ಬೆಳ್ಳುಳ್ಳಿ ಪಾಯಸ! ಇರುವೆ ಚಟ್ನಿ.. ಕೇಳೋಕೆ ವಿಚಿತ್ರ ಅನಿಸೋ ಭಾರತೀಯ ಭಕ್ಷ್ಯಗಳಿವು

Suvarna News   | Asianet News
Published : Oct 12, 2020, 04:59 PM IST

ಭಾರತವು ತನ್ನದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಭಾರತವು ಒಂದು ವಿಶಿಷ್ಟ ಸಂಸ್ಕೃತಿಯ ನೆಲವಾಗಿದೆ, ಮತ್ತು ವಿವಿಧ ಜನಾಂಗದ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಸಂಪ್ರದಾಯಗಳಿಂದ ಹಿಡಿದು ಹಬ್ಬ, ಆಹಾರದವರೆಗೆ, ಎಲ್ಲವೂ ನಮ್ಮಲ್ಲಿ ವೈಶಿಷ್ಟ್ಯವಾಗಿದೆ.

PREV
18
ಬೆಳ್ಳುಳ್ಳಿ ಪಾಯಸ! ಇರುವೆ ಚಟ್ನಿ..  ಕೇಳೋಕೆ ವಿಚಿತ್ರ ಅನಿಸೋ ಭಾರತೀಯ ಭಕ್ಷ್ಯಗಳಿವು

ನಮ್ಮ ಸಂಸ್ಕೃತಿಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ ಏಕೆಂದರೆ ಇದು ನಮ್ಮ ಬೇರುಗಳನ್ನು ಮತ್ತು ಸಂಸ್ಕೃತಿಯನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.  ಲಕ್ನೋದ  ಕಬಾಬ್ ಗಳಾಗಿರಲಿ ಅಥವಾ ಕರ್ನಾಟಕದ ಮೈಸೂರ್ ಪಾಕ್  ಆಗಿರಲಿ, ಭಾರತದ ಪ್ರತಿಯೊಂದು ಸ್ಥಳವೂ ವಿಶಿಷ್ಟ ಆಹಾರಕ್ಕಾಗಿ ಹೆಸರುವಾಸಿಯಾಗಿದೆ. 

28

ಆದಾಗ್ಯೂ, ಆಹಾರದ ವಿಷಯಕ್ಕೆ ಬಂದರೆ, ಕೆಲವು ಆಹಾರ ಪದಾರ್ಥಗಳು ವಿಲಕ್ಷಣವಾಗಿರುತ್ತವೆ ಮತ್ತು ಭಾರತದಲ್ಲಿ ಮಾತ್ರ ಲಭ್ಯವಿದೆ. ರಾಯಲ್ ಕಬಾಬ್ ಮತ್ತು ಬಿರಿಯಾನಿಗಳಂತೆಯೇ ಜನರು ಭಾರತದಲ್ಲಿ ರೇಷ್ಮೆ ಹುಳುಗಳು ಮತ್ತು ಕೊಳೆತ ಆಲೂಗಡ್ಡೆಗಳನ್ನು ತಿನ್ನುವುದನ್ನು ಆನಂದಿಸುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 
ಭಾರತದಲ್ಲಿ ಲಭ್ಯವಿರುವ ಕೆಲವು ವಿಚಿತ್ರ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ.

38

ಈರುಳ್ಳಿ ಹಲ್ವಾ : ನಾವು ಕ್ಯಾರಟ್ ಹಲ್ವಾ ಮತ್ತು ಮೂಂಗ್ ದಾಲ್ ಹಲ್ವಾವನ್ನು ಆನಂದಿಸುವಂತೆಯೇ, ಕೆಲವರು ಈರುಳ್ಳಿಯ ಹಲ್ವಾವನ್ನು ಸಹ ಆನಂದಿಸುತ್ತಾರೆ. ಈರುಳ್ಳಿಯನ್ನು ಬೆಣ್ಣೆಯಲ್ಲಿ ಹುರಿದು, ನಂತರ ಸ್ವಲ್ಪ ಹಾಲು ಮತ್ತು ಸಕ್ಕರೆಯೊಂದಿಗೆ ಕಡಿಮೆ ಉರಿಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ.

48

ಖೋರಿಸಾ : ಈ ಖಾದ್ಯವು ಅಸ್ಸಾಂನಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ಇದು ಅಸ್ಸಾಮೀಸ್ ಖಾದ್ಯವಾಗಿದ್ದು ಇದನ್ನು ತುರಿದ ಬಿದಿರಿನ ಚಿಗುರು ಬಳಸಿ ತಯಾರಿಸಿ, ಹಸಿ ಅಥವಾ ಉಪ್ಪಿನಕಾಯಿ ರೂಪದಲ್ಲಿ ಸೇವಿಸಲಾಗುತ್ತದೆ.

58

ಕಪ್ಪು ಅಕ್ಕಿ : ಕೆಂಪು ಅಕ್ಕಿ ಮತ್ತು ಕಂದು ಅಕ್ಕಿ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದೆ ಮತ್ತು ಮ್ಯಾಜಿಕ್ ರೈಸ್ ಎಂದೂ ಕರೆಯಲ್ಪಡುವ ಕಪ್ಪು ಅಕ್ಕಿಯನ್ನು ಮಣಿಪುರ ಮತ್ತು ಉತ್ತರ ಬಂಗಾಳದಲ್ಲಿ ತಿನ್ನಲಾಗುತ್ತದೆ. ಇದು ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿದೆ.

68

 ಫನ್ ಪ್ಯುಟ್ : ನಾವೆಲ್ಲರೂ ಆಲೂಗಡ್ಡೆಯನ್ನು ಯಾವುದೇ ರೂಪದಲ್ಲಿ ಸೇವಿಸಲು ಇಷ್ಟಪಡುತ್ತೇವೆ. ಆದರೆ ಭಾರತದ ಪೂರ್ವ ಭಾಗದಲ್ಲಿ ಕೆಲವರು ಆಲೂಗಡ್ಡೆಯನ್ನು ಮಣ್ಣಿನಲ್ಲಿ ಕೊಳೆಯಿಸಿ ನಂತರ ಅವುಗಳನ್ನು ಹೊರಗೆ ತೆಗೆದುಕೊಂಡು, ಮಸಾಲೆ ಬೆರೆಸಿ ತಿನ್ನಲಾಗುತ್ತದೆ.

78

ಬೆನಾಮಿ ಖೀರ್ : ಈ ಖೀರ್ ನಿಮ್ಮ ಸಾಮಾನ್ಯ ಖೀರ್ನಂತಲ್ಲ. ಈ ಖೀರ್ ನ ಮೇನ್ ವಸ್ತು ಏನೆಂದರೆ "ಬೆಳ್ಳುಳ್ಳಿ". ಹೌದು, ಪುಡಿಮಾಡಿದ ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಗಂಟೆಗಟ್ಟಲೆ ಬೇಯಿಸಿ ಈ ವಿಶಿಷ್ಟ ಖೀರ್ ತಯಾರಿಸಲಾಗುತ್ತದೆ. 

88

 ಕೆಂಪು ಇರುವೆ ಚಟ್ನಿ : ಚತ್ತೀಸ್ಗಡದ ಸ್ಥಳೀಯ ಬುಡಕಟ್ಟು ಜನಾಂಗದವರು ಈ ಚಟ್ನಿಯನ್ನು ಇಷ್ಟಪಡುತ್ತಾರೆ. ಚಪ್ರಾ ಎಂದು ಕರೆಯಲ್ಪಡುವ ಈ ಕೆಂಪು ಇರುವೆ ಚಟ್ನಿ ರುಚಿಕರವಾದದ್ದು ಎಂದು ಹೇಳಲಾಗುತ್ತದೆ.

click me!

Recommended Stories