ಬಿಯರ್ ತಯಾರಿಸಲು, ಮೊದಲು ಗೋಧಿಯನ್ನು 10 ರಿಂದ 12 ಗಂಟೆಗಳ ಕಾಲ ನೀರಿನಲ್ಲಿ ಚೆನ್ನಾಗಿ ನೆನೆಸಿ.
ನೀರಿನಿಂದ ತೆಗೆದ ಗೋಧಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ಗ್ರೈಂಡ್ ಮಾಡಿದ ಗೋಧಿಗೆ ಎರಡರಿಂದ ಎರಡೂವರೆ ಲೀಟರ್ ನೀರು ಸೇರಿಸಿ.
ನಂತರ ಮಿಶ್ರಣವನ್ನು ತೆಳುವಾದ ಬಟ್ಟೆಯಿಂದ ಫಿಲ್ಟರ್ ಮಾಡಿ. ಗೋಧಿ ಕಡ್ಡಿ ಹಾಗೂ ಸಿಪ್ಪೆಗಳನ್ನು ಪ್ರತ್ಯೇಕಿಸಿ.
ಸೋಸಿದ ಗೋಧಿ ನೀರನ್ನು ದಪ್ಪ ತಳ ಪಾತ್ರೆಯಲ್ಲಿ ಹಾಕಿ ಕುದಿಯಲು ಇಡಿ. ಮಿಶ್ರಣ ದಪ್ಪವಾಗಿದ್ದರೆ ನೀರು ಸೇರಿಸಿ.
ಅದಕ್ಕೆ ಹಾಪ್ಸ್ ಹೂಗಳನ್ನು ಸೇರಿಸಿ.ನಿರಂತರವಾಗಿ ಕುದಿಸಿ. ಇದೊಂದು ಜಾತಿಯ ಬಳ್ಳಿ. ಅಮೆರಿಕದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.
ಒಂದು ಬಟ್ಟಲಿನಲ್ಲಿ ಬೆಚ್ಚಗಿನ ನೀರಿಗೆ ಯೀಸ್ಟ್ ಹಾಕಿ 25 ನಿಮಿಷಗಳ ಕಾಲ ಇರಿಸಿ.
ಗೋಧಿ ನೀರಿನ ಉಷ್ಣತೆಯು 30 ಡಿಗ್ರಿ ಇದ್ದಾಗ, ಅದಕ್ಕೆ ಯೀಸ್ಟ್ ಸೇರಿಸಿ. ಕ್ರಮೇಣಕರಗಲು ಪ್ರಾರಂಭವಾಗುತ್ತದೆ. ಈಗ ಈ ಮಿಶ್ರಣವನ್ನು ಜಾರಿನಲ್ಲಿಹಾಕಿಡಿ. ಗ್ಯಾಸ್ ರಿಲೀಸ್ ಆಗಲು ಮುಚ್ಚಳದ ಮೇಲೆ ಹೋಲ್ ಮಾಡಿಡಿ.
ನಂತರ ಇದನ್ನು 6 ರಿಂದ 12 ದಿನಗಳವರೆಗೆ ಇಡಿ. ಪ್ರತಿದಿನ ಈ ಸೆಲ್ಯೂಷನ್‌ನ್ನು ನಿರಂತರವಾಗಿ ಕೈಯಾಡಲು ಮರೆಯಬಾರದು.
12 ದಿನಗಳ ನಂತರ, ಮತ್ತೆ ಬಟ್ಟೆಯಿಂದ ಫಿಲ್ಟರ್ ಮಾಡಿ. ಎರಡು ದಿನಗಳವರೆಗೆ ಬಾಟಲಿಯಲ್ಲಿ ಸಂಗ್ರಹಿಸಿದರೆ. ಮನೆಯಲ್ಲೇ ನಿಮ್ಮ ಫೇವರೇಟ್ ಬಿಯರ್ ಹೀರಲು ರೆಡಿ.