ನಾವು ಸೇವಿಸುವ ಆಹಾರ ನಮ್ಮ ಜೀವನದ ಮೇಲೂ ಬೀರುತ್ತೆ ಪ್ರಭಾವ
First Published | Nov 15, 2020, 7:00 PM ISTಸಾತ್ವಿಕ ಆಹಾರ, ಸಾತ್ವಿಕ ಗುಣ ಸಾತ್ವಿಕ ಜೀವನ. ಇವೆಲ್ಲವೂ ಒಂದಕ್ಕೊಂದು ಸಂಬಂಧಗಳಿಂದ ಕೂಡಿದೆ. ಸಾತ್ವಿಕ ಎಂದರೆ ಧನಾತ್ಮಕ ಮತ್ತು ಸಂತೋಷ. ಸಾತ್ವಿಕ ಗುಣ ನಾವು ಮಾಡುವ ಆಹಾರದಲ್ಲಿದ್ದರೆ ನಮ್ಮ ಜೀವನ ಸುಂದರ ವಾಗಿರುತ್ತದೆ. ಸಾತ್ವಿಕ ಗುಣಗಳು ಯಾವಾಗಲು ಧನಾತ್ಮಕವಾಗಿ ಆಲೋಚನೆ ಮಾಡುವಂತದ್ದು ಒಳ್ಳೆಯದನ್ನೇ ಮಾತಾಡುವುದು ಸತ್ಯಪರತೆ, ದೇವರ ಧ್ಯಾನ, ಅಸೂಯೆ ಇಲ್ಲದಿರುವುದು, ಮೋಸ, ಠಕ್ಕತನ ಇಲ್ಲದಿರುವುದು. ಬೇರೆಯವರ ಬಗ್ಗೆ ಒಳ್ಳೆಯದನ್ನೇ ಬಯಸುವುದು. ಇವೆಲ್ಲ ಸಾತ್ವಿಕ ಗುಣಗಳು.