ಬರೀ ಒಗ್ಗರಣೆಗೆ ಹಾಕುವುದಾದರೂ ಅಡುಗೆ ಎಣ್ಣೆ ಆರೋಗ್ಯದ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ಕಲುಷಿತವಲ್ಲದ ಎಣ್ಣೆ ಬಳಸಿದಷ್ಟೂ ನಮ್ಮ ಆರೋಗ್ಯ ಅದರಲ್ಲಿಯೂ ಹೃದಯದ ಆರೋಗ್ಯ ಸುಧಾರಿಸುತ್ತೆ. ಹಾಗಾದ್ರೆ ನಾವು ಬಳಸುವ ಅಡುಗೆ ಎಣ್ಣೆಯಲ್ಲಿ ಏನಿರಬೇಕು, ಏನಿರಬಾರದು?
ಈ ಎಣ್ಣೆ ಹೃದ್ರೋಗಕ್ಕೆ ಕಾರಣವಾಗುತ್ತದೆ. ಯಾವ ಕ್ಷಣದಲ್ಲಾದರೂ ಹೃದಯಾಘಾತ ಸಂಭವಿಸಬಹುದು! ದೇಹವನ್ನು ಆರೋಗ್ಯವಾಗಿಡಲು ನೀವು ಈ ಎಣ್ಣೆಯನ್ನು ತಿನ್ನುವುದನ್ನು ತಪ್ಪಿಸಬೇಕು.
27
ಅಡುಗೆ ಎಣ್ಣೆಯಲ್ಲಿದೆ ಅಪಾಯ
ಎಣ್ಣೆ ಬೆಲೆ ಹೆಚ್ಚುತ್ತಿರುವ ರೀತಿಯಲ್ಲಿ, ಅಡುಗೆ ಎಣ್ಣೆ ಮಾರುಕಟ್ಟೆಯಲ್ಲಿ ಬಹಳ ಕಡಿಮೆ ಬೆಲೆಗೆ ಲಭ್ಯವಿದೆ. ಹಾಗಾಗಿ ಕಡಿಮೆ ಬೆಲೆಗೆ ಸಿಗುತ್ತೆ ಅಂತ ಸಿಕ್ಕ ಸಿಕ್ಕ ಎಣ್ಣೆ ತಂದು, ಅಡುಗೆಗೆ ಬಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
37
ಈ ಎಣ್ಣೆ ಮಲೇಷಿಯನ್ ಪಾಮ್‌ಲೀನ್ ಎಣ್ಣೆ. ಈ ಎಣ್ಣೆಯನ್ನು ಮಾರುಕಟ್ಟೆಯಲ್ಲಿ ಲೀಟರ್‌ಗೆ 40 ರಿಂದ 60 ರೂಪಾಯಿಗೆ ಮಾರುತ್ತಾರೆ. ಇದು ಅಗ್ಗದ ಬೆಲೆ ಮತ್ತು ಹೆಚ್ಚಿನ ತಾಪಮಾನದ ಸ್ಥಿರತೆಯಿಂದ ಜನಪ್ರಿಯ ಆಯ್ಕೆಯಾಗಿದೆ. ಆದಾಗ್ಯೂ, ಅತಿಯಾಗಿ ಸೇವಿಸಿದಾಗ ಆರೋಗ್ಯಕ್ಕೆ ಹಾನಿಕಾರಕ.
47
ಸಾಸಿವೆ ಮತ್ತು ತೆಂಗಿನ ಎಣ್ಣೆಯ ಬೆಲೆ ತುಲನಾತ್ಮಕವಾಗಿ ಹೆಚ್ಚಿದೆ. ಆದರೆ, ಮನೆಯಲ್ಲಿಯೇ ಬೆಳೆದು ತೆಗೆಯುವ ತೆಂಗಿನೆಣ್ಣೆ ಶುದ್ಧವಾಗಿದ್ದರೆ ಆರೋಗ್ಯಕ್ಕೆ ಒಳ್ಳೇದು.
57
ಆದರೆ ಕಲುಷಿತ ಎಣ್ಣೆ ಬಳಸಿದರೆ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಎಣ್ಣೆಯಲ್ಲಿ ಟ್ರಾನ್ಸ್ ಕೊಬ್ಬು ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಈ ಕೊಬ್ಬು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
67
ಈ ಎಣ್ಣೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಇದು ಆಸ್ತಮ, ಸಂಧಿವಾತ ಮತ್ತು ಇತರೆ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗುತ್ತದೆ.
77
ರಿಫೈನ್ಡ್ ಎಣ್ಣೆಯನ್ನು ಉತ್ತಮ ಗುಣಮಟ್ಟದ ಎಣ್ಣೆಯೊಂದಿಗೆ ಬೆರೆಸಿಯೂ ಮಾರಲಾಗುತ್ತದೆ. ಇದರಿಂದ ಜನರು ತಿಳಿಯದೆಯೇ ತಾವೇ ಅನಾರೋಗ್ಯವನ್ನು ಆಹ್ವಾನಿಸಿಕೊಳ್ಳುತ್ತಾರೆ.