Published : Jul 22, 2025, 12:15 PM ISTUpdated : Jul 22, 2025, 03:32 PM IST
Mixed Vegetable Curry Recipe: ಬೆಳಗ್ಗೆ ತಿಂಡಿ ಏನು ಮಾಡ್ಬೇಕೆಂಬ ಯೋಚನೆ, ರಾತ್ರಿ ಊಟಕ್ಕೆ ಯಾವ ಸಾಂಬಾರ್ ಮಾಡ್ಬೇಕೆಂಬ ಗೊಂದಲ. ಈ ಮಿಶ್ರ ತರಕಾರಿ ಕರಿ ಚಪಾತಿ ಮತ್ತು ಅನ್ನಕ್ಕೆ ಒಳ್ಳೆಯ ಕಾಂಬಿನೇಷನ್. ಕಡಿಮೆ ಸಮಯದಲ್ಲಿ ರುಚಿಕರವಾದ ಕರಿ.
ಬೆಳಗ್ಗೆ ತಿಂಡಿ ಏನು ಮಾಡೋದು ಅಂತ ಒಂದು ಯೋಚನೆ ಆದ್ರೆ, ರಾತ್ರಿ ಊಟಕ್ಕೆ ಯಾವ ಸಾಂಬಾರ್ ಮಾಡಬೇಕು ಅನ್ನೋದು ಮತ್ತೊಂದು ಗೊಂದಲ ಆಗಿರುತ್ತದೆ. ಬೆಳಗ್ಗೆ, ಮಧ್ಯಾಹ್ನಕ್ಕಂತೆ ಅವಸರದಲ್ಲೊಂದು ತಿಂಡಿ, ಪುಲಾವ್ ಮಾಡಲಾಗುತ್ತದೆ. ರಾತ್ರಿ ಊಟಕ್ಕೆ ಮನೆಯವರೆಲ್ಲಾ ಏನಾದ್ರು ಸ್ಪೆಷಲ್ ಇರುತ್ತೆ ಅಂತ ಕಾಯುತ್ತಿರುತ್ತಾರೆ.
26
ಟು ಇನ್ ಒನ್ ಕರ್ರಿ
ರಾತ್ರಿ ಊಟಕ್ಕೆ ಚಪಾತಿ ಅಥವಾ ರೊಟ್ಟಿಗೆ ಪಲ್ಯ, ಅನ್ನಕ್ಕೆ ಸಾಂಬಾರ್ ಮಾಡಲು ತುಂಬಾ ಸಮಯ ಬೇಕಾಗುತ್ತದೆ. ಈ ರೀತಿಯಾಗಿ ವೆಜಿಟೇಬಲ್ ಮಿಕ್ಸ್ ಕರ್ರಿ ಮಾಡಿದ್ರೆ ಚಪಾತಿಗೂ ಮತ್ತು ಅನ್ನಕ್ಕೂ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಮನೆಯಲ್ಲಿರೋ ಎಲ್ಲಾ ತರಕಾರಿ ಬಳಸಿಕೊಂಡು ಈ ಕರ್ರಿ ಮಾಡಬಹುದಾಗಿದೆ. ಕಡಿಮೆ ಸಮಯದಲ್ಲಿಯೇ ಈ ಕರ್ರಿ ಮಾಡಬಹುದಾಗಿದೆ.
36
ವೆಜಿಟೇಬಲ್ ಕರ್ರಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಮಿಶ್ರ ತರಕಾರಿ: ಒಂದು ಕಪ್, ಟೊಮೆಟೋ: 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಟೀ ಸ್ಪೂನ್, ಎಣ್ಣೆ: 2 ಟೀ ಸ್ಪೂನ್, ಸಾಸವೆ: 1/2 ಟೀ ಸ್ಪೂನ್, ಕರೀಬೇವು: 6 ರಿಂದ 8 ಎಲೆ, ಜೀರಿಗೆ: 1/2 ಟೀ ಸ್ಪೂನ್, ತೊಗರಿ ಬೇಳೆ: 50 ಗ್ರಾಂ, 1/2 ಟೀಸ್ಪನ್ ಅರಿಶಿನ ಪುಡಿ, ಅಚ್ಚ ಖಾರದ ಪುಡಿ: 2 ಟೀ ಸ್ಪೂನ್, ಧನಿಯಾ ಪುಡಿ: 1 ಟೀ ಸ್ಪೂನ್, ಗರಂ ಮಸಾಲ: 1/2 ಟೀ ಸ್ಪೂನ್, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು
ಮೊದಲಿಗೆ ಮನೆಯಲ್ಲಿರುವ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. (ಈರುಳ್ಳಿ, ಬೀನ್ಸ್, ಆಲೂಗಡ್ಡೆ, ಕ್ಯಾರಟ್, ಬೀಟ್‌ರೂಟ್, ಬದನೆಕಾಯಿ, ಕ್ಯಾಬೇಜ್, ನುಗ್ಗೆಕಾಯಿ, ಹೂಕೋಸು) ನಂತರ ಟೊಮೆಟೋವನ್ನು ಸಣ್ಣದಾಗಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ. ಈಗ ಕತ್ತರಿಸಿಕೊಂಡಿರುವ ತರಕಾರಿ ಮತ್ತು ತೊಗರಿ ಬೇಳೆ ಸೇರಿಸಿಕೊಂಡು ಕುಕ್ಕರ್‌ನಲ್ಲಿ ಒಂದು ವಿಷಲ್ ಕೂಗಿಸಿಕೊಳ್ಳಿ.
56
ಕರ್ರಿ ಥಿಕ್ ಆಗಲು ಬೇಳೆ ಬಳಸಿ
ಈಗ ಒಲೆ ಆನ್ ಮಾಡ್ಕೊಂಡು ಅಗಲವಾದ ಪಾತ್ರೆಯನ್ನು ಇರಿಸಿಕೊಳ್ಳಿ. ಇದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸವೆ, ಜೀರಿಗೆ ಹಾಕಿಕೊಳ್ಳಿ. ಈಗ ಇದಕ್ಕೆ ಬೇಯಿಸಿಕೊಂಡಿರುವ ತರಕಾರಿ ಮತ್ತು ತೊಗರಿಬೇಳೆ ಸೇರಿಸಿ 5 ರಿಂದ 10 ನಿಮಿಷ ಸಾಫ್ಟ್ ಆಗೋವರೆಗೂ ಬೇಯಿಸಿಕೊಳ್ಳಿ. ಈಗ ಇದಕ್ಕೆ ರುಬ್ಬಿಕೊಂಡಿರುವ ಟೊಮೆಟೋ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
66
ಕೋತಂಬರಿ ಸೊಪ್ಪು ಬಳಸಿ ಅಲಂಕರಿಸಿ ಸರ್ವ್ ಮಾಡಿ
ತದನಂತರ ಅರಿಶಿನ ಪುಡಿ, ಅಚ್ಚ ಖಾರ, ಧನಿಯಾ ಪುಡಿ, ಗರಂ ಮಸಾಲೆ ಪುಡಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ 10 ರಿಂದ 15 ನಿಮಿಷ ಬೇಯಿಸಿಕೊಂಡ್ರೆ ರುಚಿಯಾದ ವೆಜಿಟೇಬಲ್ ಕರ್ರಿ ಸವಿಯಲು ಸಿದ್ಧ. ಕೊನೆಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ.