ಚಳಿಗಾಲದಲ್ಲಿ ಸಾಮಾನ್ಯವಾಗಿ ಮಾರುಕಟ್ಟೆಗೆ ಬಗೆ ಬಗೆಯ ಸೊಪ್ಪುಗಳು ಬರುತ್ತವೆ. ಮೆಂತ್ಯೆ, ಸಬ್ಬಸಿಗೆ, ನುಗ್ಗೆ, ಪಾಲಕ್ ಸೇರಿದಂತೆ ಹಲವು ಸೊಪ್ಪುಗಳನ್ನು ಮಾರುಕಟ್ಟೆಯಲ್ಲಿ ನೋಡಬಹುದು. ತರಕಾರಿ ಸೇವನೆಗೂ ಮುನ್ನ ಅವುಗಳನ್ನು ಸ್ವಚ್ಛವಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ಹಣ್ಣು ಅಥವಾ ಯಾವುದೇ ತರಕಾರಿ ಇರಲಿ ಮೊದಲು ತೊಳೆದುಕೊಳ್ಳಬೇಕು.
Image: Getty
ಸೊಪ್ಪನ್ನು ಸಹ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಒಂದಿಷ್ಟು ಜನರು ಸೊಪ್ಪನ್ನು ಕತ್ತರಿಸಿ ತೊಳೆದ್ರೆ, ಒಂದಿಷ್ಟು ಮಂದಿ ತೊಳೆದು ಕತ್ತರಿಸಿಕೊಳ್ಳುತ್ತಾರೆ. ಆದ್ರೆ ಈ ಎರಡರಲ್ಲಿ ಯಾವ ವಿಧಾನ ಸರಿಯಾದದ್ದು ಗೊತ್ತಾ? ಅದರಲ್ಲಿಯೂ ಪಾಲಕ್ ಸೊಪ್ಪಿನ ಬಗ್ಗೆ ಹೆಚ್ಚು ಗೊಂದಲವಿರುತ್ತದೆ.
ಕತ್ತರಿಸುವ ಮುನ್ನವೇ ಪಾಲಕ್ ಸೊಪ್ಪು ತೊಳೆದುಕೊಳ್ಳಬೇಕು. ಪಾಲಕ್ ಎಲೆಗಳಲ್ಲಿ ಸಣ್ಣ ಸಣ್ಣ ಕೀಟಗಳಿರುವ ಸಾಧ್ಯತೆ ಹೆಚ್ಚಿರುತ್ತವೆ. ತೊಳೆಯುವ ಮೊದಲೇ ಕತ್ತರಿಸಿದ್ರೆ ಸೊಪ್ಪಿನಲ್ಲಿಯೇ ಉಳಿದುಕೊಳ್ಳುತ್ತವೆ. ಹಾಗಾಗಿ ಸೊಪ್ಪು ತೊಳೆದುಕೊಂಡು, ನೀರು ಬಸಿದ ನಂತರ ಎಲೆಗಳನ್ನು ಜೋಡಿಸಿಕೊಂಡು ಕತ್ತರಿಸಿಕೊಳ್ಳಬೇಕು. ಪಾಲಕ್ ಸೊಪ್ಪಿನ ಪ್ರತಿ ಎಲೆಗಳನ್ನು ಕಡ್ಡಾಯವಾಗಿ ಬಿಡಿಸಿಕೊಳ್ಳಬೇಕು. ಆನಂತರವೇ ತೊಳೆದುಕೊಂಡು ಕತ್ತರಿಸಿಕೊಳ್ಳಬೇಕು.
ಒಂದು ವೇಳೆ ಪಾಲಕ್ ಸೊಪ್ಪನ್ನು ತೊಳೆಯದೆ ಕತ್ತರಿಸಿದ್ರೆ ಅದನ್ನು ದೊಡ್ಡದಾದ ಜರಡಿಯಲ್ಲಿ ಹಾಕಿ ಸ್ವಚ್ಛಗೊಳಿಸಬೇಕು. ಈ ರೀತಿಯಾಗಿ ಮಾಡೋದರಿಂದ ಪಾಲಕ್ ಸೊಪ್ಪು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಎರಡರಿಂದ ಮೂರು ಬಾರಿ ನೀರನ್ನು ಬದಲಾಯಿಸುವ ಮೂಲಕ ಈ ಎಲೆಗಳನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಪಾಲಕ್ ಎಲೆಗಳನ್ನು ಸುಲಭವಾಗಿ ಮತ್ತು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.
ಪಾಲಕ್ ಸೇರಿದಂತೆ ಯಾವುದೇ ಸೊಪ್ಪು ಬೇರು ಸಮೇತ ಕೀಳಲಾಗಿರುತ್ತದೆ. ಬೇರುಗಳಲ್ಲಿ ಮಣ್ಣು ಸಹ ಇರುತ್ತದೆ. ಆದ್ದರಿಂದ ಯಾವುದೇ ಸೊಪ್ಪು ತಂದರೂ ದೊಡ್ಡ ಪಾತ್ರೆಯಲ್ಲಿ ಸೊಪ್ಪು ಹಾಕಿ 10 ರಿಂದ 15 ನಿಮಿಷ ಬಿಡಬೇಕು. ಹೀಗೆ ಮಾಡೋದರಿಂದ ಬೇರು ಸೇರಿದಂತೆ ಎಲೆಗಳ ಭಾಗದಲ್ಲಿರುವ ಮಣ್ಣು ಇಳಿದು ತಳಕ್ಕೆ ಸೇರುತ್ತದೆ. ಆನಂತರ ಹಿಡಿಯಾಗಿ ಎತ್ತಿಕೊಂಡು ಕ್ಲೀನ್ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಸೇರಿಸಿ ಸೊಪ್ಪು ತೊಳೆದುಕೊಳ್ಳಬೇಕು. ಯಾವುದೇ ತರಕಾರಿ ಅಥವಾ ಹಣ್ಣುಗಳನ್ನು ಈ ರೀತಿಯಾಗಿ ತೊಳೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.