ಕಾಸ್ಟ್ಲಿಯಾಗಿದ್ರೂ ಕೊರೋನಾ ಬಂದ್ಮೇಲೆ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್, ಏನಿದರ ವಿಶೇಷತೆ..?

First Published | Sep 12, 2020, 7:07 PM IST

ಹಾಲಿನಲ್ಲಿ ದುಬಾರಿ ಹಾಲು ಕತ್ತೆಯದು. ದನದ ಹಾಲಿಗೆ ಲೀಟರ್‌ಗೆ 20 ರೂಪಾಯಿ ಕೊಟ್ರೆ ಕತ್ತೆ ಹಾಲಿಗೆ ಕನಿಷ್ಠ 7 ಸಾವಿರವಾದ್ರೂ ಕೊಡಲೇ ಬೇಕು. ಹಾಗಿದ್ರೂ ಕೊರೋನಾ ಬಂದ್ಮೇಲೆ ಕತ್ತೆ ಹಾಲಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಏಕೆ ಗೊತ್ತಾ..?

ಕತ್ತೆ ಹಾಲು ಕುಡಿಯುತ್ತಾರೆಂಬುದೇ ಬಹಳಷ್ಟು ಜನರಿಗೆ ತಿಳಿದಿರದು. ಆದರೆ ಸಿಕ್ಕಾಪಟ್ಟೆ ಹೆಲ್ತಿಯಾಗಿರೋ ಕತ್ತೆ ಹಾಲಿಗೆ ಈಗ ಡಿಮ್ಯಾಂಡ್ ಹೆಚ್ಚಿದೆ.
undefined
ಗುಜರಾತ್‌ನ ವಡೋದರಾ ಭಾಗದಲ್ಲಿ ಸಿಗುವ ಹಲಾರಿ ತಳಿಯ ಕತ್ತೆಯ ಹಾಲಿನಲ್ಲಿ ಅದ್ಭುತ ಗುಣಗಳಿವೆ.
undefined

Latest Videos


ಇದರ ಗುಣಗಳ ಬಗ್ಗೆ ಅರಿವಾದ ಮೇಲೆ ಇದರ ಬೆಲೆಯೂ ಹೆಚ್ಚಾಗಿದೆ. ಇದೇ ನಿಟ್ಟಿನಲ್ಲಿ ಇದನ್ನು ಉದ್ಯಮವಾಗಿಸಲು ಡೈರಿ ಯೋಜನೆಯೂ ನಡೆದಿದೆ.
undefined
ಕತ್ತೆ ಹಾಲಿನ ಗುಣಗಳು ಒಂದೆರಡಲ್ಲ. ಸೌಂದರ್ಯ ಹೆಚ್ಚಿಸುವುದರಿಂದ ಬೊಜ್ಜು, ಅಲರ್ಜಿ, ರೋಗ ನಿರೋಧಕವೂ ಹೌದು.
undefined
ಇದರಲ್ಲಿರುವ ರೋಗ ನಿರೋಧಕ ಅಂಶವೇ ಸದ್ಯ ಕತ್ತೆ ಹಾಲನ್ನು ಮತ್ತೆ ಫೇಮಸ್ ಮಾಡಿದೆ.
undefined
ಕೊರೋನಾಗೆ ಮೊದಲ ಮದ್ದು ರೋಗ ನಿರೋಧಕ ಶಕ್ತಿ. ಹಾಗಾಗಿಯೇ ಕತ್ತೆ ಹಾಲು ಹೆಚ್ಚು ಪ್ರಾಮುಖ್ಯತೆ ಮತ್ತು ಬೇಡಿಕೆ ಪಡೆದಿದೆ.
undefined
ಹರಿಯಾಣದಲ್ಲಿ ಡೈರಿ ಯೋಜನೆ ಮೂಲಕ ಹಿಸಾರ್ ತಳಿ ಕತ್ತೆಯನ್ನು ಹೆಚ್ಚಿಸುವ ಯೋಜನೆಯೂ ನಡೆದಿದೆ.
undefined
ಅಂದಹಾಗೆ ಒಂದು ಲೀಟರ್ ಕತ್ತೆ ಹಾಲಿನ ಬೆಲೆ 7000 ರೂಪಾಯಿ ತನಕ ಇದೆ. ಕನಿಷ್ಠ ಅಂದ್ರೂ 2 ಸಾವಿರ ಕೊಡಲೇ ಬೇಕು.
undefined
click me!