ರೆಸಿಪಿ - ಸೋರೆಕಾಯಿ ಸಿಪ್ಪೆಯಿಂದ ಮಾಡಿ ಟೆಸ್ಟಿ ಈಸಿ ಚಟ್ನಿ!

First Published Oct 10, 2020, 4:38 PM IST

ಸೋರೆಕಾಯಿ ಒಂದು ಅರೋಗ್ಯಕರ ತರಕಾರಿ. ಆದರೆ ಸೋರೆಕಾಯಿ ಸಿಪ್ಪೆಯೂ ಉಪಯೋಗಕ್ಕೆ ಬರುತ್ತದೆ ಎಂಬುದು ಗೊತ್ತಾ? ಹೌದು ಸೋರೆಕಾಯಿ ಸಿಪ್ಪೆಯಿಂದ ರುಚಿಕರವಾದ ಚಟ್ನಿ ತಯಾರಿಸಬಹುದು. ಈ ಚಟ್ನಿಯ ರುಚಿ ಒಮ್ಮೆ ನೋಡಿದರೆ, ನೀವು ಮತ್ತೆ ಎಂದಿಗೂ ಸೋರೆಕಾಯಿಯ ಸಿಪ್ಪೆ ಎಸೆಯುವ ತಪ್ಪು ಮಾಡುವುದಿಲ್ಲ. ರೆಸಿಪಿಗೆ ಬೇಕಾಗುವ ಸಾಮಾನುಗಳು ಹೀಗಿವೆ; ಸೋರೆಕಾಯಿ ಸಿಪ್ಪೆ, ಉದ್ದಿನ ಬೇಳೆ  1 ಟೀಸ್ಪೂನ್,  ಕಡಲೆಬೇಳೆ 1 ಟೀಸ್ಪೂನ್, ಜೀರಿಗೆ   ಟೀಸ್ಪೂನ್, ಎಣ್ಣೆ, ಹಸಿ ಮೆಣಸಿನಕಾಯಿ,ಬೆಳ್ಳುಳ್ಳಿ, ಇಂಗು, ಹುಣಸೆ ಹುಳಿ, ಕೊಬ್ಬರಿ ತುರಿ, ಸಾಸಿವೆ, ಕೆಂಪು ಮೆಣಸಿನಕಾಯಿ.

ಸೋರೆಕಾಯಿ ಚಟ್ನಿ ತಯಾರಿಸಲು ಸಣ್ಣ ಗಾತ್ರದ ಸೋರೆಕಾಯಿ ತೆಗೆದುಕೊಳ್ಳಿ. ಸೋರೆಕಾಯಿ ಎಳೆಯದಾಗಿರಬೇಕು.
undefined
ಅದರ ಸಿಪ್ಪೆ ತೆಗೆದು ಪಾತ್ರೆಯಲ್ಲಿ ಸಂಗ್ರಹಿಸಿ. ಸೋರೆಕಾಯಿ ಫ್ರೆಶ್‌ ಹಾಗೂ ಬಲಿತಿಲ್ಲದಿದ್ದರೆ ಸಿಪ್ಪೆಮೃದುವಾಗಿರುತ್ತವೆ.
undefined
ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಅದು ಬಿಸಿಯಾದ ತಕ್ಷಣ, ಉದ್ದಿನ ಬೇಳೆ ಮತ್ತು ಕಡಲೆ ಬೇಳೆ ಸೇರಿಸಿ. ಸ್ಪಲ್ಪ ಫ್ರೈ ಮಾಡಿ.
undefined
ಇದರ ನಂತರ, ಬಾಣಲೆಯಲ್ಲಿ ಒಂದು ಚಮಚ ಜೀರಿಗೆ ಸೇರಿಸಿ. ಸ್ವಲ್ಪ ಸಮಯದ ನಂತರ ಅದಕ್ಕೆ ಚಮಚ ಇಂಗು, ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ.
undefined
ಅದು ಹುರಿಯುವಾಗ ಸೋರೆಕಾಯಿ ಸಿಪ್ಪೆಗಳನ್ನು ಸೇರಿಸಿ. ಚೆನ್ನಾಗಿ ಫ್ರೈ ಮಾಡಿ. ನಂತರ ಅದಕ್ಕೆ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ.
undefined
ಈಗ ಗ್ಯಾಸ್‌ ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಹುಣಸೆಹಣ್ಣು ಮತ್ತು ಕೊಬ್ಬರಿ ಸ್ವಲ್ಪ ನೀರು ಹಾಕಿ. ಗ್ರೈಂಡ್‌ ಮಾಡಿ.
undefined
ಹೆಚ್ಚು ನೀರು ಸೇರಿಸ ಬೇಡಿ, ದಪ್ಪ ಪೇಸ್ಟ್ ರೀತಿಯಲ್ಲಿ ಇದ್ದರೆ ರುಚಿ ಹೆಚ್ಚು.
undefined
ಕೊನೆಯದಾಗಿ ಸಾಸಿವೆ ಕಾಳು ಮತ್ತು ಕೆಂಪು ಮೆಣಸಿನಕಾಯಿಯ ಒಗ್ಗರಣೆ ಮಾಡಿ.
undefined
ಗ್ರೈಂಡ್‌ ಮಾಡಿದ ಪೇಸ್ಟ್‌ಗೆ ಸೇರಿಸಿದರೆ ಸೋರೆಕಾಯಿ ಸಿಪ್ಪೆಯ ರುಚಿಕರ ಚಟ್ನಿ ರೆಡಿ.
undefined
click me!