ಯಿಪ್ಪೀ! ಹೇಲ್ತಿ ಟ್ರಯಲ್ ಮಿಕ್ಸ್:ಯಿಪ್ಪೀ ನೂಡಲ್ಸ್ 2 ಪ್ಯಾಕೆಟ್‌ಗಳನ್ನು ಪುಡಿಮಾಡಿ.ನೂಡಲ್ಸ್ ಗೋಲ್ಡನ್ ಬ್ರೌನ್ ಆಗುವ ತನಕ 4-5 ನಿಮಿಷ ಹುರಿಯಿರಿ. YiPPee ಮಸಾಲಾದ 2 ಸ್ಯಾಚೆಟ್‌ಗಳನ್ನು ಸೇರಿಸಿ! 2 ನಿಮಿಷ ಮಿಕ್ಸ್ ಮಾಡಿ. ಮಿಶ್ರಣವನ್ನು ಬಟ್ಟಲಿಗೆ ಟ್ರಾನ್ಸಫರ್ ಮಾಡಿ. 2 ಟೀಸ್ಪೂನ್ ಕತ್ತರಿಸಿದ ಬಾದಾಮಿ, 4 ಒಣದ್ರಾಕ್ಷಿ, 5 ಟೀಸ್ಪೂನ್ ಕತ್ತರಿಸಿದ ಗೋಡಂಬಿ, 3 ಟೀಸ್ಪೂನ್ ಕ್ರಾನ್ಬೆರ್ರಿ, 4 ಟೀಸ್ಪೂನ್ ದಾಳಿಂಬೆ ಸೇರಿಸಿ. ನಿಂಬೆ ರಸ ಹಾಕಿ ಒಟ್ಟಿಗೆ ಟಾಸ್ ಮಾಡಿ ಸವಿಯಿರಿ.
ಹಾಟ್ ಪಾಟ್ ರೈಸ್: ಬಾಣಲೆಯಲ್ಲಿ 1 ಟೀಸ್ಪೂನ್ ಎಣ್ಣೆ ತೆಗೆದುಕೊಂಡು 2-3 ಲವಂಗ, ಬೆಳ್ಳುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಬೇಯಿಸಿ. ನಂತರ ನೀವು ಇಷ್ಟಪಡುವ ಎಲ್ಲಾ ತರಕಾರಿಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಬೇಯಿಸಿ. 1 ಟೀಸ್ಪೂನ್ ಸೋಯಾ ಸಾಸ್, 1 ಟೀಸ್ಪೂನ್ ವಿನೆಗರ್, 1 ಟೀಸ್ಪೂನ್ ಕರಿಮೆಣಸು ಮತ್ತು 12 ಗ್ಲಾಸ್ ನೀರು ಸೇರಿಸಿ ತರಕಾರಿಗಳನ್ನು ಬೇಯಿಸಿ. ನಂತರ ಬೇಯಿಸಿದ ಅಕ್ಕಿ ಸೇರಿಸಿ ಟಾಸ್ ಮಾಡಿ. ಉಪ್ಪು ಮತ್ತು ಸಕ್ಕರೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದರೆ ಹಾಟ್ ಪಾಟ್ ರೈಸ್ ತಿನ್ನಲು ರೆಡಿ.
ಚಿಪ್ಸ್ ಮತ್ತು ಸಿರಲ್ ಬೇಲ್: ಒಂದು ಬಟ್ಟಲಿನಲ್ಲಿ 50 ಗ್ರಾಂ ರೈಸ್ ಸಿರಲ್, ನಿಮ್ಮ ಆಯ್ಕೆಯ ಚಿಪ್ಸ್ ಮತ್ತು 1 ಹೆಚ್ಚಿದ ಟೊಮೆಟೊ ಸೇರಿಸಿ. ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ರುಚಿಕರವಾದ ಕ್ರಿಸ್ಪಿ,ಸ್ಪೈಸಿ ಸ್ನಾಕ್ಸ್ ಸವಿಯಲು ಸಿದ್ಧ.
ರೋಸ್ಟೆಡ್ ಮಖಾನಾ:ಇದು ನೀವು ಮಾಡಬಹುದಾದ ಸರಳ ಮತ್ತು ಆರೋಗ್ಯಕರ ತಿಂಡಿ. ಮಖಾನಾ ಅಥವಾ ಫಾಕ್ಸ್ ಸೀಡ್ ಕಡಿಮೆ ಕ್ಯಾಲೋರಿ, ಕಡಿಮೆ ಕೊಲೆಸ್ಟ್ರಾಲ್ ಆಹಾರವಾಗಿದ್ದು, ಇದರಲ್ಲಿ ಪ್ರೋಟೀನ್ ಕೂಡ ಸಮೃದ್ಧವಾಗಿದೆ. ನಿಮ್ಮ ಇಷ್ಟದ ಕೆಲವು ಮಸಾಲೆ ಸೇರಿಸಿ ತುಪ್ಪ ಹಾಕಿ ಬಾಣಲೆಯಲ್ಲಿ ಮಖಾನಾಗಳನ್ನು ಹುರಿಯಿರಿ.
ಚೀಸ್ ಟೋಸ್ಟ್: ಇದಕ್ಕಿಂತ ವೇಗವಾಗಿ ಮತ್ತು ರುಚಿಯಾಗಿ ಬೇರೆ ತಿಂಡಿ ಮಾಡಲು ಸಾಧ್ಯವಿಲ್ಲ. ಎರಡು ಬ್ರೆಡ್ ಸ್ಲೈಸ್ ನಡುವೆ ಚೀಸ್ ಇರಿಸಿ. ಸ್ವಲ್ಪ ಉಪ್ಪು ಮತ್ತು ಪೇಪ್ಪರ್ ಉದುರಿಸಿ. ಪ್ಯಾನ್ ಅಥವಾ ಟೋಸ್ಟರ್‌ನಲ್ಲಿ ಸ್ವಲ್ಪ ಬೆಣ್ಣೆಯೊಂದಿಗೆ ಸ್ಯಾಂಡ್ವಿಚ್ ಅನ್ನು ಟೋಸ್ಟ್ ಮಾಡಿ.