Soft chicken curry recipe: ಚಿಕನ್ ಕರಿ ಮಾಡುವಾಗ ತುಂಡುಗಳು ನಾರು ನಾರಾಗುವುದು ಅಥವಾ ಹಸಿ ಮಾಂಸದ ವಾಸನೆ ಬರುವುದು ಅನೇಕರು ಎದುರಿಸುವ ಸಾಮಾನ್ಯ ಸಮಸ್ಯೆ. ಆದರೆ ಒಂದು ಸಣ್ಣ ಟಿಪ್ಸ್ ಪಾಲಿಸಿದರೆ ಪ್ರೆಶರ್ ಕುಕ್ಕರ್ ಇಲ್ಲದೆಯೇ ಚಿಕನ್ ತುಂಡುಗಳು ಮೃದುವಾಗಿ, ಜ್ಯೂಸಿಯಾಗಿ ಬೇಯುತ್ತವೆ.
ವಾಸನೆ ಇಲ್ಲದಂತೆ ತಯಾರಿಸ್ಬೋದು ವೀಕೆಂಡ್ ಬಂತೆಂದರೆ ಸಾಕು.. ಮಾಂಸಾಹಾರ ಪ್ರಿಯರು ಚಿಕನ್, ಮಟನ್ ಅನ್ನು ಇಷ್ಟಪಟ್ಟು ಖರೀದಿಸಿ ತರುತ್ತಾರೆ. ಕರಿ, ಫ್ರೈ ಹೀಗೆ ಹತ್ತಾರು ಬಗೆಯ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಆದರೆ, ಚಿಕನ್ ಕರಿ ಮಾಡುವಾಗ ಅನೇಕರು ಎದುರಿಸುವ ಸಮಸ್ಯೆ ಎಂದರೆ ಚಿಕನ್ ತುಂಡುಗಳು ಗಟ್ಟಿಯಾಗುವುದು ಮತ್ತು ವಾಸನೆ ಬರುವುದು. ಪ್ರೆಶರ್ ಕುಕ್ಕರ್ ಇಲ್ಲದೆ ಸಾಮಾನ್ಯ ಪಾತ್ರೆಯಲ್ಲಿ ಅಥವಾ ಪ್ಯಾನ್‌ನಲ್ಲೇ ಚಿಕನ್ ತುಂಡುಗಳು ಗಟ್ಟಿಯಾಗದಂತೆ, ಮೃದುವಾಗಿ ಮತ್ತು ರುಚಿಕರವಾಗಿ ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿಯೋಣ. ಈ ಪದ್ಧತಿಯ ಮೂಲಕ ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ಚಿಕನ್ ಕರಿಯನ್ನು ವಾಸನೆ ಇಲ್ಲದೆ ಸುಲಭವಾಗಿ ತಯಾರಿಸಬಹುದು.
25
ಮೊದಲಿಗೆ ನೀವು ಮಾಡಬೇಕಾದದ್ದು
ಮೊದಲಿಗೆ ನೀವು ಮಾಡಬೇಕಾದದ್ದು ಮೊದಲಿಗೆ, ಸ್ಟವ್ ಹಚ್ಚಿ ಉರಿಯನ್ನು ಮೀಡಿಯಂ ಫ್ಲೇಮ್‌ನಲ್ಲಿ ಇರಿಸಿ. ಪ್ಯಾನ್‌ಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಎರಡು ಬಿರಿಯಾನಿ ಎಲೆಗಳನ್ನು ಹಾಕಿ ಹುರಿಯಿರಿ. ಇದು ಚಿಕನ್ ಕರಿಗೆ ಉತ್ತಮ ಸುವಾಸನೆಯನ್ನು ನೀಡುತ್ತದೆ. ನಂತರ, ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಬಣ್ಣ ಬದಲಾಗುವವರೆಗೆ ಚೆನ್ನಾಗಿ ಹುರಿಯಿರಿ. ಬೇಕಿದ್ದರೆ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ತರಿತರಿಯಾಗಿ ಗ್ರೈಂಡ್ ಮಾಡಿಯೂ ಹಾಕಬಹುದು. ಈರುಳ್ಳಿ ಬೆಂದ ನಂತರ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
35
ನೈಸರ್ಗಿಕವಾಗಿಯೇ ನೀರು ಬಿಡುತ್ತೆ
ನೈಸರ್ಗಿಕವಾಗಿಯೇ ನೀರು ಬಿಡುತ್ತೆ ತದನಂತರ, ಅರಿಶಿನ ಮತ್ತು ಬೇಕಿದ್ದರೆ ಟೊಮೆಟೊ ತುಂಡುಗಳನ್ನು ಹಾಕಿ ಸ್ವಲ್ಪ ಉಪ್ಪು ಚಿಮುಕಿಸಿ ಟೊಮೆಟೊ ಮೃದುವಾಗುವವರೆಗೆ ಬೇಯಲು ಬಿಡಿ. ಟೊಮೆಟೊ ಮೃದುವಾದ ಮೇಲೆ, ತೊಳೆದು ಶುಚಿಗೊಳಿಸಿದ ಚಿಕನ್ ಸೇರಿಸಿ ಮಸಾಲೆಯೊಂದಿಗೆ ಚೆನ್ನಾಗಿ ಬೆರೆಸಿ. ನಂತರ ರುಚಿಗೆ ತಕ್ಕಷ್ಟು ಹರಳುಪ್ಪು (ಕಲ್ಲುಪ್ಪು) ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ, ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಈ ಹಂತದಲ್ಲಿ ಚಿಕನ್‌ನಿಂದ ನೈಸರ್ಗಿಕವಾಗಿಯೇ ನೀರು ಬಿಡುತ್ತದೆ.
ಕಡಿಮೆ ಉರಿಯಲ್ಲಿ ಬೇಯಿಸಿ 10 ನಿಮಿಷಗಳ ನಂತರ, ಧನಿಯಾ ಪುಡಿ, ಮನೆಯಲ್ಲಿ ತಯಾರಿಸಿದ ಗರಂ ಮಸಾಲಾ (ಇದು ಖಾರ ಹೆಚ್ಚಿರುತ್ತದೆ, ಹಾಗಾಗಿ ಸ್ವಲ್ಪ ಕಡಿಮೆ ಬಳಸಿ) ಹಾಗೂ ಕೊಬ್ಬರಿ ಮತ್ತು ಒಂದು ಚಮಚ ನೆನೆಸಿದ ಕಲ್ಲಂಗಡಿ ಬೀಜ ಪೇಸ್ಟ್ ಅನ್ನು ಸೇರಿಸಿ. ಆಮೇಲೆ ಖಾರ ಮತ್ತು ಉಪ್ಪು ಪರೀಕ್ಷಿಸಿ ಬೇಕಿದ್ದರೆ ಇನ್ನೂ ಸ್ವಲ್ಪ ಸೇರಿಸಬಹುದು. ಕೊನೆಯದಾಗಿ, ಒಂದು ಕಪ್ ನೀರು ಸುರಿದು (ಹೆಚ್ಚು ಗ್ರೇವಿ ಬೇಕಿದ್ದರೆ ಇನ್ನೊಂದು ಕಪ್ ನೀರು ಸೇರಿಸಬಹುದು), ಮುಚ್ಚಳ ಮುಚ್ಚಿ ಇನ್ನೊಂದು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
55
ಇದೇ ನೋಡಿ ಪ್ರಮುಖ ಹಂತ
ಇದೇ ನೋಡಿ ಪ್ರಮುಖ ಹಂತ ಈ ಅಡುಗೆಯ ಪ್ರಕ್ರಿಯೆಯಲ್ಲಿ ಚಿಕನ್ 3/4 ಭಾಗ ಬೆಂದ ನಂತರ ನೀರು ಸೇರಿಸುವುದು ಎಂಬುದು ಚಿಕನ್ ನಾರು ನಾರಾಗದೆ ಮೃದುವಾಗಲು ಇರುವ ಪ್ರಮುಖ ಸೂತ್ರ. ಇದು ಕರಿಗೆ ರುಚಿಯ ಜೊತೆಗೆ ಸರಿಯಾದ ಹದವನ್ನು ನೀಡುತ್ತದೆ. ಹತ್ತು ನಿಮಿಷಗಳ ನಂತರ, ಎಣ್ಣೆ ಮೇಲೆ ತೇಲುತ್ತಿರುವುದನ್ನು ಖಚಿತಪಡಿಸಿಕೊಂಡು, ಕೊನೆಯದಾಗಿ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಆಫ್ ಮಾಡಿ. ಹೀಗೆ ತಯಾರಿಸಿದ ಚಿಕನ್ ಕರಿ ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿದ್ದಕ್ಕಿಂತ ರುಚಿಯಾಗಿರುತ್ತದೆ ಮತ್ತು ತುಂಡುಗಳು ನಾರು ಇಲ್ಲದೆ ಬೆಣ್ಣೆಯಂತೆ ಮೃದುವಾಗಿರುತ್ತವೆ. ಇನ್ನೇಕೆ ತಡ.. ನೀವು ಕೂಡ ಈ ಟೇಸ್ಟಿ ಚಿಕನ್ ಕರಿಯನ್ನು ತಯಾರಿಸಿ ರುಚಿ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.