ನೀವು ವೆಜ್ ಮಾತ್ರ ತಿನ್ನೋದಾ..? ಭಾರತದ ಸಸ್ಯಾಹಾರದಲ್ಲಿ ಶೇ.84ರಷ್ಟು ಅಪೌಷ್ಟಿಕತೆ..!

First Published | Nov 17, 2020, 10:58 AM IST

ವೆಜಿಟೇರಿಯನ್ ಆಗಿರೋದ್ರಿಂದ ಅದರದ್ದೇ ಆದ ಪ್ರಯೋಜನಗಳಿವೆ. ಆದರೆ ಅದೇ ಸಮಯದಲ್ಲಿ ನಿಮ್ಮ ದೇಹಕ್ಕೆ ಪ್ರೋಟೀನ್ ಕೊರತೆಯಾಗುತ್ತಿದೆ ಎಂಬುದು ನಿಮಗೆ ಗೊತ್ತಾ..?

ವೆಜ್‌ನಲ್ಲಿ ವೆರೈಟಿ ಆಹಾರವನ್ನೇನೋ ಸೇವಿಸುತ್ತೇವೆ. ಆದರೆ ಸಸ್ಯಹಾರಾ ಆಹಾರದಲ್ಲಿ ಪ್ರೊಟೀನ್ ಸರಿಯಾಗಿ ಪ್ರಮಾಣದಲ್ಲಿ ದೇಹ ಸೇರುತ್ತಿಲ್ಲ ಎಂಬುದು ಇತ್ತೀಚಿನ ಅಧ್ಯಯನದಲ್ಲಿ ಬಯಲಾಗಿದೆ.
ಭಾರತದಲ್ಲಿ ಸಸ್ಯಾಹಾರ ಸೇವಿಸುವವರಲ್ಲಿ ಶೇ 84ರಷ್ಟು ಅಪೌಷ್ಟಿಕತೆ ಕಂಡುಬಂದಿದೆ ಎಂದು ಭಾರತದ ಡಯೆಟಿಕ್ ಎಸೋಸಿಯೇಷನ್ ತಿಳಿಸಿದೆ. ಇದಕ್ಕೆ ಅರಿವಿನ ಕೊರತೆಯೇ ಕಾರಣವೆಂಬುದು ಇನ್ನೂ ವಿಶೇಷ.
Tap to resize

ಸುಮಾರು 70% ಜನರಲ್ಲಿ ಮಸಲ್ಸ್ ಬೆಳವಣಿಗೆಯೂ ಕ್ಷೀಣಿಸಿದೆ. ಕ್ಷೀಣ ಮಸಲ್ಸ್, ಪ್ರೊಟೀನ್ ಕೊರತೆಯೂ ಹೆಚ್ಚಾಗಿದೆ. ಭಾರತದಲ್ಲಿ ಶೇ.93ರಷ್ಟು ಜನರಿಗೆ ತಮ್ಮ ದೇಹಕ್ಕೆ ಬೇಕಾದ ಪ್ರೊಟೀನ್ ಕುರಿತ ಮಾಹಿತಿಯೇ ಇಲ್ಲ.
ಭಾರತದ ಸಸ್ಯಾಹಾರ ಪದ್ಧತಿ ಅತ್ಯಂತ ಕೆಟ್ಟ ಪರಿಣಾಮ ಬೀರಿದ್ದು ಸುಮಾರು 84% ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನು ಸುಮಾರು 65% ಮಾಂಸಾಹಾರಿಗಳೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಇಂತಹ ಆತಂಕಕಾರಿ ವಿಚಾರಗಳನ್ನು ಹೊರಹಾಕಿದ ಐಡಿಎ ಇದೀಗ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಅಭಿಯಾನ ಮಾಡಲು ತಯಾರಿ ನಡೆಸಿದೆ.
7 ದಿನಗಳ ಪ್ರೊಟೀನ್ ವೀಕ್‌ ಅನ್ನು ಆಚರಿಸಲಾಗುತ್ತಿದೆ. ಇದಕ್ಕೆ ಪ್ರೊಟೀನ್ ಫುಡ್ ನ್ಯೂಟ್ರಿಷನ್ ಅಭಿವೃದ್ಧಿ ಇಲಾಖೆಯೂ ಬೆಂಬಲ ನಿಡಲಿದೆ.
ನೀವು ವೆಜಿಟೇರಿಯನ್ ಆಗಿದ್ದುಕೊಂಡೇ ಪ್ರೊಟೀನ್ ಹೆಚ್ಚಿಸಿಕೊಳ್ಳೋಕೆ ಇಲ್ಲಿವೆ ಕೆಲವು ಸಲಹೆಗಳು.
ಹಾಲಿನ ಉತ್ಪನ್ನ: ಬೆಳಗ್ಗೆ ಒಂದು ಗ್ಲಾಸ್ ಹಾಲು ಕುಡಿಯಿರಿ. ನೀವು ಆಹಾರ ಸೇವಿಸುವಾಗೆಲ್ಲ ಮೊಸರನ್ನು ಸೇರಿಸಿಕೊಳ್ಳೋದನ್ನು ಅಭ್ಯಾಸ ಮಾಡಿ.
ಚೀಸ್, ಮಜ್ಜಿಗೆ ಇದನ್ನು ಬಳಸಿ. ವರ್ಕೌಟ್ ನಂತರ ತಂಪು ಮಜ್ಜಿಗೆಯೇ ನಿಮ್ಮ ಆಯ್ಕೆಯಾಗಿರಲಿ
ಪ್ರೊಟೀನ್ ಹೆಚ್ಚಿರೋ ಧಾನ್ಯ ಆಯ್ದು ಬಳಸಿಕೊಳ್ಳಿ: ರಾಗಿ, ಓಟ್ಸ್ ಹೆಚ್ಚಾಗಿ ಬಳಸೋದ್ರಿಂದ ಸುಲಭವಾಗಿ ಪ್ರೊಟೀನ್ ಪ್ರಮಾಣ ಹೆಚ್ಚಿಸಿಕೊಳ್ಳಬಹುದು.
ಹಸಿರು ಬಟಾಣಿ: ಭಾರತದ ಬಹಳಷ್ಟು ತರಕಾರಿ ಅಡುಗೆಯಲ್ಲಿ ಹಸಿರು ಬಟಾಣಿ ಬಳಸುವುದರಿಂದ ಇದನ್ನು ಮಿಸ್ ಮಾಡಲೇಬೇಡಿ. ಸಾಧ್ಯವಾದಷ್ಟು ಎಲ್ಲ ಅಡುಗೆಯಲ್ಲೂ ಇದನ್ನು ಬಳಸಿ.
ಒಂದು ಕಪ್ ಬಟಾಣಿಯಲ್ಲಿ ಸುಮಾರಿ 7 ಗ್ರಾಂ ಪ್ರೊಟೀನ್ ಲಭ್ಯವಿದೆ.
ಸ್ಥಳೀಯವಾಗಿ ಲಭ್ಯವಿರೋ ಹಳೆಯ ಆಹಾರ ಪದ್ಧತಿ ಧಾನ್ಯ ಬಳಸಿ: ನವಣೆ ಹಿಂದಿನ ಕಾಲದಿಂದಲೂ ಭಾರತದ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಧಾನ್ಯ. ಇದನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಿ
ಡ್ರೈ ಫ್ರೂಟ್ಸ್ & ನಟ್ಸ್: ಗೋಡಂಬಿ, ಪಿಸ್ತಾ, ಒಣದ್ರಾಕ್ಷಿ, ಬಾದಾಮಿಯನ್ನು ದಿನಕ್ಕೊಂದು ಮುಚ್ಟಿಯಷ್ಟು ತೆಗೆದುಕೊಂಡರೂ ದೇಹಕ್ಕೆ ಬೇಕಾಗುವಷ್ಟಾಯಿತು. 100 ಗ್ರಾಂ ಹುರಿದ ಗೋಡಂಬಿಯಲ್ಲಿ 15 ಗ್ರಾಂ ಪ್ರೊಟೀನ್ ಇರುತ್ತದೆ.
ಬೀಜಗಳಯ ಪ್ರೊಟೀನ್ ಪವರ್ ಹೌಸ್ ಇದ್ದಂತೆ. ಸನ್ಫ್ಲವರ್ ಬೀಜದಲ್ಲಿ 21 ಗ್ರಾಂ ಪ್ರೊಟೀನ್ ಇರುತ್ತದೆ.
ಸೋಯಾಬಿನ್ಸ್: ಇದು ಭಾರತೀಯ ಸಂಪ್ರದಾಯಿಕ ಅಡುಗೆಯಲ್ಲದಿದ್ದರೂ, ಸೋಯಾದವನ್ನು ನೀವು ಬಳಸಬಹುದು. ಒಂದು ಕಪ್ ಬೇಯಿಸಿದ ಸೋಯಾಬಿನ್ಸ್‌ನಲ್ಲಿ 28.5 ಗ್ರಾಂ ಪ್ರೊಟೀನ್ ಇದೆ.

Latest Videos

click me!