆಯೇ ಸೌತೆಕಾಯಿಯನ್ನೂ ಫ್ರಿಜ್‌ನಲ್ಲಿ ಇಡುತ್ತಾರೆ. ಎರಡು ಮೂರು ದಿನಗಳಲ್ಲಿ ಅವು ಹಾಳಾಗುತ್ತವೆ ಅವುಗಳನ್ನು ಹೊರಗೆ ಸಂಗ್ರಹಿಸಿ.
ಕಲ್ಲಂಗಡಿ ಎಂದಿಗೂ ಫ್ರಿಜ್‌ನಲ್ಲಿ ಸಂಗ್ರಹಿಸಬಾರದು. ಅವುಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ನಾಶವಾಗುತ್ತವೆ.
ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರೊಳಗಿನ ಪಿಷ್ಟ ಸಕ್ಕರೆಯನ್ನಾಗಿ ಕನ್ವರ್ಟ್ ಆಗುತ್ತದೆ ಹಾಗೂ ಟೇಸ್ಟ್ ಸಹ ಹಾಳಾಗುತ್ತದೆ. ಆಲೂಗಡ್ಡೆಯನ್ನು ತಂಪಾದ ಒಣ ಸ್ಥಳದಲ್ಲಿ ಇರಿಸಿ. ಅಲ್ಲದೆ, ಅದನ್ನು ಪ್ಲಾಸ್ಟಿಕ್‌ನಲ್ಲಿ ಇಡಬೇಡಿ.
ನೂರರಲ್ಲಿ 99 ಜನರು ಬ್ರೆಡ್ ಅನ್ನು ರೆಫ್ರಿಜರೇಟರ್‌ನಲ್ಲಿ ಇರಿಸುವ ತಪ್ಪನ್ನು ಮಾಡುತ್ತಾರೆ. ಹಾಗೇ ಮಾಡಿದರೆ ಬ್ರೆಡ್ ಒಣಗುತ್ತದೆ.
ಬ್ರೆಡ್‌ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಫ್ರೀಜರ್‌ನಲ್ಲಿ ಇರಿಸಿ. ತಿನ್ನುವ ಕೆಲವು ನಿಮಿಷಗಳ ಮೊದಲು ತೆಗೆದುಟೋಸ್ಟ್ ಮಾಡಿ.
ಸಿಟ್ರಿಕ್ ಆಸಿಡ್ ಹೊಂದಿರುವ ಹಣ್ಣುಗಳಾದ ನಿಂಬೆಹಣ್ಣುಗಳು ಕಡಿಮೆ ತಾಪಮಾನದಲ್ಲಿ ಹೊಂದಿಕೆಯಾಗುವುದಿಲ್ಲ. ಸಿಪ್ಪೆಗಳ ಮೇಲೆ ಕಲೆ ಆಗಲು ಪ್ರಾರಂಭಿಸಿ ರುಚಿ ಕೆಟ್ಟು,ರಸವೂ ಕಡಿಮೆಯಾಗುತ್ತದೆ
ಸೇಬುಗಳನ್ನು ಫ್ರಿಜ್‌ನಲ್ಲಿ ಇಡಲಾಗುತ್ತದೆ. ಖಂಡಿತವಾಗಿಯೂ ಹೀಗೆ ಮಾಡಬಾರದು.
ಜೊತೆಗೆ ಬೀಜ ಹೊಂದಿರುವ ಹಣ್ಣುಗಳಾದ ಪೀಚ್, ಪ್ಲಮ್ ಮತ್ತು ಚೆರ್ರಿಗಳನ್ನು ಸಹ ರೆಫ್ರಿಜರೇಟರ್‌ನಲ್ಲಿ ಇಡಬಾರದು. ಕಡಿಮೆ ತಾಪಮಾನದಲ್ಲಿ, ಅವುಗಳಲ್ಲಿರುವ ಎನ್ಜೆಮ್ಸ್ ಆಕ್ಟೀವ್ ಆಗಿ ಹಣ್ಣು ಬೇಗ ಕೊಳೆಯುತ್ತದೆ.
ಬಾಳೆಹಣ್ಣನ್ನು ಎಂದಿಗೂ ಫ್ರಿಜ್‌ನಲ್ಲಿ ಇಡಬಾರದು. ಬೇಗನೆ ಕಪ್ಪು ಬಣ್ಣಕ್ಕೆ ತಿರುಗುವುದರ ಜೊತೆ ಎಥಿಲೀನ್ ಹೊರಬರುತ್ತದೆ. ಇದರಿಂದಾಗಿ ಜೊತೆಯಲ್ಲಿರುವ ಹಣ್ಣುಗಳು ಸಹ ಬೇಗ ಕಳಿಯುತ್ತವೆ. ಬಾಳೆಹಣ್ಣುಗಳನ್ನು ಒಣ ಸ್ಥಳದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು.
ಈರುಳ್ಳಿಯನ್ನು ಬೆಳ್ಳುಳ್ಳಿಯಂತೆ ಫ್ರಿಜ್ನಲ್ಲಿ ಇಡಬಾರದು. ಫ್ರಿಜ್ ದುರ್ವಾಸನೆ ಬೀರಲು ಪ್ರಾರಂಭಿಸುತ್ತದೆ.ಈರುಳ್ಳಿ ಬೇಗ ಕೊಳೆಯುತ್ತದೆ.
ಈರುಳ್ಳಿಯನ್ನುಹೊರಗೆ ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿ.
ಟೊಮೆಟೊಗಳನ್ನು ಫ್ರಿಜ್ ನಲ್ಲಿ ಸಂಗ್ರಹಿಸುತ್ತೇವೆ. ಹೀಗೆ ಇಡುವುದರಿಂದ ಅವು ಬೇಗನೆ ಕೊಳೆತು ಹೋಗುತ್ತವೆ. ಡ್ರೈ ಜಾಗದಲ್ಲಿ ದೀರ್ಘಕಾಲವರೆಗೆ ಫ್ರೆಶ್ ಆಗಿರುತ್ತದೆ.