ಮನೆಯಲ್ಲಿ ಸುಲಭವಾಗಿ ಸಾಂಬಾರ್ ಮಸಾಲಾ ತಯಾರಿಸುವುದು ಹೀಗೆ
First Published | May 7, 2022, 4:28 PM ISTದಕ್ಷಿಣ ಭಾರತದಲ್ಲಿ, ಇಡ್ಲಿ, ವಡಾ ಮತ್ತು ದೋಸೆಗಳ ಜೊತೆಗೆ ಸಾಂಬಾರ್ ಸೇವನೆ ಮಾಡುತ್ತೇವೆ. ಇದು ತುಂಬಾನೆ ರುಚಿಯಾಗಿರುತ್ತದೆ. ಜೊತೆಗೆ ಎಲ್ಲಾ ತಿನಿಸುಗಳಿಗೆ ಬೆಸ್ಟ್ ಮ್ಯಾಚ್ ಆಗಿದೆ. ಆದರೆ ಕೆಲವೊಮ್ಮೆ ಸಾಂಬಾರ್ ಮಾಡಿದರೆ ರುಚಿ ಬೇರೆ ಬೇರೆಯಾಗಿರುತ್ತದೆ. ಅದಕ್ಕಾಗಿಯೇ ನೀವು ಮನೆಯಲ್ಲಿಯೇ ರುಚಿಯಾದ ಸಾಂಬಾರ್ ಪುಡಿ ತಯಾರಿಸಬಹುದು. ದಕ್ಷಿಣದ ಹೆಚ್ಚಿನ ಮನೆಗಳಲ್ಲಿ, ಮಹಿಳೆಯರು ಸ್ವತಃ ಸಾಂಬಾರ್ ಮಸಾಲಾವನ್ನು ತಯಾರಿಸುತ್ತಾರೆ.