ಕಿಚನ್‌ನಲ್ಲಿ exhaust fan ಇಲ್ವಾ? ಹೀಗ್ ಹೊಗೆ ಹೋಗಿಸಬಹುದು ನೋಡಿ

Suvarna News   | Asianet News
Published : Nov 25, 2020, 06:15 PM IST

ಅಡುಗೆ ಮನೆಯಲ್ಲಿ ಸುಲಭವಾಗಿ ಗಾಳಿಯಾಡುವ ವ್ಯವಸ್ಥೆ ಇರಬೇಕು. ಇಲ್ಲವಾದರೆ ಆಡುಗೆ ಮಾಡುವಾಗ ಉಂಟಾಗುವ ಹೊಗೆ ಮನೆಯಲ್ಲಿ ತುಂಬುತ್ತದೆ. ಅದ್ದರಿಂದ ಕಿಚನ್‌ನಲ್ಲಿ ಸಾಮಾನ್ಯವಾಗಿ ದೊಡ್ಡ ಕಿಟಿಕಿಗಳನ್ನು ಕಾಣುತ್ತೇವೆ. ಇನ್ನೂ ಕೆಲವರು ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವನ್ನು ಕಿಟಕಿಯ ಬಳಿ ಇಡುತ್ತಾರೆ. ಈಗ ಹೆಚ್ಚಾಗಿ ಅಡುಗೆ ಮನೆಗೆ exhaust fan ಅಳವಡಿಸುವುದು ಕಾಮನ್‌. ನಿಮ್ಮ ಮನೆ ಕಿಚನ್‌ನಲ್ಲಿ ಈ ವ್ಯವಸ್ಥೆ ಇಲ್ವಾ? ಯೋಚನೆ ಮಾಡಬೇಡಿ. ಇಲ್ಲಿದೆ ಹೊಗೆ ನಿವಾರಣೆಗೆ ಸರಳ ಟಿಪ್ಸ್‌.

PREV
110
ಕಿಚನ್‌ನಲ್ಲಿ   exhaust fan ಇಲ್ವಾ?  ಹೀಗ್ ಹೊಗೆ ಹೋಗಿಸಬಹುದು ನೋಡಿ

ಅಡುಗೆ ಮಾಡುವಾಗ ಅಡುಗೆಮನೆಯಲ್ಲಿ ಹೊಗೆ ತುಂಬುವ ಸಮಸ್ಯೆ ಬಹುತೇಕ ಎಲ್ಲ ಮನೆಯಲ್ಲೂ ಕಂಡುಬರುತ್ತದೆ. ಅಕಸ್ಮಾತ್‌ ಆಹಾರ ಸುಟ್ಟು ಹೋದರೆ, ಇಡೀ ಮನೆಯಲ್ಲಿ ಹೊಗೆಯ ಘಾಟು ತುಂಬುತ್ತದೆ.

210

ಅಡಿಗೆ ಹೊಗೆಯನ್ನು ತಪ್ಪಿಸಲು ಸಾಮಾನ್ಯವಾಗಿ exhaust fan ಆಳವಡಿಸುತ್ತಾರೆ. ಇದರ ಹೊರತಾಗಿಯೂ, ಕೆಲವು ಬಾರಿ ಮನೆಯಲ್ಲಿ ಹೊಗೆ ತುಂಬುತ್ತದೆ. ಕಿಚನ್ ಕಿಟಿಕಿಯಿಂದ ಸಹ ಸಹಾಯವಾಗುವುದಿಲ್ಲ. 

310

ವಾಸ್ತವವಾಗಿ, ಮನೆಯ ಇತರ ರೂಮ್‌ಗಳಲ್ಲಿ  ಫ್ಯಾನ್ ಆನ್‌ ಆಗಿರುವ ಕಾರಣದಿಂದ, ಹೊಗೆ ಇಡೀ ಮನೆಯಲ್ಲಿ ತುಂಬುತ್ತದೆ. ಈ ಹೊಗೆಯಿಂದಾಗಿ, ಮನೆಯ ಗೋಡೆಗಳ ಮೇಲೆ ಜಿಡ್ಡು ಸಂಗ್ರಹವಾಗುವ ಜೊತೆಗೆ ಮನೆಯವರ ಆರೋಗ್ಯ ಸಹ ಹದಗೆಡುತ್ತದೆ. 

410

ಈ ಹೊಗೆಯಿಂದಾಗಿ, ಕೆಲವರಿಗೆ ವಾಂತಿ, ತಲೆನೋವು ಅಥವಾ ದೇಹದಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಕೆಲವೊಮ್ಮೆ ಈ ಹೊಗೆ ದೇಹಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. 

510

ಲ್ಯಾವೆಂಡರ್ ಎಣ್ಣೆಯ ಸಹಾಯದಿಂದ ಮನೆಯಲ್ಲಿ ಹೊಗೆಯ ವಾಸನೆಯನ್ನು ಸುಲಭವಾಗಿ ತೆಗೆಯಬಹುದು. ಒಂದರಿಂದ ಎರಡು ಟೀ ಚಮಚ ಲ್ಯಾವೆಂಡರ್ ಎಣ್ಣೆಯನ್ನು ನೀರಿನಲ್ಲಿ  ಬೆರೆಸಿ ಅಡುಗೆಮನೆ ಮತ್ತು ಮನೆಯ ಎಲ್ಲಾ ಭಾಗಗಳಲ್ಲಿ ಸಿಂಪಡಿಸಿ.

610

 ಕೆಲವೇ ಗಂಟೆಗಳಲ್ಲಿ ಹೊಗೆ ಮತ್ತು ಘಾಟು ಕಡಿಮೆಯಾಗಿ ಲ್ಯಾವೆಂಡರ್ ಆಯಿಲ್‌ನಿಂದ ಮನೆ ಫ್ರೆಶ್‌ ಅನಿಸುತ್ತದೆ.

710

ಈರುಳ್ಳಿಯಿಂದ ಸಹ ಹೊಗೆಯ ವಾಸನೆಯನ್ನು ತೆಗೆದುಹಾಕಬಹುದು. ಈರುಳ್ಳಿ ಯಾವುದೇ ವಾಸನೆಯನ್ನಾದರೂ ಹೀರಿಕೊಳ್ಳುತ್ತದೆ.  

810

ಈರುಳ್ಳಿಯನ್ನು ಎರಡು ಮೂರು ಭಾಗಗಳಾಗಿ ಕತ್ತರಿಸಿ ಅಡುಗೆಮನೆಯ ವಿವಿಧ ಭಾಗಗಳಲ್ಲಿ ಇರಿಸಿ. ರಾತ್ರಿಯಲ್ಲಿ ಇರಿಸಿದರೆ  ವಾಸನೆ ಮಾಯವಾಗುತ್ತದೆ.

910

ಇನ್‌ಡೋರ್‌ ಗಿಡಗಳು ಈ ಸಮಸ್ಯೆಗೆ ಬೆಸ್ಟ್‌ ರೆಮಿಡಿ. ಅಡುಗೆಮನೆಯಲ್ಲಿ ಏರ್ ಪ್ಲಾಂಟ್ ಅನ್ನು ಇಡಬಹುದು. ಈ ಸಸ್ಯಗಳು ಹೊಗೆ ಮತ್ತು ವಾಸನೆಯನ್ನು ಹೀರಿಕೊಳ್ಳುತ್ತವೆ.

1010

ಅಲ್ಲದೆ, ಈ ಸಸ್ಯಗಳಿಂದ ಮನೆಯಲ್ಲಿ ತಾಜಾತನ ಉಳಿಯುತ್ತದೆ. ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ, ಮನೆಯ ಕಿಟಕಿಗಳನ್ನು ತೆರೆದಿಡಲು ಪ್ರಯತ್ನಿಸಿ. ಹೊಗೆ ಹೊರಗೆ ಹೋಗಲು ಸಹಾಯ ಮಾಡುತ್ತದೆ.

click me!

Recommended Stories