Benefits of Paneer: ಕಚ್ಚಾ ಪನೀರ್ ಸೇವನೆ ಮಾಡೋದ್ರಿಂದ ಎಷ್ಟೊಂದು ಲಾಭ ಗೊತ್ತಾ?

First Published Nov 14, 2021, 2:43 PM IST

ಪನೀರ್ (paneer) ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನೋ ಆಹಾರವಾಗಿದೆ. ಈಗ ಕಚ್ಚಾ ಪನೀರ್ ನ ಪ್ರಯೋಜನಗಳನ್ನು ನೋಡೋಣ. ಕಚ್ಚಾ ಪನೀರ್ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ಒಮೆಗಾ 3 ಕೂಡ ಇರುವ ಕಾರಣ ಮಾನಸಿಕ ಬೆಳವಣಿಗೆಗೆ ಇದು ನೆರವಾಗುತ್ತದೆ. ಬೆಳಗಿನ ಉಪಾಹಾರಕ್ಕೆ ಹುರಿದ ರೋಸ್ಟ್ ತಿನ್ನುವುದನ್ನು ತಪ್ಪಿಸಲು ನೀವು ಬಯಸಿದರೆ ಪನೀರ್ ನಿಮಗೆ ಉತ್ತಮ ಆಯ್ಕೆಯಾಗಿದೆ. 

ಪನೀರ್ ಹೆಚ್ಚಿನ ಪ್ರೋಟೀನ್ (protiene) ಆಹಾರವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ ಬೆಳಗಿನ ಉಪಾಹಾರಕ್ಕೆ (breakfastಪನೀರ್ ತಿನ್ನುವುದರಿಂದ ದಿನವಿಡೀ  ಶಕ್ತಿಯ ಅನುಭವವಾಗುತ್ತದೆ. ಪನೀರ್ ತಿನ್ನುವುದರಿಂದ  ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ,)  ಏಕೆಂದರೆ ಇದು ಜೀರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದಲ್ಲದೆ ಶೀತ ಹವಾಮಾನದಲ್ಲಿ 100ಗ್ರಾಂ ಕಚ್ಚಾ ಪನೀರ್ ಅನ್ನು ಸೇವಿಸುವುದರಿಂದ ನರ ದೌರ್ಬಲ್ಯ ದೂರ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. 
 

ಆರೋಗ್ಯಕ್ಕೆ ಏಕೆ ಅತ್ಯಗತ್ಯ (why it is important for health): ಆಹಾರ ತಜ್ಞೆ ಡಾ. ರಂಜನಾ ಸಿಂಗ್ ಹೇಳುವಂತೆ "ಪನೀರ್ ನಲ್ಲಿ ವಿಟಮಿನ್ ಡಿ (vitamin D) ಸಮೃದ್ಧವಾಗಿದೆ, ಇದು ನಮ್ಮ ದೇಹಕ್ಕೆ ಅತ್ಯಂತ ಉಪಯುಕ್ತವಾಗಿದೆ. ಇದರ ಬಳಕೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಸಾಮಾನ್ಯವಾಗಿರಿಸುತ್ತದೆ.

ಮಧುಮೇಹಿಗಳಿಗೆ ಉತ್ತಮ (good for diabetics): ಸಕ್ಕರೆ ರೋಗಿಗಳಿಗೆ (sugar patients) ಇದು ಅತ್ಯುತ್ತಮ ಆಹಾರವಾಗಿದೆ. ಯಾಕೆಂದರೆ ಪನೀರ್ ನಲ್ಲಿ ಸಿಹಿ ಅಂಶ ಕಡಿಮೆಯಾಗಿರುತ್ತದೆ. ಆದುದರಿಂದ ಇದು ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಇರುವ ಕ್ಯಾಲ್ಸಿಯಂ, ಪ್ರೋಟೀನ್ (protine), ಫಾಸ್ಪರಸ್, ಫೋಲೇಟ್ ನಂತಹ ಪೋಷಕಾಂಶಗಳು ಗರ್ಭಿಣಿ ಮಹಿಳೆ (pregnant women) ಮತ್ತು ಮಗುವಿನ ಆರೋಗ್ಯವನ್ನು ಸುಧಾರಿಸುತ್ತವೆ'.

ಸಸ್ಯಾಹಾರಿಗಳಿಗೆ ಪ್ರಯೋಜನಕಾರಿ ಪನೀರ್ (Helpful for vegetarians) : ಸಾಕಷ್ಟು ಪ್ರೋಟೀನ್ ಪಡೆಯದ ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಪನೀರ್ ಅನ್ನು ಸೇರಿಸಬಹುದು. ಏಕೆಂದರೆ ಪನೀರ್  ಸೆಲೆನಿಯಂ ಮತ್ತು ಪೊಟ್ಯಾಸಿಯಮ್ ಮತ್ತು ಸಾಕಷ್ಟು ಪ್ರೋಟೀನ್ ನಿಂದ ತುಂಬಿದೆ. ಬಂಜೆತನದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸೆಲೆನಿಯಂ ಉಪಯುಕ್ತವಾಗಿದೆ ಮತ್ತು ಪೊಟ್ಯಾಸಿಯಮ್ ನರವ್ಯೂಹಕ್ಕೆ ಒಳ್ಳೆಯದು. ಇವುಗಳಲ್ಲದೆ, ಪನೀರ್  ನಲ್ಲಿ ಕ್ಯಾಲ್ಸಿಯಂ ಕೂಡ ಇದೆ, ಇದು  ಮೂಳೆಗಳನ್ನು ಬಲಪಡಿಸುತ್ತದೆ.

100 ಗ್ರಾಂ ಪನೀರ್ ನ ಪೌಷ್ಟಿಕಾಂಶ ಮೌಲ್ಯ 
ಪ್ರೋಟೀನ್ -19.1 ಗ್ರಾಂ.
ವಿಟಮಿನ್ ಎ-210 ಎಂಸಿಜಿ
ಕ್ಯಾಲ್ಸಿಯಂ -420 ಮಿಗ್ರಾಂ
ಕಬ್ಬಿಣ -2.16 ಮಿ.ಗ್ರಾಂ.
ಒಟ್ಟು ಕೊಬ್ಬು -26.9 ಗ್ರಾಂ.
ಸ್ಯಾಚುರೇಟೆಡ್ ಕೊಬ್ಬು -18.1 ಗ್ರಾಂ.
ಟ್ರಾನ್ಸ್ ಕೊಬ್ಬಿನಾಮ್ಲಗಳು -0.1 ಗ್ರಾಂ.
ಕೊಲೆಸ್ಟ್ರಾಲ್ -56.2 ಮಿಗ್ರಾಂ
ಸೋಡಿಯಂ -22.1 ಮಿ.ಗ್ರಾಂ.
ಒಟ್ಟು ಕಾರ್ಬ್ಸ್ - 6.1 ಗ್ರಾಂ

ಪನೀರ್ ಅನೇಕ ಪ್ರಯೋಜನಗಳನ್ನು ಹೊಂದಿದೆ (benefits of paneer): ಆಹಾರ ತಜ್ಞೆ ಡಾ. ರಂಜನಾ ಸಿಂಗ್ ಹೇಳುವಂತೆ, ಬೆಳಗಿನ ಉಪಾಹಾರಕ್ಕೆ ಪನೀರ್ ತಿನ್ನುವುದರಿಂದ ಮತ್ತೊಂದು ಪ್ರಯೋಜನವೆಂದರೆ ಅದು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಪನೀರ್ ನಲ್ಲಿ ಕಂಡುಬರುವ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳು ದೇಹವನ್ನು ಪೋಷಿಸುತ್ತದೆ. 

ಪನೀರ್ ನ್ನು ನಿಯಮಿತವಾಗಿ ಆಹಾರದಲ್ಲಿ ಸೇವನೆ ಮಾಡಿದರೆ ಆರೋಗ್ಯಕರ ಕೊಬ್ಬುಗಳು (healthy fat) ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗಗಳ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ ಇದರಿಂದ  ದೇಹಕ್ಕೆ ಉತ್ತಮ ಪೌಷ್ಟಿಕಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ. 

ಕಚ್ಚಾ ಪನೀರ್ ತಿನ್ನುವ ಪ್ರಯೋಜನಗಳು: ಕಚ್ಚಾ ಪನೀರ್ ಸೇವನೆ ಮಾಡುವುದರಿಂದ ಮೂಳೆಗಳು ಹೆಚ್ಚು ಶಕ್ತಿಶಾಲಿಗಳಾಗುತ್ತವೆ.  ಮಾನಸಿಕವಾಗಿ ಸದೃಢರಾಗಲು (mentally strong) ಸಹಾಯ ಮಾಡುತ್ತದೆ.  ಪನೀರ್  ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಇದನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಉತ್ತಮ ಆರೋಗ್ಯಕ್ಕಾಗಿ ನೀಡಬಹುದು. ಇದು ಮಕ್ಕಳ ದೈಹಿಕ ಅಭಿವೃದ್ಧಿ ಮಾಡುತ್ತದೆ. 

ಪನೀರ್ ಕ್ಯಾಲ್ಸಿಯಂನ ಉತ್ತಮ ಮಾಧ್ಯಮವಾಗಿದೆ, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚುತ್ತದೆ ಎನ್ನುವ ಭಯ ಬೇಡ. ಯಾಕೆಂದರೆ ಪನೀರ್ ತೂಕ ನಿಯಂತ್ರಣವನ್ನು ಇಡುತ್ತದೆ. ಸಕ್ಕರೆ ರೋಗಿಗಳಿಗೆ (diabes patients) teಪ್ರಯೋಜನಕಾರಿ. ಪನ್ನೀರ್ ನಲ್ಲಿ ಸಕ್ಕರೆಯ ಅಂಶ ಇರುವುದಿಲ್ಲ, ಆದುದರಿಂದ ಇದನ್ನು ಮಧುಮೇಹಿಗಳು ಯಾವುದೇ ಹೆದರಿಕೆ ಇಲ್ಲದೆ ತಿನ್ನಬಹುದು. 

ಪನೀರ್ ನಲ್ಲಿ ಹೆಚ್ಚು ಫ್ಯಾಟ್ ಇದೆ, ಇದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎನ್ನುವ ಭಯ ಇದ್ದರೆ ಇಂದೇ ಬಿಟ್ಟು ಬಿಡಿ. ಪನೀರ್ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು (digestion) ಆರೋಗ್ಯಕರವಾಗಿರಿಸುತ್ತದೆ. ಇದರಿಂದ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. 

click me!