ಮನೆಯಲ್ಲಿಯೇ ಪರ್ಫೆಕ್ಟ್ ಮಸಾಲೆ ದೋಸೆ ಮಾಡಲು 7 ಸಿಂಪಲ್ ಟ್ರಿಕ್ಸ್

First Published | Oct 9, 2024, 9:57 AM IST

ದಕ್ಷಿಣ ಭಾರತದ ಬೆಸ್ಟ್ ತಿಂಡಿಗಳಲ್ಲಿ  ಮಸಾಲೆ ದೋಸೆ ಸಹ ಒಂದಾಗಿದೆ. ಮಸಾಲೆ ದೋಸೆ  ಉತ್ತರ ಭಾಗದಲ್ಲಿ ಮೈಸೂರು ದೋಸೆ ಅಂತಾನೂ ಕರೆಯಲಾಗುತ್ತದೆ.

ಮಸಾಲೆ ದೋಸೆಯನ್ನು ಎಲ್ಲರೂ ಸವಿದಿರುತ್ತಾರೆ. ಕರ್ನಾಟಕದ ಎಲ್ಲಾ ಭಾಗದಲ್ಲಿಯೂ ಹಾಗೂ ಎಲ್ಲರ ಮನೆಗಳಲ್ಲಿಯೂ ಬೆಳಗಿನ ತಿಂಡಿ ಮತ್ತು ಸ್ನ್ಯಾಕ್ಸ್ ರೂಪದಲ್ಲಿಯೂ ಬಗೆ ಬಗೆಯ ದೋಸೆಗಳನ್ನು ಮಾಡಿರುತ್ತಾರೆ. ಪರ್ಫೆಕ್ಟ್ ಮಸಾಲೆ ದೋಸೆ ಮಾಡಲು ಏಳು ಸಿಂಪಲ್ ಟ್ರಿಕ್ಸ್ ಹೇಳುತ್ತಿದ್ದೇವೆ. ಈ ಏಳು ಸಿಂಪಲ್ ಸ್ಟೆಪ್ಸ್ ಏನು ಅಂತ ನೋಡೋಣ ಬನ್ನಿ.

1.ತೆಂಗಿನಕಾಯಿ ಚಟ್ನಿ

ಮಸಾಲೆ ದೋಸೆ ಪರ್ಫೆಕ್ಟ್ ಆದ್ರೆ ಅದಕ್ಕೆ ಸರಿಯಾದ ಚಟ್ನಿ ಮಾಡಿಕೊಂಡಿರಬೇಕು. ಮಸಾಲೆ ದೋಸೆಗೆ ಕೆಂಪು ಚಟ್ನಿ ಪರ್ಫೆಕ್ಟ್ ಕಾಂಬಿನೇಷನ್. ಚಟ್ನಿಗೆ ಬಳಸೋ ಕೆಂಪು ಮೆಣಸಿನಕಾಯಿಯನ್ನು 15ರಿಂದ 20 ನಿಮಿಷ ನೆನಸಿಟ್ಟುಕೊಳ್ಳಬೇಕು. ನಂತರ ತೆಂಗಿನತುರಿ, ಹುಣಸೆ, ಬೆಳ್ಳುಳ್ಳಿ, ನೆನಸಿದ ಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಕೊನೆಗೆ ಸಾಸವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಕರೀಬೇವು ಸೇರಿಸಿ ಒಗ್ಗರಣೆ ಹಾಕಿದ್ರೆ ಕೆಂಪು ಚಟ್ನಿ ರೆಡಿಯಾಗುತ್ತದೆ. ಬೇಕಿದ್ರೆ ಕೊನೆಗೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಬಹುದು.

Latest Videos


2.ಆಲೂಗಡ್ಡೆ ಪಲ್ಯ

ಮಸಾಲೆ ದೋಸೆ ಜೊತೆಯಲ್ಲಿ ಆಲೂಗಡ್ಡೆ ಪಲ್ಯ ಇರಲೇಬೇಕು. ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಂಡು ಕತ್ತರಿಸಿಕೊಳ್ಳಿ. ಆನಂತರ ಹಸಿಮೆಣಸಿನಕಾಯಿ, ಕರಿಬೇವು, ಈರುಳ್ಳಿ, ಸಾಸವೆ-ಜೀರಿಗೆ, ಟೊಮೆಟೋ ಹಾಕಿ ಒಗ್ಗರಣೆ ಮಾಡ್ಕೊಂಡು ಆಲೂ ಸೇರಿಸಿದ್ರೆ ಪಲ್ಯ ರೆಡಿಯಾಗುತ್ತದೆ. ಕೊತ್ತಂಬರಿ ಸೊಪ್ಪು ಸೇರಿಸಿ ಎಲ್ಲಾ ಮಸಾಲೆ ಜೊತೆ ಆಲೂಗಡ್ಡೆ  ಚೆನ್ನಾಗಿ ಬೇಯಿಸಿದ್ರೆ ಪರ್ಫೆಕ್ಟ್ ಪಲ್ಯ ರೆಡಿಯಾಗುತ್ತದೆ. ಬೇಕಿದ್ರೆ ಹಸಿ ಬಟಾಣಿಯನ್ನು ಸಹ ಸೇರಿಸಿಕೊಳ್ಳಬಹುದು.

3.ಕೆಂಪು ಚಟ್ನಿ

ಸುಮಾರು ಅರ್ಧ ಗಂಟೆ ಬ್ಯಾಡಗಿ ಮೆಣಸಿನಕಾಯಿಯನ್ನು ನೆನಸಿಟ್ಟುಕೊಳ್ಳಬೇಕು. ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಒಂದೆರಡು ಹಣ್ಣಾಗಿರುವ ಟೊಮೆಟೋ, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು. ಇದೇ ಚಟ್ನಿಯನ್ನು ದೋಸೆ ಮೇಲೆ ಹಚ್ಚಲಾಗುತ್ತದೆ.

4.ತವೆಕಾವಲಿ ಬಿಸಿ ಮಾಡಿಕೊಳ್ಳುವುದು

ಕಾವಲಿ ಅತಿ ಬಿಸಿಯಾಗಿದ್ರೆ ಫ್ಲೇಮ್ ಕಡಿಮೆ ಮಾಡಿಕೊಂಡು ಮಧ್ಯಮ ಹಂತಕ್ಕೆ ತೆಗೆದುಕೊಂಡು ಬನ್ನಿ. ದೋಸೆ ಬಿಸಿಯಾಗಿದ್ದಾಗ ನೀರು ಹಾಕಿ ಮಧ್ಯಮ ಉಷ್ಣತೆಗೆ ತಂದು ಹಿಟ್ಟು ಹಾಕಿ ಹರಡಿಕೊಳ್ಳಬೇಕು. ಹೀಗಾದಾಗ ಮಾತ್ರ ದೋಸೆ ಗರಿಗರಿಯಾಗಿ ಬರುತ್ತದೆ. ಪ್ರತಿ ಬಾರಿಯೂ ದೋಸೆ ಹರಡುವಾಗ ನೀರು ಚುಮುಕಿಸಿಕೊಳ್ಳಬೇಕು. ದೋಸೆ ಹಿಟ್ಟು ಹಾಕಿದ ನಂತರ ಫ್ಲೇಮ್ ಹೆಚ್ಚಿಸಿಕೊಳ್ಳಬೇಕು.

5.ದೋಸೆ ಹಿಟ್ಟು

ಒಲೆಯ ಫ್ಲೇಮ್ ಕಡಿಮೆ ಮಾಡಿಯೇ ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕಿಕೊಳ್ಳಬೇಕು. ಹಿಟ್ಟು ಹಾಕಿದ ಕೂಡಲೇ ಮಧ್ಯ ಭಾಗದಿಂದ ಕಾವಲಿ ತುಂಬಾ ತೆಳುವಾಗಿ ಹರಡಿಕೊಳ್ಳಬೇಕು. ಈಗ ಕೆಂಪು ಚಟ್ನಿಯನ್ನು ದೋಸೆ ಮೇಲೆ ತೆಳುವಾಗಿ ಸವರಬೇಕು. ನಂತರ ಒಲೆಯ ಫ್ಲೇಮ್ ಹೆಚ್ಚಿಸಿಕೊಳ್ಳಬೇಕು. ಆ ಬಳಿಕ ದೋಸೆ ಮೇಲೆ ಹಾಗೂ ಸುತ್ತಲೂ ಎಣ್ಣೆ ಹಾಕಿಕೊಂಡು ಬೇಯಿಸಿಕೊಳ್ಳಬೇಕು.

6.ಆಲೂ ಪಲ್ಯಾ ಸೇರಿಸೋದು

ದೋಸೆ ಗರಿಗರಿಯಾಗುತ್ತಿದ್ದಂತೆ ಆಲೂ ಪಲ್ಯವನ್ನು ಮೇಲಗಡೆ ಹಾಕಿ. ಕೆಲವರು ಆಲೂಗಡ್ಡೆ ಪಲ್ಯವನ್ನು ಸಹ ದೋಸೆ ಮೇಲೆ ತೆಳುವಾಗಿ ಹರಡುತ್ತಾರೆ. ನಿಮಗೆ ಹೇಗೆ ಇಷ್ಟವಾಗುತ್ತೋ ಹಾಗೆ ಮಾಡಿಕೊಳ್ಳಬಹುದು. ತೆಳುವಾಗಿ ಹರಡೋದರಿಂದ ದೋಸೆ ಸವಿಯಲು ಪ್ರತ್ಯೇಕವಾದ ಚಟ್ನಿ ಬೇಕಾಗುವುದಿಲ್ಲ.

7.ಬಿಸಿಯಾಗಿರುವಾಗಲೇ ಸರ್ವ್ ಮಾಡಿ

ಗರಿಗರಿಯಾಗಿರುವಾಗಲೇ ಮಸಾಲೆ ದೋಸೆಯನ್ನು ಸರ್ವ್ ಮಾಡಬೇಕು. ಬಿಸಿ ಇದ್ದಾಗಲೇ ದೋಸೆ ತಿಂದ್ರೆ ಅದರ ರುಚಿ ಹೆಚ್ಚಾಗಿರುತ್ತದೆ. ದೋಸೆಗೆ ತೆಂಗಿನಕಾಯಿ ಚಟ್ನಿ ಮತ್ತು  ಕೆಂಪು ಚಟ್ನಿ ಸಹ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಕೆಲವರಿಗೆ ದೋಸೆ ಜೊತೆ ಸಾಂಬಾರ್‌ನಲ್ಲಿ ಡಿಪ್ ಮಾಡಿಕೊಂಡು ತಿನ್ನಲು ಇಷ್ಟಪಡುತ್ತಾರೆ.

click me!