ನಿಮ್ಮ ಮಕ್ಕಳು ವಿಪರೀತ ಸಕ್ಕರೆ, ಸಿಹಿತಿಂಡಿ ಸೇವಿಸುತ್ತಾರೆಯೇ? ಚಿಂತೆ ಬೇಡ ಈ ಟ್ರಿಕ್ಸ್ ಬಳಸಿ ಬ್ರೇಕ್ ಹಾಕಿ!

Published : Nov 14, 2024, 04:59 PM IST

ಮಕ್ಕಳು ಸಿಹಿ ಪದಾರ್ಥ, ಅಥವಾ ಸಕ್ಕರೆ ಹೆಚ್ಚಾಗಿ ಸೇವಿಸುತ್ತಾರೆ. ಚಾಕೊಲೇಟು ಗೀಳು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಕ್ಕಳು ವಿಪರೀತವಾಗಿ ಸಕ್ಕರೆ, ಸಿಹಿಪದಾರ್ಥ ಸೇವಿಸುತ್ತಿದ್ದಾರೆ ಅದಕ್ಕೆ ಬ್ರೇಕ್ ಹಾಕೋದು ಹೇಗೆ? ಇಲ್ಲಿದೆ ಸರಳ ಉಪಾಯಗಳು. ಈ ಟ್ರಿಕ್ಸ್ ಬಳಸಿ ಮಕ್ಕಳನ್ನ ಅತಿಯಾದ ಸಿಹಿ ಸೇವನೆ ಗೀಳನ್ನು ಬಿಡಿಸಬಹುದಾಗಿದೆ.  

PREV
15
ನಿಮ್ಮ ಮಕ್ಕಳು ವಿಪರೀತ ಸಕ್ಕರೆ, ಸಿಹಿತಿಂಡಿ ಸೇವಿಸುತ್ತಾರೆಯೇ? ಚಿಂತೆ ಬೇಡ ಈ ಟ್ರಿಕ್ಸ್ ಬಳಸಿ ಬ್ರೇಕ್ ಹಾಕಿ!
ಮಕ್ಕಳು ತಿನ್ನುತ್ತಿರುವುದು

ಮಕ್ಕಳಿಗೆ ಚಾಕಲೇಟ್, ಸ್ವೀಟ್ಸ್ ಅಂದ್ರೆ ಪ್ರಾಣ. ಇದ್ರಲ್ಲಿ ಯಾವ ಸಂದೇಹವೂ ಇಲ್ಲ. ಆದ್ರೆ ಮಕ್ಕಳು ಚಾಕಲೇಟ್, ಸ್ವೀಟ್ಸ್ ಜಾಸ್ತಿ ತಿಂದ್ರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ತೂಕ ಹೆಚ್ಚುವುದು, ಟೈಪ್ 2 ಮಧುಮೇಹ, ಹಲ್ಲಿನ ಕುಳಿ ಹೆಚ್ಚಾಗುವ ಸಾಧ್ಯತೆ ಇರುತ್ತೆ. ಆದ್ರೆ ನಾವು ಎಷ್ಟೇ ಕಂಟ್ರೋಲ್ ಮಾಡೋಕೆ ನೋಡಿದ್ರೂ ಮಕ್ಕಳು ಬಿಡಲ್ಲ. ಕೆಲವು ಟ್ರಿಕ್ಸ್‌ಗಳಿಂದ ಮಕ್ಕಳ ಸ್ವೀಟ್ಸ್‌ ಹಂಬಲಕ್ಕೆ ಬ್ರೇಕ್‌ ಹಾಕಬಹುದಂತೆ. ಹೇಗೆ ಅಂತ ನೋಡೋಣ...

 

25

ಮಕ್ಕಳ ಸಕ್ಕರೆ ಹಂಬಲ ಕಮ್ಮಿ ಮಾಡೋಕೆ ಒಂದೇ ಸಲ ಅದನ್ನ ಕೊಡೋದನ್ನ ಬಿಡೋದು ಸರಿಯಲ್ಲ. ಮೊದಲು ಕಡಿಮೆ ಪ್ರಮಾಣದಲ್ಲಿ ಕೊಡೋದನ್ನ ಶುರು ಮಾಡಬೇಕು. ಮಿಠಾಯಿ, ಕುಕೀಸ್, ಸೋಡಾ ತರಹದ ಸಕ್ಕರೆ ಪದಾರ್ಥಗಳನ್ನ ಮನೆಯಲ್ಲಿ ಇಡೋದನ್ನೇ ಬಿಡಬೇಕು. ಇದಕ್ಕೆ ಬದಲಾಗಿ ಹಣ್ಣು, ಬೀಜಗಳು, ತರಕಾರಿಗಳನ್ನ ಅವರ ಆಹಾರದಲ್ಲಿ ಸೇರಿಸಬೇಕು. ಇವುಗಳನ್ನ ತಿಂದ್ರೆ ಸಕ್ಕರೆ ಹಂಬಲ ಕಡಿಮೆಯಾಗುತ್ತೆ.


 

35

ಸಮತೋಲಿತ ಆಹಾರ: ಮಕ್ಕಳ ಸಕ್ಕರೆ ಹಂಬಲ ಕಮ್ಮಿ ಮಾಡೋಕೆ ಪೌಷ್ಟಿಕಾಂಶಗಳಿಂದ ಕೂಡಿದ ಸಮತೋಲಿತ ಆಹಾರ ಕೊಡಬೇಕು. ಮಕ್ಕಳಿಗೆ ಸಾಕಾಗುವಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಆರೋಗ್ಯಕರ ಕೊಬ್ಬು ಇರೋದನ್ನ ಖಚಿತಪಡಿಸಿಕೊಳ್ಳಿ. ಅಗತ್ಯ ವಿಟಮಿನ್, ಖನಿಜಾಂಶಗಳನ್ನ ಕೊಡೋಕೆ ಹಣ್ಣು, ತರಕಾರಿಗಳನ್ನ ಆಹಾರದಲ್ಲಿ ಸೇರಿಸಿ.

45

ನೀವು ಕೂಡ ಸ್ವೀಟ್ಸ್‌ನಿಂದ ದೂರ ಇರಿ:. ಮಕ್ಕಳು ಹೆಚ್ಚಾಗಿ ತಮ್ಮ ಪೋಷಕರನ್ನ ನೋಡಿ ಕಲಿಯುತ್ತಾರೆ. ಹಾಗಾಗಿ ಮೊದಲು ನೀವು ಸಕ್ಕರೆ ಪದಾರ್ಥಗಳಿಂದ ದೂರ ಇದ್ದು, ಆರೋಗ್ಯಕರ ಆಹಾರ ಸೇವಿಸಿ. ಆಗ ಮಕ್ಕಳು ಕೂಡ ನಿಮ್ಮನ್ನ ನೋಡಿ ಆರೋಗ್ಯಕರ ಆಹಾರ ತಿನ್ನೋ ಅಭ್ಯಾಸ ಮಾಡ್ಕೋತಾರೆ.

55
ಮಕ್ಕಳು ತಿನ್ನುತ್ತಿರುವುದು

ಕನಿಷ್ಠ ವ್ಯಾಯಾಮ: ಮಕ್ಕಳಿಗೆ ಕನಿಷ್ಠ ದೈಹಿಕ ವ್ಯಾಯಾಮ ಇರಲೇಬೇಕು. ಇದರಿಂದ ಅವರು ಉತ್ಸಾಹದಿಂದ ಇರುತ್ತಾರೆ, ಒತ್ತಡ ಕಡಿಮೆಯಾಗುತ್ತೆ. ಒತ್ತಡ ಕಡಿಮೆಯಾದ್ರೆ ಸಕ್ಕರೆ ಹಂಬಲನೂ ಕಡಿಮೆಯಾಗುತ್ತೆ. ಸೈಕ್ಲಿಂಗ್, ಡ್ಯಾನ್ಸ್, ಈಜು ಮಾಡಿಸುತ್ತಿರಿ.

click me!

Recommended Stories