ಹಾಲಿನ ಜೊತೆ ಬಾಳೆಹಣ್ಣು ಸೇವಿಸುತ್ತಿದ್ದೀರಾ? ಹಾಗಿದ್ರೆ ಮಿಸ್ ಮಾಡದೇ ಇದನ್ನ ಓದಿ

First Published | Oct 9, 2020, 5:36 PM IST

ಹಲವು ವರ್ಷಗಳಿಂದ ನಾವು ಕೇಳುತ್ತಾ ಬಂದಿರುವುದು ಏನೆಂದರೆ ಬಾಳೆಹಣ್ಣು ಮತ್ತು ಹಾಲಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬನಾನ ಶೇಕ್ ಅಥವಾ ಸ್ಮೂತಿ ಇಷ್ಟವಾಗುತ್ತದೆ. ಆದರೆ ಬಾಳೆಹಣ್ಣು ಮತ್ತು ಹಾಲು ಸೇವಿಸುವುದು ಆರೋಗ್ಯಕ್ಕೆ ಉತ್ತಮವೇ? ಈ ಕುರಿತಂತೆ ಹಲವಾರು ಪ್ರಶ್ನೆಗಳು ಜನರ ಮನಸಿನಲ್ಲಿ ಮೂಡಿ ಬಂದಿದೆ. ನಿಮ್ಮ ಮನಸಲ್ಲೂ ಇದೆ ಸಂಶಯ ಮೂಡಿದರೆ ನಾವು ಇಂದು ಬಾಳೆಹಣ್ಣು - ಹಾಲು ಜೊತೆಯಾಗಿ ತಿನ್ನೋದು ಸರಿನಾ ತಪ್ಪಾ ಅನ್ನೋದನ್ನು ಹೇಳ್ತಿವಿ.. 

ನೀವು ಬಾಳೆಹಣ್ಣು - ಹಾಲು ಜೊತೆಯಾಗಿ ಸೇವಿಸುತ್ತಿದ್ದರೆ , ಮಿಸ್ ಮಾಡದೆ ಪ್ರತಿದಿನ ಎಕ್ಸರ್ ಸೈಜ್ ಮಾಡಿ. ಯಾಕೆಂದರೆ ಹಾಲಿನಲ್ಲಿ ಫ್ಯಾಟ್ ಹೆಚ್ಚಿರುತ್ತದೆ. ನೀವು ಯಾವುದೇ ಎಕ್ಸರ್ ಸೈಜ್ ಮಾಡದೆ ಇದ್ದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
ಬಾಳೆಹಣ್ಣು - ಹಾಲು ಜೊತೆಯಾಗಿ ಸೇವಿಸುವುದು ಬಾಡಿ ಬಿಲ್ಡರ್ ಮತ್ತು ತೂಕ ಹೆಚ್ಚಿಸಲು ಪ್ರಯತ್ನಿಸುತ್ತಿರುವವರಿಗೆ ಉತ್ತಮ. ಆದರೆ ಯಾರಿಗೆ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇದೆಯೋ ಅವರಿಗೆ ಇದರಿಂದ ಸಮಸ್ಯೆ ಉಂಟಾಗುತ್ತದೆ.
Tap to resize

ವಿಶೇಷಜ್ಞರು ತಿಳಿಸುವಂತೆ ಬಾಳೆಹಣ್ಣು - ಹಾಲು ಜೊತೆಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಇದನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಜೊತೆಗೆ ಇದರಿಂದ ಸೈನಸ್ ಸಮಸ್ಯೆ ಕೂಡ ಹೆಚ್ಚುವ ಸಾಧ್ಯತೆ ಇದೆ.
ಬಾಳೆಹಣ್ಣು - ಹಾಲು ಎರಡರಿಂದಲೂ ಲಾಭ ಬೇಕು ಎಂದಾದರೆ ಎರಡನ್ನು ಜೊತೆಯಾಗಿ ಸೇವಿಸಬೇಡಿ. ಬದಲಾಗಿ ಬಾಳೆಹಣ್ಣು ತಿಂದು 20 ನಿಮಿಷಗಳ ಬಳಿಕ ಹಾಲು ಕುಡಿದರೆ ಹೆಚ್ಚು ಲಾಭ ಇದೆ.
ನಿಮಗೆ ಡೈರಿ ಪ್ರಾಡಕ್ಟ್ ಜೊತೆಗೆ ಬಾಳೆಹಣ್ಣು ಸೇವಿಸುವುದು ಇಷ್ಟ ಎಂದಾದರೆ ಹಾಲಿನ ಬದಲು ಮೊಸರು ಸೇವಿಸಿ.
ನೀವು ಕೇವಲ ಹಾಲು ಮತ್ತು ಬಾಳೆಹಣ್ಣು ಬಯಸಿದರೆ ಅದರ ಜೊತೆ ಯಾವುದಾದರೂ ವಿಟಾಮಿನ್ ಆಹಾರ ಇರುವಂತೆ ನೋಡಿಕೊಳ್ಳಿ. ಉದಾಹರಣೆಗೆ ನೀವು ಬಾಳೆಹಣ್ಣು - ಹಾಲು ಜೊತೆ ಮೊಟ್ಟೆ, ಕಡ್ಲೆ, ಸೋಯಾಬಿನ್, ರಾಜ್ಮ, ಬೇಳೆ ಮೊದಲಾದವುಗಳನ್ನು ಸೇವಿಸಬಹುದು.
ರಾತ್ರಿ ನಿದ್ರೆ ಮಾಡುವ ಮುನ್ನ ನೀವು ಬಾಳೆಹಣ್ಣು ಸೇವಿಸಬಹುದು. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಜೊತೆಗೆ ಹಸಿವು ಕೂಡ ಆಗುವುದಿಲ್ಲ.
ಹೆಚ್ಚಿನ ಜನ ಬನಾನ ಮಿಲ್ಕ್ ಶೇಕ್ ಕುಡಿಯುತ್ತಾರೆ, ಆದರೆ ಆಯುರ್ವೇದದ ಅನುಸಾರ ಇದು ತಪ್ಪು. ಒಂದಾ ನೀವು ಬಾಳೆಹಣ್ಣು ತಿಂದು ಹಾಲು ಕುಡಿಯಿರಿ, ಅಥವಾ ಹಾಲು ಕುಡಿದು ಬಾಳೆಹಣ್ಣು ತಿನ್ನಿ. ಆದರೆ ಜೊತೆಯಾಗಿ ಮಾತ್ರ ಸೇವಿಸಬೇಡಿ ಎನ್ನುತ್ತದೆ ಆಯುರ್ವೇದ.
ಖಾಲಿ ಹೊಟ್ಟೆಗೆ ಯಾವತ್ತೂ ಹಾಲು ಮತ್ತು ಬಾಳೆಹಣ್ಣು ಸೇವಿಸಬೇಡಿ. ಬ್ರೇಕ್ ಫಾಸ್ಟ್ ಬಳಿಕ 20 ನಿಮಿಷದ ನಂತರ ಬಾಳೆಹಣ್ಣು - ಹಾಲು ಸೇವಿಸಬಹುದು.
ಹಲವು ವರ್ಷಗಳಿಂದ ನಾವು ಕೇಳುತ್ತಾ ಬಂದಿರುವುದು ಏನೆಂದರೆ ಬಾಳೆಹಣ್ಣು ಮತ್ತು ಹಾಲಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದು.ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬನಾನ ಶೇಕ್ ಅಥವಾ ಸ್ಮೂತಿ ಇಷ್ಟವಾಗುತ್ತದೆ. ಆದರೆ ಬಾಳೆಹಣ್ಣು ಮತ್ತು ಹಾಲುಸೇವಿಸುವುದು ಆರೋಗ್ಯಕ್ಕೆ ಉತ್ತಮವೇ? ಈ ಕುರಿತಂತೆ ಹಲವಾರು ಪ್ರಶ್ನೆಗಳು ಜನರ ಮನಸಿನಲ್ಲಿ ಮೂಡಿ ಬಂದಿದೆ. ನಿಮ್ಮ ಮನಸಲ್ಲೂ ಇದೆ ಸಂಶಯ ಮೂಡಿದರೆ ನಾವು ಇಂದು ಬಾಳೆಹಣ್ಣು - ಹಾಲು ಜೊತೆಯಾಗಿ ತಿನ್ನೋದು ಸರಿನಾ ತಪ್ಪಾ ಅನ್ನೋದನ್ನು ಹೇಳ್ತಿವಿ..

Latest Videos

click me!