ಕೋಲ್ಕತಾದ ಹೌರಾ ಜಂಕ್ಷನ್
ಕೋಲ್ಕತ್ತಾದ ಹೌರಾ ಜಂಕ್ಷನ್ ಅತ್ಯಂತ ಹೆಚ್ಚು ಜನರಿಂದ ತುಂಬಿರುವ ಹಾಗೂ ಭಾರತದ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ನೀವು ಕೋಲ್ಕತ್ತಾದ ಈ ಬೃಹತ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರೆ, ನೀವು ಇಲ್ಲಿ ಗರಿಗರಿಯಾದ ಪರೋಟ ರೋಲನ್ನು ಸವಿಯಬಹುದು. ಇದನ್ನು ಕಾಥಿ ರೋಲ್ (Kathi Roll) ಎಂದು ಕರೆಯುತ್ತಾರೆ. ಇಲ್ಲಿ ನಿಮಗೆ ಪರೋಟದ ಒಳಗೆ ಚಿಕನ್, ತರಕಾರಿ, ಮೊಟ್ಟೆ ಮುಂತಾದವುಗಳನ್ನು ತುಂಬಿಸಿ ರೋಲ್ ಮಾಡಿ ಕೊಡುತ್ತಾರೆ. ಈ ಗರಿಗರಿಯಾದ ಪರೋಟ ರೋಲನ್ನು ಸಾಸ್ ಕಸುಂಡಿ ಹಾಗೂ ಕಾರಣದ ಚಟ್ನಿಯ ಜೊತೆ ಸವಿಯಬಹುದಾಗಿದೆ. ಇದರ ಜೊತೆಗೆ ನೀವು ಇಲ್ಲಿ ಜನಪ್ರಿಯವಾದ ಭರೇರ್ ಚಾ(Bharer Cha), ಕೀಮಾ ಘುಗ್ನಿ(Keema Ghugni),ಪುಖಾ(Puckha), ರಾಧಾ ಬೊಲೋಬಿ ಅಥವಾ ಚಾಪ್ ಅನ್ನು ಸಹ ಟ್ರೈ ಮಾಡ್ಬಹುದು.