ಬೇಕಾಗುವ ಸಾಮಗ್ರಿಗಳು: 6 ಹಣ್ಣಾದ ಟೊಮೆಟೊ, 2 ಸ್ಪೂನ್ ಆಲಿವ್ ಆಯಿಲ್, 3-4 ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿದ ಈರುಳ್ಳಿ, 2 ಟೀಸ್ಪೂನ್ ತುಳಸಿ ಎಲೆಗಳು, 1 ಟೀಸ್ಪೂನ್ ಸಕ್ಕರೆ, ಖಾರದ ಪುಡಿ, ರುಚಿಗೆ ಉಪ್ಪು,12 ಟೀಸ್ಪೂನ್ ಓಮಿನ ಕಾಳು, ಚಿಲಿ ಫ್ಲೆಕ್ಸ್,1 ಟೀಸ್ಪೂನ್ ಟೊಮೆಟೊ ಸಾಸ್ 1 ಟೀಸ್ಪೂನ್ ಬೆಣ್ಣೆ.
ಮೊದಲನೆಯದಾಗಿ, 3 ಟೊಮೆಟೊಗಳನ್ನು ಕಟ್ ಮಾಡಿ ಕುದಿಯುವ ನೀರಿನಲ್ಲಿ ಹಾಕಿ 2 ರಿಂದ 3 ನಿಮಿಷಗಳ ಕಾಲ ಬ್ಲಾಂಚ್ ಮಾಡಿ. ಟೊಮೆಟೊವನ್ನು ತಣ್ಣೀರಿನಲ್ಲಿ ಹಾಕಿ,ಸಿಪ್ಪೆಯನ್ನು ತೆಗೆದು ಮ್ಯಾಶ್ ಮಾಡಿ ಜರಡಿ ಮೂಲಕ ಫಿಲ್ಟರ್ ಮಾಡಿ ಪ್ಯೂರಿ ತಯಾರಿಸಿಡಿ.
ಉಳಿದ 3 ಟೊಮೆಟೊಗಳನ್ನು ತೆಗೆದುಕೊಂಡು, ಅವುಗಳ ಬೀಜಗಳನ್ನು ತೆಗೆದು ಸಣ್ಣದಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಬೆಳ್ಳುಳ್ಳಿ ಹಾಕಿ ಒಂದೆರೆಡು ನಿಮಿಷಗಳ ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
ಇದರ ನಂತರ, ಬೀಜ ತೆಗೆದು ಕತ್ತರಿಸಿಟ್ಟ ಟೊಮ್ಯಾಟೊ ಸೇರಿಸಿ ಚೆನ್ನಾಗಿ ಬೇಯಿಸಿ. 2 ರಿಂದ 3 ನಿಮಿಷಗಳ ಕಾಲ ಚಮಚದಿಂದ ಮ್ಯಾಶ್ ಮಾಡುತ್ತಾ ಬೇಯಿಸಬೇಕು.
ಟೊಮ್ಯಾಟೊ ಬೆಂದ ನಂತರ, ರೆಡಿ ಇರುವ ಟೊಮೆಟೊ ಪ್ಯೂರಿ ಸೇರಿಸಿ ಮತ್ತು 1-2 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿ.
ಈಗ ತಯಾರಿಸಿದ ಸಾಸ್‌ನಲ್ಲಿ, ತುಳಸಿ ಎಲೆಗಳು, ಓಮಿನ ಕಾಳು, ಸಕ್ಕರೆ, ಚಿಲಿ ಫ್ಲೆಕ್ಸ್ ಮತ್ತು ಉಪ್ಪು ಸೇರಿಸಿ ಮತ್ತು ಕುದಿಸಿ5-7 ನಿಮಿಷಗಳಲ್ಲಿ ಮಿಶ್ರಣ ಸಾಸ್‌ನ ಹದಕ್ಕೆ ಬರುತ್ತದೆ.
ಈ ಹಂತದಲ್ಲಿ ಸಾಸ್‌ನಂತೆ ಕಾಣಲು ಪ್ರಾರಂಭಿಸಿದೆ. ಈಗ ಟೊಮೆಟೊ ಸಾಸ್ ಮತ್ತು ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಪಿಜ್ಜಾ ಸಾಸ್ ಸಿದ್ಧವಾಗಿದೆ. ಅದನ್ನು ತಣ್ಣಗಾಗಿಸಿ ಮತ್ತು ಏರ್‌ಟೈಟ್ ಡಬ್ಬದಲ್ಲಿ ಹಾಕಿಡಿ, ಸುಲಭವಾಗಿ 15 ರಿಂದ 20 ದಿನಗಳವರೆಗೆ ಫ್ರಿಜ್‌ನಲ್ಲಿ ಇಡಬಹುದು.