ಫ್ರೈ ಮಾಡುವಾಗ ಮಸಾಲೆ ಬೇರೆಯಾಗದಂತೆ ಕ್ರಿಸ್ಪಿ ಚಿಕನ್ 65ಗೆ ಮ್ಯಾರಿನೇಟ್ ಮಾಡುವ Authentic ವಿಧಾನ

Published : Apr 16, 2026, 01:17 PM IST

ಮನೆಯಲ್ಲಿ ಚಿಕನ್ 65 ಮಾಡುವಾಗ ಎಣ್ಣೆಯಲ್ಲಿ ಮಸಾಲೆ ಬೇರ್ಪಡುವ ಸಮಸ್ಯೆಗೆ ಈ ಲೇಖನ ಪರಿಹಾರ ನೀಡುತ್ತದೆ. ಹೋಟೆಲ್ ಶೈಲಿಯ ರುಚಿಕರವಾದ ಚಿಕನ್ 65 ತಯಾರಿಸಲು ಬೇಕಾದ ಸಾಮಾಗ್ರಿಗಳು ಮತ್ತು ಮಸಾಲೆ ಬೇರೆಯಾಗದಂತೆ ಚಿಕನ್ ಮ್ಯಾರಿನೇಟ್ ಮಾಡುವ ಹಂತ-ಹಂತದ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

PREV
15
ಚಿಕನ್ 65

ಹೋಟೆಲ್‌ಗಳಲ್ಲಿ ಸಿಗುವ ಚಿಕನ್ 65ಗೂ ಮತ್ತು ಮನೆಯಲ್ಲಿ ತಯಾರಿಸುವ ವಿಧಾನ ತುಂಬಾ ವಿಭಿನ್ನವಾಗಿರುತ್ತದೆ. ಚಿಕನ್ ಕಾದ ಎಣ್ಣೆಗೆ ಹಾಕುತ್ತಿದ್ದಂತೆ ಮಸಾಲೆ ಮತ್ತು ಮಾಂಸ ಬೇರೆ ಬೇರೆಯಾಗುತ್ತದೆ. ಎಣ್ಣೆಯಲ್ಲಿ ಚಿಕನ್ ಪೀಸ್ ಬೀಳುತ್ತಿದ್ದಂತೆ ಮಸಾಲೆ ಬೇರ್ಪಟ್ಟು, ಖಾದ್ಯದ ರುಚಿಯೆಲ್ಲಾ ವೇಸ್ಟ್ ಆಗುತ್ತದೆ. ಚಿಕನ್ 65ಗೆ ಅಂಥೆಟಿಕ್‌ ಆಗಿ ಹೇಗೆ ಮ್ಯಾರಿನೇಟ್ ಮಾಡಬೇಕು ಎಂದು ನೋಡೋಣ ಬನ್ನಿ.

25
ಚಿಕನ್ ಮ್ಯಾರಿನೇಟ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಚಿಕನ್, ಮೊಸರು, ಗರಂ ಮಸಾಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೋತಂಬರಿ ಪೇಸ್ಟ್, ಅರಿಶಿನ ಪುಡಿ, ಕಾರ್ನ್ ಫ್ಲೋರ್, ಅಚ್ಚಖಾರದ ಪುಡಿ, ಮೊಟ್ಟೆ, ಅಡುಗೆ ಎಣ್ಣೆ, ಬಿಳಿ ಎಳ್ಳು, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು

35
ಚಿಕನ್ ಮ್ಯಾರಿನೇಟ್ ಮಾಡುವ ವಿಧಾನ

ಮೊದಲಿಗೆ ತೊಳೆದಿಟ್ಟುಕೊಂಡಿರುವ ಚಿಕನ್ ಅಗಲವಾದ ಬೌಲ್‌ಗೆ ಹಾಕಿಕೊಳ್ಳಿ. ಈಗ ಗರಂ ಮಸಾಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೋತಂಬರಿ ಪೇಸ್ಟ್, ಅರಿಶಿನ, ಕಾರ್ನ್ ಫ್ಲೋರ್, ಅಚ್ಚಖಾರದ ಪುಡಿ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಮೊಟ್ಟೆ ಮತ್ತು ಕೊಂಚ ಅಡುಗೆಎಣ್ಣೆ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

45
30 ನಿಮಿಷ

ಕೊನೆಯದಾಗಿ ಗಟ್ಟಿ ಮೊಸರು, ಬಿಳಿ ಎಳ್ಳು, ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದನ್ನು ಕನಿಷ್ಠ 30 ನಿಮಿಷ ಫ್ರಿಡ್ಜ್‌ನಲ್ಲಿಟ್ಟುಕೊಳ್ಳಬೇಕು. ಫ್ರಿಡ್ಜ್‌ನಿಂದ ತೆಗೆದು ಬಿಸಿಎಣ್ಣೆ ಹಾಕಿ ಫ್ರೈ ಮಾಡಿಕೊಂಡರೆ ರುಚಿಯಾದ ಚಿಕನ್ 65 ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: ಉದುರು ಉದುರಾಗಿ ಟೇಸ್ಟಿಯಾಗಿ ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನ

55
ಈ ವಿಷಯಗಳು ಗಮನದಲ್ಲಿರಲಿ

ಮ್ಯಾರಿನೇಟ್ ಮಾಡುವ ಮುನ್ನ ಮಾಂಸವನ್ನು ಎರಡರಿಂದ ಮೂರು ಬಾರಿ ಬಿಸಿನೀರಿನಲ್ಲಿ ತೊಳೆದುಕೊಂಡು ಚಿಕ್ಕ ಚಿಕ್ಕ ಪೀಸ್‌ಗಳನ್ನಾಗಿ ಮಾಡಿಕೊಳ್ಳಿ. ಚಿಕ್ಕ ಪೀಸ್‌ಗಳನ್ನಾಗಿ ಮಾಡಿಕೊಳ್ಳೋದರಿಂದ ಮಸಾಲೆಯನ್ನು ಚಿಕನ್ ಹೀರಿಕೊಳ್ಳುತ್ತದೆ. ಲೆಗ್‌ಪೀಸ್ ಮ್ಯಾರಿನೇಟ್ ಮಾಡುವ ಚಾಕುವಿನಿಂದ ಮಾಂಸದ ಮೇಲೆ ಸಣ್ಣ ಸಣ್ಣ ಗೆರೆ ಮಾಡಿಕೊಂಡರೆ ಚೆನ್ನಾಗಿ ಬೇಯುತ್ತದೆ.

ಇದನ್ನೂ ಓದಿ : ಗರಿಗರಿ ಮಸಾಲೆ ವಡೆ ತಯಾರಿಸಲು ಹೋಟೆಲ್‌ನವರು ಬಳಸುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories