ಒವನ್‌ ಬೇಡ, ಮನೆಯಲ್ಲೇ ಮಾಡಬಹುದು ಹೆಲ್ದಿ ಬ್ರೌನ್ ‌ಬ್ರೆಡ್‌!

First Published | Feb 28, 2021, 1:40 PM IST

ಅಂಗಡಿಯಲ್ಲಿ ತಿಂಡಿ ತಿನಿಸು ಖರೀದಿಸುವಾಗ ಮೊದಲು ಅದು ಆರೋಗ್ಯಕ್ಕೆ ಒಳ್ಳೆಯದೇ ಎಂದು ನೋಡುತ್ತೇವೆ. ನೂಡಲ್ಸ್‌ ಆಗಿರಲಿ ಅಥವಾ ಬ್ರೆಡ್‌ ಕಡಿಮೆ ಕ್ಯಾಲೋರಿಯ ಹೆಲ್ದಿ ಆಗಿರುವುದನ್ನು ಕೊಳ್ಳಲು ಬಯಸುತ್ತೇವೆ. ಗೋಧಿ ನೂಡಲ್ಸ್‌, ಬ್ರೌನ್‌ ಬ್ರೆಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಸ್ವಲ್ಪ ದುಬಾರಿ. ಕಡಿಮೆ ಖರ್ಚಿನ ಆರೋಗ್ಯಕರ ಬ್ರೌನ್ ಬ್ರೆಡ್ ಅನ್ನು ಮನೆಯಲ್ಲೂ ಸುಲಭವಾಗಿ ಮಾಡಲು ಸಾಧ್ಯ. ಅದೂ ಓವನ್‌ ಇಲ್ಲದೆ ಮನೆಯಲ್ಲಿ ಗೋಧಿ ಹಿಟ್ಟಿನಿಂದ ಬ್ರೆಡ್ ತಯಾರಿಸುವ ರೆಸಿಪಿ ಇಲ್ಲಿದೆ. 

ತುಂಬಾ ರುಚಿಕರವಾದ ಮತ್ತು ಪೌಷ್ಟಿಕ ಬ್ರೌನ್ ‌ಬ್ರೆಡ್‌ ಮಾಡಲು ಬೇಕಾಗುವ ವಸ್ತುಗಳು ಸುಲಭವಾಗಿ ಮನೆಯಲ್ಲಿ ಇರುತ್ತವೆ.
3 ಕಪ್ ಹಿಟ್ಟು ಗೋಧಿ, 12 ಲೀಟರ್ ಹಾಲು, 2 ಟೀಸ್ಪೂನ್ ವಿನೆಗರ್, 1 ಟೀಸ್ಪೂನ್ ಬೇಕಿಂಗ್ ಪೌಡರ್, 12 ಟೀಸ್ಪೂನ್ ಸೋಡಾ 1 ಟೀಸ್ಪೂನ್ ಸಕ್ಕರೆ ಪುಡಿ, ಚಿಟಿಕೆ ಉಪ್ಪು,1 ಟೀಸ್ಪೂನ್ ಎಣ್ಣೆ.
Tap to resize

ಬ್ರೌನ್ ಬ್ರೆಡ್ ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ.ಸ್ವಲ್ಪ ತಣ್ಣಗಾದಾಗ ವಿನೆಗರ್ ಮತ್ತು ಒಂದು ಚಮಚ ಎಣ್ಣೆಯನ್ನು ಸೇರಿಸಿ. ಐದು ನಿಮಿಷಕಾಲ ಹಾಗೆಯೇಬಿಡಿ.
ಒಂದು ಪಾತ್ರೆಯಲ್ಲಿ ಮೂರು ಕಪ್ ಗೋಧಿ ಹಿಟ್ಟು ತೆಗೆದುಕೊಳ್ಳಿ. ಈಗ ಇದಕ್ಕೆ ಬೇಕಿಂಗ್ ಪೌಡರ್, ಸಕ್ಕರೆ ಪುಡಿ, ಉಪ್ಪು ಮತ್ತು ಬೇಕಿಂಗ್ ಸೋಡಾ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಜರಡಿ ಹಿಡಿಯಿರಿ. .
ನಂತರ ಹಿಟ್ಟಿಗೆ ಹಾಲಿನ ತಯಾರಾದ ಮಿಶ್ರಣವನ್ನು ಬೆರೆಸಿ. ಕಟ್‌ ಫೋಲ್ಡ್‌ ಮಾದರಿಯಲ್ಲಿ ಹಿಟ್ಟು ಕಲೆಸಿ. ಇದನ್ನು ಒಂದು ಡೈರೆಕ್ಷನ್‌ನಲ್ಲಿ ನಾದ ಬೇಕು.
ಈಗ ಒಂದು ಟಿನ್‌ ಅಥವಾ ಪಾತ್ರೆತೆಗೆದುಕೊಳ್ಳಿ. ಎಣ್ಣೆ ಹಚ್ಚುವ ಮೂಲಕ ಗ್ರೀಸ್ ಮಾಡಿ ತಯಾರಿಸಿದ ಬ್ರೆಡ್‌ ಹಿಟ್ಟನ್ನು ಹಾಕಿ.
ಬಾಣಲೆಗೆ ಉಪ್ಪು ಅಥವಾ ಮರಳು ಹಾಕಿ ಬಿಸಿ ಮಾಡಿ.
ನಂತರ ಪಾತ್ರೆಯನ್ನು ಅದರ ಮೇಲೆ ಇಟ್ಟು ಸುಮಾರು 40 ನಿಮಿಷಗಳ ಬೇಕ್‌ ಮಾಡಿ.
ಒಂದು ಚಾಕು ಅಥವಾ ಟೂತ್‌ಪಿಕ್‌ ಚುಚ್ಚಿ ಬ್ರೆಡ್‌ ಬೆಂದಿರುವುದನ್ನು ಚೆಕ್‌ ಮಾಡಿ. ಹಿಟ್ಟು ಅದಕ್ಕೆ ಅಂಟಿಕೊಂಡಿದ್ದರೆ, ಇನ್ನೂ ಸಮಯ ಸ್ವಲ್ಪ ಬೇಯಿಸಿ.
ಆರೋಗ್ಯಕರ ಬ್ರೌನ್‌ ಬ್ರೆಡ್ ರೆಡಿ. ತಣ್ಣಗಾದ ನಂತರ ಕಟ್‌ ಮಾಡಿ ಸವಿಯಿರಿ.

Latest Videos

click me!