ಅಕ್ಕಿ ದೀರ್ಘಕಾಲ ಸಂಗ್ರಹಿಸಲು ಈ ಟಿಪ್ಸ್ ಟ್ರೈ ಮಾಡಿ

First Published Jan 31, 2021, 4:30 PM IST

ಅಕ್ಕಿಯನ್ನು ಭಾರತದ ಪ್ರಮುಖ ಆಹಾರ ಎಂದು ಕರೆಯಬಹುದು ಮತ್ತು ಇದನ್ನು ಬಹುತೇಕ ಮನೆಗಳಲ್ಲಿ ನಿಯಮಿತವಾಗಿ ತಯಾರಿಸಲಾಗುತ್ತದೆ. ಇದನ್ನು ಯಾವುದೇ ಸಮಯದಲ್ಲಿ ತಯಾರಿಸಬಹುದು ಮತ್ತು ಇದನ್ನು ತಯಾರಿಸಲು ತುಂಬಾ ಸುಲಭ. ಆದರೆ ಅಕ್ಕಿಯು ತುಂಬಾ ಸಮಯ ಹಾಗೆ ಇದ್ದರೆ ಅದು ಕೆಟ್ಟದಾಗಬಹುದು?

ಸರಿಯಾಗಿ ದಾಸ್ತಾನು ಮಾಡದಿದ್ದಲ್ಲಿ, ಅಕ್ಕಿಯಲ್ಲಿ ಹುಳ ಅಥವಾ ಕೀಟಗಳ ಹೆಚ್ಚಾಗಬಹುದು. ಬಿಳಿ ಅಕ್ಕಿಯು ಕಂದು ಅಕ್ಕಿಗಿಂತಲೂ ದೀರ್ಘಬಾಳಿಕೆಯನ್ನು ಹೊಂದಿದೆ. ಏಕೆಂದರೆ ಕಂದು ಅಕ್ಕಿಯಲ್ಲಿ ಎಣ್ಣೆಯ ಅಂಶ ಅಧಿಕವಾಗಿದ್ದು, ಇದು ದೀರ್ಘಾವಧಿವರೆಗೆ ಬಾಳಿಕೆ ಬರುವುದಿಲ್ಲ.
undefined
ಬಿಳಿ ಅಕ್ಕಿಯು 3-4 ವರ್ಷಗಳಷ್ಟು ಬಾಳಿಕೆಯನ್ನು ಹೊಂದಿದ್ದರೆ, ಬ್ರೌನ್ ರೈಸ್ 8 ತಿಂಗಳಿಗಿಂತ ಹೆಚ್ಚು ಕಾಲ ಮತ್ತು ಫ್ರಿಜ್ ನಲ್ಲಿ ಗರಿಷ್ಠ ಒಂದು ವರ್ಷ ಬಾಳಿಕೆ ಬರುವ ಸಾಧ್ಯತೆ ಇದೆ.
undefined
ಗಾಳಿಯಾಡದ ಕಂಟೇನರ್ ಗಳು:ಅಕ್ಕಿ ಹಾಳಾಗದಂತೆ ತಡೆಯಲು ಇರುವ ಸುಲಭ ಉಪಾಯವೆಂದರೆ ಗಾಳಿಯಾಡದ ಡಬ್ಬದಲ್ಲಿ ಇಟ್ಟು ಕೊಳ್ಳುವುದು. ಗಾಜಿನ ಪಾತ್ರೆ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಒಂದನ್ನು ಆಯ್ಕೆ ಮಾಡಿ. ಇದರಿಂದ ಎಲ್ಲಾ ರೀತಿಯ ತೇವಾಂಶವನ್ನು ತಡೆಗಟ್ಟುತ್ತದೆ ಮತ್ತು ಹೊಸ ಭತ್ತವನ್ನು ಉತ್ತಮವಾಗಿ ಇಡುತ್ತದೆ.
undefined
ಬೇವಿನ ಎಲೆ ಮತ್ತು ಒಣ ಮೆಣಸಿನಕಾಯಿ:ಕೀಟಗಳಿಂದ ಅಕ್ಕಿಯನ್ನು ರಕ್ಷಿಸಿ ಕೊಳ್ಳುವ ಮತ್ತೊಂದು ಆಸಕ್ತಿದಾಯಕ ಹ್ಯಾಕ್ ಎಂದರೆ, ಪಾತ್ರೆಯಲ್ಲಿ ಬೇವಿನ ಎಲೆ ಮತ್ತು ಒಣ ಮೆಣಸಿನ ಕಾಯಿಗಳನ್ನು ಶೇಖರಿಸುವುದು.
undefined
ಒಂದು ಹಿಡಿ ಬೇವಿನ ಎಲೆ ಅಥವಾ 4-5 ಒಣ ಕೆಂಪು ಮೆಣಸಿನಕಾಯಿಯನ್ನು ಗಾಳಿಯಾಡದ ಅಕ್ಕಿಯ ಜಾರ್ ಗೆ ಹಾಕಿ. ಈ ಟ್ರಿಕ್ ಅನ್ನು ಅನೇಕ ಮಹಿಳೆಯರು ಬಳಸುತ್ತಾರೆ ಮತ್ತು ಅಕ್ಕಿಯನ್ನು ಸುರಕ್ಷಿತವಾಗಿಡಲು ಇದು ಒಂದು ತಂತ್ರವಾಗಿದೆ.
undefined
ಅಕ್ಕಿಯನ್ನು ಫ್ರೀಜ್ ಮಾಡುವುದು ಭತ್ತವನ್ನು ಸಂರಕ್ಷಿಸುವ ಮತ್ತೊಂದು ವಿಧಾನ. ಅಕ್ಕಿಯ ಚೀಲವನ್ನು ಫ್ರೀಜರ್-ಸುರಕ್ಷಿತ ಪಾತ್ರೆಗೆ ವರ್ಗಾಯಿಸಿ ಮತ್ತು ಅದನ್ನು ಫ್ರೀಜ್ ಮಾಡಿ. ಅಗತ್ಯವಿದ್ದಾಗ ಜಾರ್ ನಿಂದ ಸ್ವಲ್ಪ ಪ್ರಮಾಣದ ಅಕ್ಕಿಯನ್ನು ತೆಗೆದುಕೊಂಡು, ಉಳಿದ ಭಾಗವನ್ನು ಮತ್ತೆ ಫ್ರೀಜರ್ ನಲ್ಲಿ ಇಟ್ಟರೆ ದೀರ್ಘಕಾಲ ಕೀಟಮುಕ್ತರಾಗಿರಿಸಬಹುದು.
undefined
ಹಾಳಾದ ಅಕ್ಕಿಯನ್ನು ಗುರುತಿಸುವುದು ಹೇಗೆ:ಅಕ್ಕಿಯು ಪಿಷ್ಟಭರಿತ ಆಹಾರ ಪದಾರ್ಥವಾಗಿದ್ದು, ಪಿಷ್ಟತುಂಬಿದ ವಸ್ತುಗಳ ಮೇಲೆ ಬ್ಯಾಕ್ಟೀರಿಯಾಗಳು ಸಂತಾನೋತ್ಪತ್ತಿ ಮಾಡಲು ಇಷ್ಟಪಡುತ್ತವೆ. ಸರಿಯಾಗಿ ದಾಸ್ತಾನು ಮಾಡದಿದ್ದರೆ ಅಕ್ಕಿ ಸುಲಭವಾಗಿ ಕೆಟ್ಟು ಹೋಗುತ್ತದೆ.
undefined
ಅಕ್ಕಿ ಒಣಗಲು ಪ್ರಾರಂಭಿಸಿದರೆ, ಹುಳಗಳು ಬೆಳೆಯುತ್ತದೆ, ವಾಸನೆ ಯನ್ನು ಹೊರಸೂಸುತ್ತದೆ ಅಥವಾ ಬಣ್ಣ ದಲ್ಲಿ ಬದಲಾವಣೆ ಯಾದರೆ, ಇವು ಹಾಳಾದ ಅಕ್ಕಿಯ ಕೆಲವು ಚಿಹ್ನೆಗಳಾಗಿವೆ.
undefined
ಒಂದು ಪಾತ್ರೆಯಲ್ಲಿ ಒಂದೆರಡು ಬಗ್ ಗಳು ಓಡಾಡುತ್ತಿರುವುದು ಕಂಡು ಬಂದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಅಕ್ಕಿಯನ್ನು ಬಿಸಾಡುವುದು. ಈ ಅಕ್ಕಿಯನ್ನು ಬೇಯಿಸಿ ತಿಂದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚುತ್ತದೆ. ತಾಜಾ ಅನ್ನವನ್ನು ಸಂಗ್ರಹಿಸುವ ಮೊದಲು ಪಾತ್ರೆಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
undefined
click me!