ಗೋಲ್‌ಗಪ್ಪದ ಪುರಿ ಗರಿಗರಿ ಆಗ್ತಿಲ್ಲವೇ? ಹಿಟ್ಟು ಕಲಿಸುವಾಗ ಈ ಪದಾರ್ಥ ಸೇರಿಸಿ!

First Published | Oct 6, 2024, 3:12 PM IST

ಚಾಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸೇವ್ ಪುರಿ ಇರಬಹುದು, ದಹಿ ಪುರಿ ಇರಬಹುದು ಅಥವಾ ಪಾನಿ ಪುರಿ ಇರಬಹುದು. ಅದರಲ್ಲೂ ಗೋಲ್‌ಗಪ್ಪಾ ಹೆಸರು ಕೇಳಿದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂ ಬರುತ್ತದೆ.

ಮನೆಯಲ್ಲಿಯೇ ಪಾನಿಪುರಿ ಮಾಡಿಕೊಂಡು ಸೇವಿಸೋದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ರೆ ಮಾಡುವ ಪುರಿ ಗರಿಗರಿಯಾಗಿರಲ್ಲ ಎಂದು ಹಲವರು ಹೇಳುತ್ತಾರೆ. ಹಿಟ್ಟು ಕಲಿಸುವಾಗ ಒಂದು ಪದಾರ್ಥ ಸೇರಿಸೋದರಿಂದ ಪುರಿ ಗರಿಗರಿಯಾಗಿ ಬರುತ್ತದೆ.

ಬೇಕಾಗುವ ಸಾಮಾಗ್ರಿಗಳು

ಹೋಟೆಲ್‌ಗಳಲ್ಲಿ ಸಿಗುವ ರೀತಿ ಗರಿಗರಿಯಾದ ಪುರಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. ಪುರಿ ಮಾಡಲು ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ.
ಮೈದಾ - 1 ಕಪ್ (150 ಗ್ರಾಂ)
ರವೆ- 3 ಟೇಬಲ್ ಸ್ಪೂನ್ (30 ಗ್ರಾಂ)
ಎಣ್ಣೆ - ಕರಿಯಲು ಬೇಕಾಗುವಷ್ಟು

Latest Videos


ಗೋಲಗಪ್ಪ ಅಥವಾ ಪುರಿ ಮಾಡೋಕೆ ಹೆಚ್ಚಾಗಿ ಮೈದಾ ಉಪಯೋಗಿಸ್ತಾರೆ. ಆದ್ರೆ ಗೋಲಗಪ್ಪದ ಪುರಿ ಕ್ರಿಸ್ಪಿ ಮತ್ತು ಫುಲ್ ಆಗಿ ಫ್ರೈ ಆಗಬೇಕು ಅಂದ್ರೆ ಸ್ವಲ್ಪ ರವೆ ಮಿಕ್ಸ್ ಮಾಡಬೇಕು. ಇದರಿಂದ ಗೋಲಗಪ್ಪ ಕ್ರಂಚಿ ಆಗುತ್ತದೆ.

ಗೋಲಗಪ್ಪ ಮಾಡೋಕೆ ಒಂದು ಕಪ್ ಮೈದಾಗೆ 3 ಟೇಬಲ್ ಸ್ಪೂನ್ ರವೆ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ 2 ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು. (ಹಿಟ್ಟು ತುಂಬಾ ಗಟ್ಟಿಯಾಗಿಯೂ ಇರಬಾರದು, ತುಂಬಾ ಸಪ್ಪೆಯಾಗಿಯೂ ಇರಬಾರದು)

ಕಲಸಿದ ಹಿಟ್ಟನ್ನು ಒಂದು 30 ನಿಮಿಷ ನೆನೆಯಲು ಬಿಡಿ. ನಂತರ ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಚೆನ್ನಾಗಿ ಮತ್ತೊಮ್ಮೆ ಕಲಿಸಿಕೊಳ್ಳಬೇಕು. ಈಗ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಮಾಡಿಕೊಂಡು 2-3 ನಿಮಿಷ ಕೈಯಲ್ಲೇ ಒತ್ತಿ. ಹೀಗೆ ಮಾಡೋದರಿಂದ ಗೋಲಗಪ್ಪ ಕ್ರಿಸ್ಪಿ ಆಗುತ್ತದೆ. ಇದನ್ನು ರೌಂಡ್‌ಶೇಪ್‌ ನಲ್ಲಿ ಲಟ್ಟಿಸಿಕೊಳ್ಳಬೇಕು.

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಕಾದ ನಂತರ ಲಟ್ಟಿಸಿಕೊಂಡಿರುವ ಪುರಿಯನ್ನು ಹಾಕಿ ಫ್ರೈ ಮಾಡಿ. ಫ್ಲೇಮ್ ಮೀಡಿಯಂನಲ್ಲಿ ಇರಲಿ. ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಫ್ರೈ ಮಾಡಿ. ತಿರುವಿ ಹಾಕಿ  10 ಸೆಕೆಂಡ್ ಫ್ರೈ ಮಾಡಿಕೊಂಡರೆ ಗರಿಗರಿಯಾದ ಗೋಲ್‌ಗಪ್ಪ/ಪುರಿ ಸಿದ್ಧವಾಗುತ್ತದೆ.

ಪುರಿಯನ್ನು ಟಿಶ್ಯೂ ಪೇಪರ್ ಮೇಲೆ ಹಾಕೋದರಿಂದ  ಎಕ್ಸ್ಟ್ರಾ ಎಣ್ಣೆ ಹೋಗುತ್ತದೆ. ಗೋಲಗಪ್ಪ ಆರಿದ ನಂತರ ಅದಕ್ಕೆ ಬೇಯಿಸಿದ ಆಲೂಗಡ್ಡೆ, ಬಟಾಣಿ ಹಾಕಿ, ಖಾರ ಹುಳಿ ಪಾನಿ ಜೊತೆ ಸವಿಯಿರಿ.

click me!