1. ಹಿರಿಯರ ಗೌರವಕ್ಕೆ ಎರಡು ಹನಿ ಮದ್ಯ :
ಯಾವುದೇ ಹೊಸ ಕೆಲಸ ಮಾಡೋವಾಗ ಅಥವಾ ಮುಖ್ಯವಾದ ನಿರ್ಧಾರ ತಗೊಳ್ಳೋ ಮುಂಚೆ ತುಂಬಾ ಜನ ದೇವರುಗಳ ಜೊತೆ ಹಿರಿಯರನ್ನು ನೆನಪು ಮಾಡ್ಕೊಳ್ತಾರೆ. ದೇವರಿಗೆ ಪೂಜೆ ಮಾಡಿ ಹಿರಿಯರಿಗೆ ನಮನ ಸಲ್ಲಿಸ್ತಾರೆ. ಇದನ್ನ ಮದ್ಯ ಕುಡಿಯೋ ಟೈಮ್ನಲ್ಲೂ ತುಂಬಾ ಜನ ಫಾಲೋ ಮಾಡ್ತಾರಂತೆ.
ನಮ್ಮ ಜನ, ಮುಖ್ಯವಾಗಿ ಕೆಲವು ಸ್ಪೆಷಲ್ ದಿನಗಳಲ್ಲಿ ತಮ್ಮ ಹಿರಿಯರಿಗೆ ಕಳ್ಳು, ಮದ್ಯ ಅರ್ಪಿಸ್ತಾರೆ. ಅವರ ಸಮಾಧಿ ಹತ್ರ ಮದ್ಯದ ಬಾಟಲ್ಸ್ ಇಡ್ತಾರೆ. ಹೀಗೇ ಕುಡಿಯೋವಾಗ ಕೂಡ ಹಿರಿಯರನ್ನು ನೆನಪು ಮಾಡ್ಕೊಂಡು ಎರಡು ಹನಿ ಅವರಿಗೋಸ್ಕರ ನೆಲಕ್ಕೆ ಚೆಲ್ತಾರಂತೆ ಕುಡುಕರು.
2. ದೃಷ್ಟಿ ತಗಲಬಾರ್ದು ಅಂತ ಎರಡು ಮದ್ಯದ ಹನಿ :
ಚಿಕ್ಕ ಮಕ್ಕಳಿಗೆ ತಾಯಿ ತುತ್ತು ತಿನ್ನಿಸಿದ ಮೇಲೆ ಕೊನೆಗೆ ಒಂದು ತುತ್ತು ಮಗು ಸುತ್ತ ತಿರುಗಿಸಿ ಎಸೆಯುತ್ತಾಳೆ. ಅಂದ್ರೆ ತಮ್ಮ ಮಗುವಿಗೆ ದೃಷ್ಟಿ ತಗಲಬಾರ್ದು ಅಂತ ತುಂಬಾ ತಾಯಂದಿರು ಹಾಗೆ ಮಾಡ್ತಾರೆ. ಇದನ್ನ ಕುಡುಕರು ಕೂಡ ಫಾಲೋ ಮಾಡ್ತಾರಂತೆ. ಕುಡಿತಾ ಇರಬೇಕಾದ್ರೆ ಯಾರ ದೃಷ್ಟಿ ತಮಗೆ ತಗಲಬಾರ್ದು ಅಂತ ಎರಡು ಹನಿ ಹಾಗೆ ನೆಲಕ್ಕೆ ಚೆಲ್ಲುತ್ತಾರಂತೆ. ಅಂದ್ರೆ ದೃಷ್ಟಿ ತಗಲಿದ್ರೆ ಎಲ್ಲಿ ತಮ್ಮ ಕೆಪಾಸಿಟಿ ಕಮ್ಮಿ ಆಗುತ್ತೋ... ಎಲ್ಲಿ ಜಾಸ್ತಿ ಕುಡಿಯೋಕೆ ಆಗಲ್ವೋ ಅನ್ನೋ ಭಯ ಇರಬಹುದು.
ಕೆಲವರು ಜಾಸ್ತಿ ಕುಡಿದು ವಾಂತಿ ಮಾಡ್ಕೊಳ್ತಾರೆ... ಇಂಥೋರು ಕೂಡ ದೃಷ್ಟಿ ತಗಲಿದ್ದಕ್ಕೆ ಹೀಗಾಯ್ತು ಅಂತ ವಾದಿಸ್ತಾರೆ. ದೇಹ ತಡ್ಕೊಳ್ಳೋಕೆ ಆಗ್ದೆ ಕುಡಿಯೋದ್ರಿಂದ ವಾಂತಿ ಆಗುತ್ತೆ... ಅಷ್ಟೇ ಹೊರತು ದೃಷ್ಟಿ ಅನ್ನೋದು ಇರಲ್ಲ. ಆದ್ರೆ ಕುಡುಕರು ತಮಗೆ ಮದ್ಯ ಹಿಡಿಸಲಿಲ್ಲ ಅಂದ್ರೆ ಅದನ್ನು ಒಪ್ಪಿಕೊಳ್ಳೋದೆ ಇಲ್ಲ.