ಬಾಯಲ್ಲಿ ನೀರೂರಿಸುವಂತಹ ಸ್ಟೈಸಿ ಈರುಳ್ಳಿ ಉಪ್ಪಿನಕಾಯಿ ಫಟಾ ಫಟ್ ಅಂತ ಮಾಡಿ

Published : Jul 23, 2025, 06:01 PM ISTUpdated : Jul 23, 2025, 06:03 PM IST

ಈ ಮಸಾಲೆಯುಕ್ತ ಉಪ್ಪಿನಕಾಯಿಯೊಂದು ನಿಮ್ಮ ಜೊತೆಗಿದ್ದರೆ ಸಾಕು …ನೀವು ತಿನ್ನುವ ಫುಡ್‌ ಅದೆಷ್ಟೇ ಕೆಟ್ಟದಾಗಿರಲಿ, ಅದಕ್ಕೆ ಹೆಚ್ಚಿನ ರುಚಿ ಸೇರಿಸುತ್ತದೆ.

PREV
16

Instant Onion Pickle: ಮೊಸರನ್ನ, ತಿಳಿ ಸಾರು ಅನ್ನ, ಸಪ್ಪೆ ಅನ್ನ, ಅಷ್ಟೇ ಏಕೆ ಡ್ರಿಂಕ್ಸ್ ಮಾಡೋರ್ಗೂ ನೆಂಚಿಕೊಳ್ಳೋಕೆ ಬೇಕೆ ಬೇಕು ಉಪ್ಪಿನಕಾಯಿ. ಅದು ಯಾವುದೇ ಉಪ್ಪಿನಕಾಯಿ ಆಗಿರಲಿ ಆಹಾರದ ರುಚಿಯನ್ನು ಡಬಲ್ ಮಾಡುತ್ತದೆ. ಹಾಗಾಗಿ ಇಂದು ಧಿಡೀರ್ ಅಂತ ಈರುಳ್ಳಿ ಉಪ್ಪಿನಕಾಯಿ ಮಾಡೋದು ಹೇಗೆ ಅಂತ ನೋಡೋಣ.

26

ಈರುಳ್ಳಿಯಿಂದ ತಯಾರಿಸಿದ ಈ ಇನ್‌ಸ್ಟಂಟ್ ಉಪ್ಪಿನಕಾಯಿಯನ್ನ ನೀವು ಒಮ್ಮೆ ಪ್ರಯತ್ನಿಸಲೇಬೇಕು. ಏಕೆಂದರೆ ಇದು ರುಚಿಯಾಗಿರುವುದಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಇನ್ನೊಂದು ವಿಚಾರವೆಂದರೆ ಈ ಮಸಾಲೆಯುಕ್ತ ಉಪ್ಪಿನಕಾಯಿ ನೀವು ತಿನ್ನುವ ಫುಡ್‌ ಅದೆಷ್ಟೇ ಕೆಟ್ಟದಾಗಿರಲಿ, ಅದಕ್ಕೆ ಹೆಚ್ಚಿನ ರುಚಿ ಸೇರಿಸುತ್ತದೆ.

36

ಬಹುತೇಕರಿಗೆ ಉಪ್ಪಿನಕಾಯಿಯ ಹೆಸರು ಕೇಳಿದ್ರೇನೇ ಬಾಯಲ್ಲಿ ನೀರು ಬರುತ್ತೆ. ಹೆಚ್ಚಿನ ಜನರು ಅದು ಖಾರ ಇರುತ್ತೆ ಅಂತಾನೆ ಇಷ್ಟಪಡ್ತಾರೆ. ಕೆಲವು ಹೋಟೆಲ್‌ಗಳಲ್ಲಿ ಉಪ್ಪಿನಕಾಯಿಯನ್ನು ರೊಟ್ಟಿ ಅಥವಾ ಪರಾಠ ಜೊತೆ ಸರ್ವ್ ಮಾಡುವುದನ್ನು ನೀವು ನೋಡಿರಬಹುದು. ಸಾಮಾನ್ಯವಾಗಿ ಉಪ್ಪಿನಕಾಯಿಯನ್ನು ತಯಾರಿಸೋಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹುದುಗಿಸಿಡುವುದರಿಂದ ಹಿಡಿದು ಉಪ್ಪು, ಒಗ್ಗರಣೆ ಹಾಕುವ ತನಕ. ಆದರೆ ನಾವಿಂದು ಕಡಿಮೆ ಸಮಯದಲ್ಲಿ ಈರುಳ್ಳಿ ಉಪ್ಪಿನಕಾಯಿ ಮಾಡೋದು ಹೇಗೆಂದು ತಿಳಿಸಲಿದ್ದು, ಒಮ್ಮೆ ಟ್ರೈ ಮಾಡಿ..

46

ಬೇಕಾಗುವ ಪದಾರ್ಥಗಳು
ಈರುಳ್ಳಿ- 4-5
ಸಾಸಿವೆ ಎಣ್ಣೆ - 4 ಚಮಚ
ಸಾಸಿವೆ - 1 ಚಮಚ
ಫೆನ್ನೆಲ್ - 1 ಚಮಚ
ಕಲೋಂಜಿ - ಅರ್ಧ ಚಮಚ
ಅರಿಶಿನ ಪುಡಿ - ಅರ್ಧ ಚಮಚ
ಕೆಂಪು ಮೆಣಸಿನ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಂತೆ
ವಿನೆಗರ್ - 2 ಚಮಚ
ಇಂಗು - ಅರ್ಧ ಟೀಚಮಚ
ಆಮ್ಚೂರ್ ಪುಡಿ- ಒಂದು ಚಮಚ

56

ಈರುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ

ಮೊದಲಿಗೆ ಈರುಳ್ಳಿಯನ್ನು ಹೋಳುಗಳಾಗಿ ಕತ್ತರಿಸಿ. ಈಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದರಿಂದ ನೀರನ್ನು ತೆಗೆದು ಒಂದು ಬಟ್ಟಲಿನಲ್ಲಿ ಇರಿಸಿ. ಈಗ ಇದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ಈಗ ಅದಕ್ಕೆ ಆಮ್ಚೂರ್ ಪುಡಿಯನ್ನು ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

66

ಈಗ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಸಾಸಿವೆ, ಕಲೋಂಜಿ ಮತ್ತು ಇಂಗು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಸೋಂಪು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಈರುಳ್ಳಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಕೊನೆಯಲ್ಲಿ ವಿನೆಗರ್ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಇನ್‌ಸ್ಟಂಟ್ ಈರುಳ್ಳಿ ಉಪ್ಪಿನಕಾಯಿ ರೆಡಿಯಾಗಿದೆ. ಇದನ್ನು ರೋಟಿ ಅಥವಾ ಪರಾಠದೊಂದಿಗೆ ಟ್ರೈ ಮಾಡಿದರೆ ಸೂಪರ್ಬ್ ಆಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories