ಇತ್ತೀಚೆಗೆ, ತೆಲುಗು ನಟಿ ಸಮಂತಾ ಅಕ್ಕಿನೇನಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನೀವು ಅವಧಿ ಮೀರಿದ ಹಾಲಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು ಅವರು ಅವಧಿ ಮೀರಿದ ಹಾಲನ್ನು ಹೇಗೆ ಮರು ಬಳಸಬಹುದು ಮತ್ತು ಅದನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಬೇರೇನೂ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ.
undefined
ಹಸಿರು ಎಲೆಗಳನ್ನು ಪಡೆಯಲು ಹಾಲನ್ನು ಬಳಸುವುದುತಜ್ಞರ ಪ್ರಕಾರ, ಹಾಲಿನಲ್ಲಿ ಸಮೃದ್ಧವಾದ ಕ್ಯಾಲ್ಸಿಯಂ ಅಂಶವು ಸಸ್ಯಗಳು ಬೆಳೆಯಲು ಮತ್ತು ಕೊಳೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ಕ್ಯಾಲ್ಸಿಯಂ ಕೊರತೆಯಿಂದ ಹೂಮಿಡ್ ಸೀಸನ್ ನಲ್ಲಿ ಸಂಭವಿಸುತ್ತದೆ.
undefined
ಅಗತ್ಯವಾದ ಪ್ರೋಟೀನ್ ಮತ್ತು ವಿಟಮಿನ್ ಬಿ ಹಾಲಿನಲ್ಲಿ ಸಮೃದ್ಧವಾಗಿದೆ, ಇದನ್ನು ಗಿಡಗಳಿಗೆ ಬಳಕೆ ಮಾಡಿದರೆ ಸಸ್ಯಗಳ ಒಟ್ಟಾರೆ ಆರೋಗ್ಯ ಉತ್ತಮವಾಗುತ್ತದೆ. ಅಂದರೆ ಸಸ್ಯಗಳು ಆರೋಗ್ಯಯುತವಾಗಿ ಬೆಳೆಯುತ್ತವೆ.
undefined
ಸಸ್ಯಗಳ ಮೇಲೆ ಹಾಲು ಬಳಸುವುದು ಹೇಗೆಒಂದು ಭಾಗ ಹಾಲು ಮತ್ತು ಒಂದು ಭಾಗ ನೀರು ಜೊತೆಯಾಗಿ ಬೆರೆಸಿ ಮಿಶ್ರಣ ಮಾಡಿ. ನಂತರ ಅದನ್ನು ಸ್ಪ್ರೇ ಬಾಟಲಿಗೆ ವರ್ಗಾಯಿಸಿ. ಸಸ್ಯಗಳ ಎಲೆಗಳ ಮೇಲೆ ಮಿಶ್ರಣವನ್ನು ಸಿಂಪಡಿಸಿ.
undefined
ಹಾಲನ್ನು ಸಸ್ಯಗಳು ಕೆಲವೊಮ್ಮೆ ಸರಿಯಾಗಿ ಹೀರಿಕೊಳ್ಳುವುದಿಲ್ಲ. ಅದಕ್ಕಾಗಿ ಹೀರಿಕೊಳ್ಳಲ್ಪಟ್ಟಿದೆಯೆ ಎಂದು ಖಚಿತಪಡಿಸಿಕೊಳ್ಳಲು 30 ನಿಮಿಷಗಳ ನಂತರ ಪರಿಶೀಲಿಸಿ.
undefined
ಒದ್ದೆಯಾದ ಬಟ್ಟೆಯನ್ನು ಬಳಸಿ ಹೆಚ್ಚುವರಿ ಹಾಲನ್ನು ತೆಗೆಯಿರಿ. ಈ ಕೆಲಸವನ್ನು ನೀವು ತಪ್ಪದೆ ಮಾಡಬೇಕು ಏಕೆಂದರೆ ಇದು ಫಂಗಲ್ ರಿಯಾಕ್ಷನ್ಗೆ ಕಾರಣವಾಗಬಹುದು. ಇದರಿಂದ ಸಸ್ಯಗಳು ಹಾಳಾಗಬಹುದು. ಆದುದರಿಂದ ಎಚ್ಚರವಹಿಸುವುದು ಮುಖ್ಯವಾಗಿದೆ.
undefined
ಸಸ್ಯಗಳಿಗೆ ಹಾಲು ಬಳಸುವಾಗ ಇನ್ನೇನು ಕಾಳಜಿ ವಹಿಸಬೇಕು?ಹೆಚ್ಚುವರಿ ಹಾಲನ್ನು ಬಳಸುವುದನ್ನು ತಪ್ಪಿಸಲು ಸೂಚಿಸಲಾಗಿದೆ, ಇಲ್ಲದಿದ್ದರೆ ಹಾಲಿನಲ್ಲಿರುವ ಬ್ಯಾಕ್ಟೀರಿಯಾಗಳು ಸಸ್ಯದ ಬೆಳವಣಿಗೆಗೆ ತೊಡಕಾಗಬಹುದು. ಇದರಿಂದ ಸಸ್ಯಗಳು ಸಾಯುವ ಪರಿಸ್ಥಿತಿಯೂ ಬರಬಹುದು.
undefined