ಭಾರತದ 10 ಫೇಮಸ್ ಸ್ವೀಟ್ಸ್ ಇಲ್ಲಿವೆ! ನಿಮಗೆ ಯಾವುದು ಇಷ್ಟ? ಇವೆಲ್ಲ ತಿಂದಿದ್ದೀರಾ?

ಭಾರತದ ಫೇಮಸ್ ಸ್ವೀಟ್ಸ್: ಭಾರತದ ಕೆಲವು ಫೇಮಸ್ ಸ್ವೀಟ್ಸ್! ಗುಲಾಬ್ ಜಾಮೂನ್‌ನಿಂದ ಹಿಡಿದು ಕ್ಯಾರೆಟ್ ಹಲ್ವಾ ವರೆಗೆ, ಪ್ರತಿಯೊಂದು ಸ್ವೀಟ್ ತನ್ನದೇ ಆದ ರುಚಿಯನ್ನು ಹೊಂದಿದೆ. ನೀವು ಇವೆಲ್ಲವನ್ನೂ ಟ್ರೈ ಮಾಡಿದ್ದೀರಾ?

Indias Top 10 Most Popular and Delicious Sweets  gow

ಗುಲಾಬ್ ಜಾಮೂನ್: ಗುಲಾಬ್ ಜಾಮೂನ್ ಅನ್ನು ಖೋವಾದಿಂದ ತಯಾರಿಸಲಾಗುತ್ತದೆ. ಇದನ್ನು ಚೆಂಡಿನ ಆಕಾರದಲ್ಲಿ ಮಾಡಿ, ಡೀಪ್ ಫ್ರೈ ಮಾಡಿ ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ. ಇದನ್ನು ಎಲ್ಲರೂ ಇಷ್ಟಪಡ್ತಾರೆ.

Indias Top 10 Most Popular and Delicious Sweets  gow

ರಸಗುಲ್ಲಾ: ರಸಗುಲ್ಲಾ, ಪಶ್ಚಿಮ ಬಂಗಾಳದ ಫೇಮಸ್ ಸ್ವೀಟ್. ಇದನ್ನು ಚೇನಾ (ಹಾಲಿನಿಂದ ಮಾಡಿದ ಪನೀರ್) ಮತ್ತು ಸಕ್ಕರೆ ಪಾಕದಿಂದ ತಯಾರಿಸಲಾಗುತ್ತದೆ. ಇದು ಸಿಹಿ ಸಿಹಿಯಾಗಿರುತ್ತದೆ.


ಜಲೇಬಿ: ಇದು ಒಂದು ಫೇಮಸ್ ಸ್ಟ್ರೀಟ್ ಫುಡ್. ಮೊದಲು ಇದರ ಹಿಟ್ಟನ್ನು ತಯಾರಿಸಿ, ನಂತರ ಕೇಸರಿ ಪಾಕದಲ್ಲಿ ಅದ್ದಿ ತಿನ್ನಲಾಗುತ್ತದೆ.

ಕೇಸರಿ ಬರ್ಫಿ: ಕೇಸರಿ, ಸಕ್ಕರೆ ಮತ್ತು ತುಪ್ಪದಿಂದ ಮಾಡಿದ ಸಿಹಿ. ಇದನ್ನು ಸಾಮಾನ್ಯವಾಗಿ ಹಬ್ಬಗಳಲ್ಲಿ ಗಿಫ್ಟ್ ಆಗಿ ನೀಡುತ್ತಾರೆ.

ಲಡ್ಡು: ಈ ಸಿಹಿಯನ್ನು ಬೇಸನ್, ರವೆ ಜೊತೆಗೆ ಹಲವು ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಇದನ್ನು ದೇಶಾದ್ಯಂತ ಎಲ್ಲರೂ ಇಷ್ಟಪಡುತ್ತಾರೆ.

ಮೈಸೂರು ಪಾಕ್: ಮೈಸೂರು ಪಾಕ್ ಕರ್ನಾಟಕದ ಒಂದು ಫೇಮಸ್ ಸ್ವೀಟ್. ಈ ಮೈಸೂರು ಪಾಕ್ ಅನ್ನು ತುಪ್ಪ, ಸಕ್ಕರೆ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ರುಚಿಗೆ ಹೆಸರುವಾಸಿ.

ಬರ್ಫಿ: ಬರ್ಫಿ ಒಂದು ಸಿಹಿ. ಇದನ್ನು ತೆಂಗಿನಕಾಯಿ, ಪಿಸ್ತಾ ಮತ್ತು ಚಾಕೊಲೇಟ್‌ನಿಂದ ತಯಾರಿಸುತ್ತಾರೆ. ಇದು ಸಾಮಾನ್ಯವಾಗಿ ಚೌಕಾಕಾರದಲ್ಲಿ ಸಿಗುತ್ತದೆ.

ಮಾಲ್ಪುವಾ: ಹಿಟ್ಟು ಮತ್ತು ತೆಂಗಿನಕಾಯಿಯಿಂದ ಮಾಡಿದ ಸಾಂಪ್ರದಾಯಿಕ ಪ್ಯಾನ್‌ಕೇಕ್‌ನಂತಹ ಸಿಹಿ. ಮಾಲ್ಪುವಾವನ್ನು ಡೀಪ್ ಫ್ರೈ ಮಾಡಿ ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. ಇದನ್ನು ಹಬ್ಬಗಳಲ್ಲಿ ಮಾಡ್ತಾರೆ.

ಗಾಜರ್ ಕಾ ಹಲ್ವಾ: ಗಾಜರ್ ಕಾ ಹಲ್ವಾವನ್ನು ಚಳಿಗಾಲದಲ್ಲಿ ಮಾಡ್ತಾರೆ. ತುರಿದ ಕ್ಯಾರೆಟ್ ಅನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೇಯಿಸಲಾಗುತ್ತದೆ. ಇದು ಎಲ್ಲರ ಫೇವರಿಟ್.

ಪಂಜಿರಿ: ಗೋಧಿ ಹಿಟ್ಟು, ತುಪ್ಪ, ಸಕ್ಕರೆ ಮತ್ತು ಡ್ರೈ ಫ್ರೂಟ್ಸ್‌ನಿಂದ ಮಾಡಿದ ಪೌಷ್ಟಿಕ ಸಿಹಿ. ಪಂಜಿರಿಯನ್ನು ಭಾರತೀಯ ಮನೆಗಳಲ್ಲಿ ಪ್ರಸಾದವಾಗಿ ತಿನ್ನಲಾಗುತ್ತದೆ.

Latest Videos

vuukle one pixel image
click me!