ಕೆಲವರು ತೂಕ ಇಳಿಸಿಕೊಳ್ಳಲು ರಾತ್ರಿಪೂರ್ತಿ ಊಟ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಆದರೆ ರಾತ್ರಿ ಊಟ ಮಾಡದಿದ್ದರೆ ನಿದ್ರಾಹೀನತೆ, ಖಿನ್ನತೆಯ ಜೊತೆಗೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಸರಿಯಾದ ಸಮಯಕ್ಕೆ ಊಟ ಮಾಡಿದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ.
ನೀವು ಯಾವ ಸಮಯಕ್ಕೆ ಊಟ ಮಾಡುತ್ತಿದ್ದೀರಿ ಎಂಬುದು ನಿಮ್ಮ ಜೀರ್ಣಕ್ರಿಯೆ, ನಿದ್ರೆಯ ಗುಣಮಟ್ಟ, ಚಯಾಪಚಯ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. 9, 10 ಗಂಟೆಗೆ ಅಲ್ಲ.. ರಾತ್ರಿ 8ಗಂಟೆಯ ಒಳಗೆ ಊಟ ಮಾಡಿದರೆ ನೀವು ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅವು ಯಾವುವು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.
ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ: ನಿಮಗೆ ಗೊತ್ತಾ? ರಾತ್ರಿಪೂಟ ನಮ್ಮ ದೇಹದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಅದರಲ್ಲೂ ನೀವು ತಡವಾಗಿ ಊಟ ಮಾಡಿದರೆ ಆಹಾರ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ನೀವು ಅತಿಯಾಗಿ ತೂಕ ಹೆಚ್ಚಾಗುತ್ತೀರಿ. ಅಷ್ಟೇ ಅಲ್ಲದೆ ಕೆಲವೊಮ್ಮೆ ಹೊಟ್ಟೆ ಉಬ್ಬರದ ಸಮಸ್ಯೆ ಕೂಡ ಬರುವ ಸಾಧ್ಯತೆ ಇರುತ್ತದೆ.