ಅಂತಾರಾಷ್ಟ್ರೀಯ ಕಾಫಿ ದಿನ: ಫಿಲ್ಟರ್ ಕಾಫಿಯಿಂದ ಕ್ಯಾಪಚೂನೋ ತನಕ..! ಆಹಾ ಕಾಫಿ ರುಚಿ

First Published | Oct 1, 2020, 12:20 PM IST

ಇಂದು ಅಂತಾರಾಷ್ಟ್ರೀಯ ಕಾಫಿ ದಿನ.. ಫಿಲ್ಟರ್ ಕಾಫಿಯಿಂದ ಕ್ಯಾಪಚೂನ್ ತನಕ ಎಷ್ಟೊಂದು ವಿಧ, ಎಷ್ಟೊಂದು ರುಚಿ, ಎಷ್ಟೊಂದು ವೈವಿಧ್ಯ..! ಬಾಯಲ್ಲಿ ನೀರೂರಿಸೋ ಹಿತವಾದ ಕಾಫಿ ಬಗ್ಗೆ ಇಲ್ಲಿ ನೋಡೋಣ ಬನ್ನಿ

ಅಫೋಗೆಟೊ: ಡಾರ್ಕ್ ಬ್ಲಾಕ್ ಕಾಫಿಯನ್ನು ವೆನಿಲ್ಲಾ ಐಸ್‌ಕ್ರೀಂ ಮೇಲೆ ಚೆಲ್ಲಲಾಗುತ್ತದೆ. ಇದನ್ನು ಕ್ಯಾಪಚೂನ್ ಕಪ್‌ನಲ್ಲಿ ಸರ್ವ ಮಾಡುತ್ತಾರೆ.
ಎಸ್ಪ್ರೆಸೋ ಅಮೆರಿಕಾನೋ: 100-150 ಎಂಎಲ್‌ ಬಿಸಿ ನೀರಿಗೆ ಡಾರ್ಕ್ ಕಾಫೀ ಬೆರೆಸಬೇಕು.ಇದನ್ನು ಕ್ಯಾಪಚೂನ್ ಕಪ್‌ನಲ್ಲಿ ಸರ್ವ್ ಮಾಡಲಾಗುತ್ತದೆ.
Tap to resize

ಕೆಫೆಲೆಟ್: 150-300 ಎಂಎಲ್‌ನ ಮಿಲ್ಕ್ ಕಾಫಿಯಾಗಿದೆ ಇದು. ಡಾರ್ಕ್ ಕಾಫಿ ಬಿಸಿ ಹಾಲಿಗೆ ಹಾಕಿ ಸ್ವಲ್ಪ ಹಾಲಿನ ನೊರೆ ಹಾಕಲಾಗುತ್ತದೆ. ಇದನ್ನು ಉದ್ದನೆ ಗ್ಲಾಸ್‌ನಲ್ಲಿ ಸರ್ವ್ ಮಾಡಲಾಗುತ್ತದೆ. ಫ್ಲೇವರ್ ಸಿರಪ್ ಕೂಡಾ ಸೇರಿಸಬಹುದು.
ಕೆಫೆ ಮೊಚಾ: ವಿಪ್ಪಡ್ ಕ್ರೀಮ್ ಮತ್ತು ಚಾಕಲೇಟ್ ಜೊತೆ ಇದನ್ನು ತಯಾರಿಸಲಾಗುತ್ತದೆ. ಇದಕ್ಕೆ ಚಾಕಲೇಟ್ ಸಾಸ್ ಬೆರೆಸಲಾಗುತ್ತದೆ. ನಂತರ ಬಿಸಿ ಹಾಲಿಗೆ ಡಾರ್ಕ್ ಕಾಫಿ ಬೆರೆಸಿ ಮಿಕ್ಸ್ ಮಾಡಲಾಗುತ್ತದೆ.
ಕೆಫೆ ಆಲೈಟ್: ಇದು ಫ್ರೆಂಚ್‌ನಲ್ಲಿ ಬೆಳಗಿನ ಜಾವ ಕುಡಿಯುವ ಕಾಫಿ. ಡರ್ರ್ಕಾ ರೋಸ್ಟೆಡ್ ಫಿಲ್ಟರ್ ಕಾಫಿ ಜೊತೆ ಬಿಸಿ ಹಾಲು ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ಬೌಲ್ ಅಥವಾ ದೊಡ್ಡ ಕಾಫಿ ಕಪ್‌ನಲ್ಲಿ ಸರ್ವ್‌ ಮಾಡಲಾಗುತ್ತದೆ.
ಕ್ಯಾಪಚೂನೊ: ಇದರಲ್ಲಿ ಡಾರ್ಕ್ ಕಾಫಿ ಮತ್ತು ಹಾಲಿನ ನೊರೆ ಇರುತ್ತದೆ. ಇದು 160-240 ಎಂಎಲ್ ಇರುತ್ತದೆ. ಇದನ್ನು ಕ್ಯಾಪಚೂನೋ ಕಪ್‌ನಲ್ಲಿಯೇ ಸರ್ವ್ ಮಾಡಲಾಗುತ್ತದೆ.
ಕೋಲ್ಡ್‌ ಬ್ರ್ಯೂ ಕಾಫಿ: ಇದೊಂದು ಸ್ಮೂತ್ ಕೋಲ್ಡ್ ಕಾಫಿ. ಫ್ರೆಶ್ ಕಾಫಿಯನ್ನು ತಣ್ಣಗಿನ ನೀರಿಗೆ ಬೆರೆಸಲಾಗುತ್ತದೆ.
ಎಸ್ಪ್ರೆಸೋ: ಇದು ಸಣ್ಣ ಕಪ್‌ನಲ್ಲಿ ಕೊಡುವ ಕಾಫಿ. 30 ಎಂಎಲ್ ಕಾಫಿಯಷ್ಟೇ ಇರುತ್ತದೆ. ಇದನ್ನು ಎಸ್ಪ್ರೆಸೋ ಕಪ್‌ನಲ್ಲಿ ಸರ್ವ್‌ ಮಾಡುತ್ತಾರೆ.
ಎಸ್ಪ್ರೆಸೋ ಕಾನ್ ಪನ್ನ: ಇದಕ್ಕೆ ಟಾಪ್‌ನಲ್ಲಿ ಕ್ರೀಂ ಇಟ್ಟು ಸರ್ವ್ ಮಾಡಲಾಗುತ್ತದೆ. ಇದನ್ನು ಎಸ್ಪ್ರೆಸೋ ಕಪ್‌ನಲ್ಲಿ ಸರ್ವ್ ಮಾಡಲಾಗುತ್ತದೆ.
ಎಸ್ಪ್ರೆಸೋ ಮೆಚಿಯಾಟೋ: 50 ಎಂಎಲ್‌ ಕಾಫಿ ಮೇಲೆ ಹಾಲಿನ ಕೆನೆ ಹಾಕಿ ನೀಡಲಾಗುತ್ತದೆ.
ಫ್ರೆಪ್ಪ್: ಡಾರ್ಕ್ ಕಾಫಿ ಜೊತೆ ಹಾಲು ಮತ್ತು ಐಸ್ ಬೆರೆಸಲಾಗುತ್ತದೆ. ಫ್ಲೇವರ್ ಸಿರಪ್ ಬೆರೆಸಬಹುದು. ಇದನ್ನು ಮಿಲ್ಸ್ ಮಾಡಿ ದೊಡ್ಡ ಗ್ಲಾಸ್‌ನಲ್ಲಿ ಸರ್ವ್ ಮಾಡಲಾಗುತ್ತದೆ.
ಫ್ರೀಕ್‌ಶೇಕ್: ಬೇರೆ ಬೇರೆ ವಿಧದ ಟಾಪಿಂಗ್ಸ್ ಜೊತೆ ಇದನ್ನು ಸರ್ವ್ ಮಾಡಲಾಗುತ್ತದೆ. ಕೋಲ್ಡ್ ಬ್ರ್ಯೂ ಕಾಫಿಯಿಂದ ಇದನ್ನು ತಯಾರಿಸಲಾಗುತ್ತದೆ.
ಡೊಪಿಯೋ: ಇದರಲ್ಲಿ ಎರಡು ಪಟ್ಟು ಡಾರ್ಕ್ ಕಾಫಿ ಬೆರೆಸಲಾಗುತ್ತದೆ.
ಫ್ಲಾಟ್ ವೈಟ್: ಇದರಲ್ಲಿ ಡಾರ್ಕ್ ಕಾಫಿ ಎರಡು ಪಟ್ಟು ಬೆರೆಸಲಾಗುತ್ತದೆ. ನಂತರ 150-240 ಹಾಲು ಬೆರೆಸಲಾಗುತ್ತದೆ.
ಐಸ್ಡ್ ಲೆಟ್: ಐಸ್, ತಣ್ಣಗಿನ ಹಾಲು, ಸ್ವಲ್ಪ ಸಕ್ಕರೆ ಸಿರಪ್ ಜೊತೆ ಮಿಕ್ಸ್ ಮಾಡಿ ಸರ್ವ್ ಮಾಡಲಾಗುತ್ತದೆ.
ಐಸ್ಡ್ ಮೋಚಾ: ಇದನ್ನು ಕೋಲ್ಡ್ ಕಾಫಿ ಮೋಚಾ ಎಂದೂ ಕರೆಯಲಾಗುತ್ತದೆ. ಐಸ್ ಬೆರೆಸಿ ಕಾಫಿ ಬೆರೆಸಲಾಗುತ್ತದೆ.
ಐರಿಷ್ ಕಾಫಿ: ಫಿಲ್ಟರ್ ಕಾಫಿ ಜೊತೆ ಐರಿಷ್ ವಿಸ್ಕಿ ಬೆರೆಸಲಾಗುತ್ತದೆ. ಮೇಲ್ಭಾಗದಲ್ಲಿ ಕ್ರೀಮ್ ಪದರ ಮಾಡಲಾಗುತ್ತದೆ.
ಲೆಟ್ ಮೆಚಿಟೋ: ಇದು ಸಂಪ್ರದಾಯಿ ಕಾಫಿಯಂತೆಯೇ ತಯಾರಿಸಲಾಗುತ್ತದೆ. ಇದರಲ್ಲಿ ದಪ್ಪಗಿನ ಹಾಲಿನ ನೊರೆಯ ಲೇಯರ್ ಮಾಡಲಾಗುತ್ತದೆ.
ಎಸ್ಪ್ರೆಸೋ ಲುಂಗೋ: ಡಾರ್ಕ್ ಕಾಫಿ ಹೆಚ್ಚಾಗಿ ಬೆರೆಸಿ ಮಾಡುವುದನ್ನು ಲುಂಗೋ ಎಸ್ಪ್ರೆಸೋ ಎನ್ನಲಾಗುತ್ತದೆ.
ರೆಸ್ಟ್ರೆಟ್ಟೋ: ಇದು ಅತ್ಯಂತ ಸಣ್ಣ ಕಾಫಿ. ಬರೀ 20 ಎಂಎಲ್ ಅಷ್ಟೇ ಇರುತ್ತದೆ.

Latest Videos

click me!