ರೆಸಿಪಿ - ಮನೆಯಲ್ಲೇ ಸುಲಭವಾಗಿ ಮಾಡಿ ಸೋಯಾ ಸಾಸ್!

First Published | Feb 10, 2021, 4:35 PM IST

ಚೈನೀಸ್‌ ಫುಡ್‌ಗಳಾದ ಮಂಚೂರಿಯನ್‌,  ನೂಡಲ್ಸ್‌ ಮುಂತಾದವು ಈಗ ಭಾರತದಲ್ಲೂ ಫೇಮಸ್‌. ಇವುಗಳನ್ನು ಸಾಕಷ್ಟು ಜನ ಮನೆಯಲ್ಲೇ ತಯಾರಿಸುತ್ತಾರೆ. ಚೈನೀಸ್‌ ಅಡುಗೆಯಲ್ಲಿ ಸೋಯಾ ಸಾಸ್ ಬಳಕೆ ಜಾಸ್ತಿ. ಮಾರುಕಟ್ಟೆ ಸುಲಭವಾಗಿ ಸಿಗೋ ಈ ಸಾಸ್ ಅಸಲಿ, ನಕಲಿ ಕಂಡು ಹಿಡಿಯೋದೇ ಪ್ರಾಬ್ಲಂ. ದುಬಾರಿಯಾಗಿರುವ ಇವು ಆರೋಗ್ಯಕ್ಕೂ ಒಳ್ಳೆಯದಲ್ಲ. ಮನೆಯಲ್ಲೇ ಸುಲಭವಾಗಿ ಈ  ಸಾಸ್ ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
4 ಟೀ ಚಮಚ ಸಕ್ಕರೆ
2 ಚಮಚ ಬಿಳಿ ವಿನೆಗರ್
ಅರ್ಧ ಟೀಚಮಚ ಉಪ್ಪು ಅಥವಾ ರುಚಿಗೆ ಅನುಗುಣವಾಗಿ
1 ಗ್ಲಾಸ್ ನೀರು
ಅಜಿನೊಮೊಟೊ ಅರ್ಧ ಟೀಚಮಚ

ಸೋಯಾ ಸಾಸ್ ತಯಾರಿಸಲು, ಮೊದಲು ಗ್ಯಾಸ್‌ ಮೇಲೆ ಪ್ಯಾನ್ ಇರಿಸಿ. ಪ್ಯಾನ್ ಬಿಸಿಯಾದಾಗ, ಅದಕ್ಕೆ ನಾಲ್ಕು ಟೀ ಚಮಚ ಸಕ್ಕರೆ ಹಾಕಿ.
ಈಗ ಸಕ್ಕರೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಚೆನ್ನಾಗಿಕರಗಲು ಬಿಡಿ. ಸಕ್ಕರೆ ಸುಡದಂತೆ ಪ್ಲೇಮ್‌ ಕಡಿಮೆ ಮಾಡಿ.
Tap to resize

ಸಕ್ಕರೆ ಕಪ್ಪು ಬಣ್ಣಕ್ಕೆ ಬರುವವರೆಗೆಬಿಡಿ.
ಈಗ ನೀರು ಸೇರಿಸಿ ಐದು ನಿಮಿಷ ಕುದಿಸಿ.
5 ನಿಮಿಷಗಳ ನಂತರ, ಅದಕ್ಕೆ ಉಪ್ಪು ಮತ್ತು ವಿನೆಗರ್ ಸೇರಿಸಿ. ಮಿಕ್ಸ್‌ ಮಾಡಿ
ಪುನಃ 5 ನಿಮಿಷಗಳ ನಂತರ ಅದಕ್ಕೆ ಅಜಿನೊಮೊಟೊ ಸೇರಿಸಿ. ಚೆನ್ನಾಗಿ ಕುದಿಯಲು ಬಿಡಿ.
ಗ್ಯಾಸ್‌ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈಗ ಸೋಯಾ ಸಾಸ್ ರೆಡಿ. ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿಟ್ಟರೆ ಈ ಸಾಸ್‌ ತಿಂಗಳುಗಟ್ಟಲೆ ಹಾಳಾಗುವುದಿಲ್ಲ.

Latest Videos

click me!