ಹುಷಾರ್... ಅಪ್ಪಿ ತಪ್ಪಿಯೂ ಫ್ರಿಜ್ ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ..

Suvarna News   | Asianet News
Published : Oct 12, 2020, 05:03 PM IST

ಫ್ರಿಜ್ ಕಂಡು ಹಿಡಿದಿರುವುದು ಮನುಷ್ಯನಿಗೆ ವರದಾನವೇ ಸರಿ. ಯಾವುದೇ ವಸ್ತುವನ್ನು ಹೆಚ್ಚು ಸಮಯದವರೆಗೆ ಸುರಕ್ಷಿತವಾಗಿ, ಕೆಡದಂತೆ ರಕ್ಷಿಸಲು ಫ್ರಿಜ್ ಸಹಾಯ ಮಾಡುತ್ತೆ. ಆದರೆ ಜನ ಮಾತ್ರ ಫ್ರಿಜ್ ನಲ್ಲಿ ಬೇಕಾದ -ಬೇಡವಾದ ಎಲ್ಲಾ ವಸ್ತುಗಳನ್ನು ಇಡಲು ಆರಂಭಿಸಿದ್ದಾರೆ. ಯಾವ ವಸ್ತುಗಳನ್ನು ಫ್ರಿಜ್ ನಲ್ಲಿ ಇಡಲೇಬಾರದು ಎನ್ನಲಾಗುತ್ತದೆ ಅಂತಹ ವಸ್ತುಗಳನ್ನು ಸಹ ಫ್ರಿಜ್ ನಲ್ಲಿ ಇಡುತ್ತಾರೆ. ನಿಮಗಿಂದು ಆ ಹತ್ತು ವಸ್ತುಗಳ ಬಗ್ಗೆ ತಿಳಿಸುತ್ತೇವೆ. ಅವುಗಳನ್ನು ಯಾವತ್ತೂ ಫ್ರಿಜ್ ನಲ್ಲಿ ಇಡಲೇಬಾರದು. ಇದರಿಂದ ಸಮಸ್ಯೆಗಳೇ ಹೆಚ್ಚುತ್ತದೆ. 

PREV
110
ಹುಷಾರ್... ಅಪ್ಪಿ ತಪ್ಪಿಯೂ ಫ್ರಿಜ್ ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ..

ನಮ್ಮಲ್ಲಿ ಹೆಚ್ಚು ಜನ ಟೊಮ್ಯಾಟೊವನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡಿ ಇಡುತ್ತೇವೆ. ಆದರೆ ಹಾಗೆ ಮಾಡಲೇಬಾರದು. ಯಾಕೆಂದರೆ ಟೊಮ್ಯಾಟೊವನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದು ಬೇಗನೆ ಹಾಳಾಗುತ್ತದೆ. ಇದನ್ನು ನಾವು ಒಣಗಿರುವ ಜಾಗದಲ್ಲಿ ಇಡಬೇಕು. ಹಾಗಿದ್ದರೆ ಮಾತ್ರ ಅದು ತುಂಬಾ ಸಮಯದವರೆಗೆ ಚೆನ್ನಾಗಿರುತ್ತದೆ. 

210

ಬಾಳೆಹಣ್ಣನ್ನು ಯಾವತ್ತೂ ಫ್ರಿಜ್ ನಲ್ಲಿ ಇಡಬಾರದು. ಇದರಿಂದ ಬಾಳೆಹಣ್ಣು ಬೇಗನೆ ಹಾಳಾಗುತ್ತದೆ. ಬಾಳೆಹಣ್ಣು ಬೇಗನೆ ಕಪ್ಪಾಗುತ್ತದೆ. ಜೊತೆಗೆ ಇದರಿಂದ ಬಿಡುಗಡೆಯಾಗುವ ಕೆಮಿಕಲ್ ನಿಂದಾಗಿ ಹತ್ತಿರದಲ್ಲಿರುವ ವಸ್ತುಗಳು ಸಹ ಬೇಗನೆ ಹಾಳಾಗುತ್ತವೆ. ಆದುದರಿಂದ ಬಾಳೆಹಣ್ಣನ್ನು ಡ್ರೈ ಆಗಿರುವ ಜಾಗದಲ್ಲಿ ಇಟ್ಟರೆ ಉತ್ತಮ. 

310

ಕೆಲವರು ಸೇಬು ಹಣ್ಣನ್ನು ಸಹ ಫ್ರಿಜ್ ನಲ್ಲಿಡುತ್ತಾರೆ. ಬೀಜವಿರುವ ಇನ್ನು ಕೆಲವು ಹಣ್ಣುಗಳನ್ನು ಸಹ ಫ್ರಿಜ್ ನಲ್ಲಿ ಇಡಲೇಬಾರದು. ಕಡಿಮೆ ಟೆಂಪರೇಚರ್ ಇರುವ ಕಡೆ ಸೇಬು ಹಣ್ಣಿನಲ್ಲಿ ಎಂಜಾಯಿಸಂ ಆಕ್ಟಿವ್ ಆಗುತ್ತದೆ. ಇದರಿಂದ ಸೇಬು ಬೇಗನೆ ಹಣ್ಣಾಗುತ್ತದೆ. 
 
410

ಇನ್ನು ಸಿಟ್ರಿಕ್ ಆಸಿಡ್ ಇರುವಂತಹ ಹಣ್ಣುಗಳಾದ ನಿಂಬೆಯನ್ನು ಸಹ ಕಡಿಮೆ ತಾಪಮಾನದಲ್ಲಿ ಇಡಬಾರದು. ಇದರಿಂದ ನಿಂಬೆಯ ಸಿಪ್ಪೆ ಬಾಡಲು ಆರಂಭಿಸುತ್ತದೆ. ಇದರಿಂದ ನಿಂಬೆ ಹಣ್ಣಿನ ರುಚಿ ಕೆಡುತ್ತದೆ. ಅಷ್ಟೇ ಅಲ್ಲ ನಿಂಬೆ ರಸವೂ ಒಣಗುತ್ತದೆ. 

510

ಸೌತೆಕಾಯಿಯನ್ನು ಫ್ರಿಜ್ ನಲ್ಲಿ ಇಟ್ಟರೆ ಅದು ಪೂರ್ತಿಯಾಗಿ ಬಾಡುತ್ತದೆ. ಇದು ತಿನ್ನಲು ಸ್ವಾಧ ಹೀನವಾಗಿರುತ್ತದೆ. ಜೊತೆಗೆ ಇದು ಎರಡು ಮೂರು ದಿನದಲ್ಲೇ ಹಾಳಾಗುತ್ತದೆ. ಆದುದರಿಂದ ಇದನ್ನು ಫ್ರಿಜ್ ಹೊರಗೆಯೇ ಸ್ಟೋರ್ ಮಾಡಿ ಇಡಬೇಕು. 

610

ಬ್ರೆಡ್ ನ್ನು ಫ್ರಿಜ್ ನಲ್ಲಿ ಇಡುವ ತಪ್ಪನ್ನು ನೂರರಲ್ಲಿ 99 ಜನ ಮಾಡುತ್ತಾರೆ. ಫ್ರಿಜ್ ನಲ್ಲಿ ಇಡುವುದರಿಂದ ಬ್ರೆಡ್ ಒಣಗುತ್ತದೆ. ಅದರ ಬದಲಾಗಿ ನೀವು ಇದನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಫ್ರೀಜರ್ ನಲ್ಲಿ ಇಟ್ಟರೆ, ತಿನ್ನುವ ಸ್ವಲ್ಪ ಮುನ್ನ ಅದನ್ನು ಹೊರ ತೆಗೆದು ನಂತರ ಟೋಸ್ಟ್ ಮಾಡಿ ಸೇವಿಸಿ. 

710

ಬೆಳ್ಳುಳ್ಳಿಯನ್ನು ಫ್ರಿಜ್ ನಲ್ಲಿಟ್ಟರೆ ಅದು ಮೊಳಕೆ ಬರುತ್ತದೆ. ಜೊತೆಗೆ ಇದು ಕೊಳೆತು ಹೋಗುವ ಸಾಧ್ಯತೆ ಇದೆ. ನೀವು ಬೆಳ್ಳುಳ್ಳಿಯನ್ನು ಈರುಳ್ಳಿ ಜೊತೆ ಇಡಬಹುದು. 

810

ಈರುಳ್ಳಿಯನ್ನು ಫ್ರಿಜ್ ನಲ್ಲಿ ಇಡಬಾರದು ಅನ್ನೋದಕ್ಕೆ ಹಲವಾರು ಕಾರಣಗಳಿವೆ. ಇದರಿಂದ ಫ್ರಿಜ್ ನಿಂದ ವಾಸನೆ ಬರುತ್ತದೆ. ಇನ್ನೊಂದು ಇದನ್ನು ಫ್ರಿಜ್ ನಲ್ಲಿ ಇಡುವುದರಿಂದ ಬೇಗನೆ ಹಾಳಾಗುತ್ತದೆ. ಆದುದರಿಂದ ಹೊರಗಡೆ ಕತ್ತಲಿನ ಜಾಗದಲ್ಲಿ ಸ್ಟೋರ್ ಮಾಡಿ. 

910

ಆಲೂಗಡ್ಡೆಯನ್ನು ಫ್ರಿಜ್ ನಲ್ಲಿಡುವುದರಿಂದ ಇದರಲ್ಲಿರುವ ಸ್ಟಾರ್ಚ್ ಸಕ್ಕರೆಯಾಗಿ ಬದಲಾಗುತ್ತದೆ. ಇದರಿಂದ ಆಲೂಗೆಡ್ಡೆಯ ಟೇಸ್ಟ್ ಬದಲಾಗುತ್ತದೆ. ಆಲೂಗಡ್ಡೆಯನ್ನು ಫ್ರಿಜ್ ನಲ್ಲೂ ಇಡಬಾರದು, ಬಿಸಿಲಿನಲ್ಲೂ ಇಡಬಾರದು. ನೆರಳಿನಲ್ಲಿ ಇಡಬೇಕು. ಜೊತೆಗೆ ಪ್ಲಾಸ್ಟಿಕ್ ನಲ್ಲಿ ಇಡಬಾರದು. 

1010

ಕಲ್ಲಂಗಡಿ ಹಣ್ಣನ್ನು ಯಾವತ್ತೂ ಫ್ರಿಜ್ ನಲ್ಲಿ ಇಡಬೇಡಿ. ಯಾಕೆಂದರೆ ಇದರಲ್ಲಿರುವ ಆಂಟಿ ಓಕ್ಸಿಡೆಂಟ್ ಫ್ರಿಜ್ ನಲ್ಲಿಡುವುದರಿಂದ ಹಾಳಾಗುತ್ತದೆ. ಜೊತೆಗೆ ಇದರಲ್ಲಿರುವ ನೀರಿನ ಅಂಶ ಸಹ ಕಡಿಮೆಯಾಗುತ್ತದೆ. 

click me!

Recommended Stories