ಆಪಲ್ ಸಿಪ್ಪೆಯಿಂದ ಬಾಯಲ್ಲಿ ನೀರೂರಿಸುವ ರೆಸಿಪಿ... ನೀವೂ ಟ್ರೈ ಮಾಡಿ

First Published | Oct 10, 2020, 4:04 PM IST

ಆಹಾರ ತ್ಯಾಜ್ಯವನ್ನು ಸುಮ್ಮನೆ ಬಿಸಾಕುವ ಮುನ್ನ ಅದರಿಂದ ಏನು ಪ್ರಯೋಜನ ಇದೆ ಅನ್ನೋದನ್ನು ತಿಳಿದುಕೊಳ್ಳಬೇಕು. ಉಪಯುಕ್ತ ಆಹಾರದ ವೇಸ್ಟ್ ಬಿಸಾಕುವ ಮುನ್ನ, ನಮಗೆ ಅದರಿಂದ ಉಂಟಾಗುವ ಪ್ರಯೋಜನಗಳನ್ನು ಅರಿತುಕೊಂಡರೆ ಯಾವುದೇ ವಸ್ತು ವೇಸ್ಟ್ ಆಗುವುದಿಲ್ಲ. ಉದಾಹರಣೆಗೆ, ತರಕಾರಿ ಮತ್ತು ಆಹಾರ ಸಿಪ್ಪೆಗಳು ಕಸದ ಬುಟ್ಟಿಯಲ್ಲಿ ಕರಗುವ ಮೊದಲು ನಮ್ಮ ತಟ್ಟೆಗೆ ಹೋಗಬೇಕು. ಸೇಬಿನ ಸಿಪ್ಪೆಯು ಹಣ್ಣಿನಷ್ಟೇ ಪೌಷ್ಟಿಕವಾಗಿದೆ ಎಂದು ನಿಮಗೆ ತಿಳಿದಿದೆಯೇ? 

ಆಪಲ್ ಸಿಪ್ಪೆಗಳು ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ, ವಿಶೇಷವಾಗಿ ವಿಟಮಿನ್ ಸಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಆಪಲ್ ಸಿಪ್ಪೆಗಳನ್ನು ಕೆಲವು ಆರೋಗ್ಯಕರ, ಕೆಲವು ಟೇಸ್ಟಿ ರೆಸಿಪಿಯಾಗಿ ಪರಿವರ್ತಿಸಬಹುದು, ಅದು ನಿಮ್ಮನ್ನು ಸಿಪ್ಪೆಯನ್ನು ಇಷ್ಟಪಡುವಂತೆ ಮಾಡುತ್ತದೆ. ಕೆಲವು ಆರೋಗ್ಯಕರ ಮತ್ತು ಟೇಸ್ಟಿ ರೆಸಿಪಿ ಇಲ್ಲಿವೆ.
ಆಪಲ್ ಚಿಪ್ಸ್: ಸೇಬಿನ ಸಿಪ್ಪೆಗೆ ಸಕ್ಕರೆ ಜೇನುತುಪ್ಪ, ದಾಲ್ಚಿನ್ನಿ ಮತ್ತು ನಿಮ್ಮ ಆಯ್ಕೆಯ ಇತರ ಪದಾರ್ಥಗಳೊಂದಿಗೆ ಒವೆನ್ನಲ್ಲಿ ಬೇಯಿಸಿದರೆ ಸಿಹಿ ಮತ್ತು ಗರಿಗರಿಯಾದ ಆಪಲ್ ಚಿಪ್ಸ್ ರೆಡಿ. ನಿಮಗೆ ಉಪ್ಪು ಇಷ್ಟವಾದರೆ, ಬದಲಿಗೆ ಉಪ್ಪು ಮತ್ತು ಕರಿಮೆಣಸು ಪುಡಿಯನ್ನು ಸಿಂಪಡಿಸಿ.
Tap to resize

ಆಪಲ್ ಟೀ:ಸೇಬಿನ ಸಿಪ್ಪೆಯನ್ನು ಅರ್ಧ ಘಂಟೆಯಿಂದ ಒಂದು ಗಂಟೆಯವರೆಗೆ ನೀರಿನಲ್ಲಿ ಕುದಿಸಿ, ಅದಕ್ಕೆ ಸಕ್ಕರೆ ಜೇನುತುಪ್ಪ ಅಥವಾ ಮಸಾಲೆ ಪದಾರ್ಥ ಸೇರಿಸಿ ಮತ್ತು ಈ ಬೆಚ್ಚಗಿನ ಮತ್ತು ಆರೋಗ್ಯಕರ ಚಹಾವನ್ನು ಆನಂದಿಸಿ.
ಸಿಪ್ಪೆಗಳನ್ನು ತೆಗೆದುಹಾಕಲು ಚಹಾ ಸೋಸುವುದನ್ನು ಮರೆಯಬೇಡಿ.
ಆರೋಗ್ಯಕರ ನೀರು: ಒಂದು ಜಗ್ ನೀರಿನಲ್ಲಿ ಒಂದು ಸೇಬಿನ ಸಿಪ್ಪೆಯನ್ನು ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ಈ ನೀರನ್ನು ದಿನಪೂರ್ತಿ ಕುಡಿಯುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಆಪಲ್ ಪೀಲ್ ಜಾಮ್:ಸೇಬು ಸಿಪ್ಪೆಗಳು ಮತ್ತು ಅದರ ಬಿಳಿ ಭಾಗವನ್ನು ಮೃದುವಾಗುವವರೆಗೆ ನೀರಿನಲ್ಲಿ ಕುದಿಸಿ. ಸಕ್ಕರೆ ಮತ್ತು ನಿಂಬೆ ರಸವನ್ನು ಸೇರಿಸಿ ಮತ್ತೆಮತ್ತೆ ಕುದಿಸಿ, ಅದು ಜಾಮ್ ಅಳತೆಗೆ ಬರುವವರೆಗೆ ಕೈ ಆಡಿಸ್ತಾ ಇರಿ. ನಂತರ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಿಡಿ
ಆಪಲ್ ಸಿಪ್ಪೆ ಸಿರಪ್:ನೀರು ದಪ್ಪವಾಗುವವರೆಗೆ ಸೇಬು ಸಿಪ್ಪೆ ಮತ್ತು ಅದರ ಬಿಳಿ ಭಾಗವನ್ನುನೀರಿನಲ್ಲಿ ಕುದಿಸಿ. ನಂತರ ಅದನ್ನು ಶೋಧಿಸಿ , ಸಕ್ಕರೆ ಸೇರಿಸಿ. ಸಕ್ಕರೆ ಕರಗುವ ತನಕ ಮತ್ತೆ ನೀರನ್ನು ಕುದಿಸಿ. ಪಾನ್ ಕೇಕ್, ಐಸ್ ಕ್ರೀಮ್ಗಳು, ಬ್ರೌನಿಗಳು ಇತ್ಯಾದಿಗಳ ಮೇಲೆ ಆಪಲ್ ಸಿರಪ್ ಬಳಸಿ.
ಆಪಲ್ ಸಿಪ್ಪೆ ಸ್ಮೂಥಿ:ಸೇಬಿನ ಸಿಪ್ಪೆಯನ್ನು ಬ್ಲೆಂಡರ್ನಲ್ಲಿ ಹಾಕಿ ಮಿಕ್ಸಿ ಮಾಡಿ, ಹಾಲು ಅಥವಾ ಮೊಸರು ಮತ್ತು ಸ್ವಲ್ಪ ನೀರು ಜೊತೆಗೆ ಡ್ರೈ ಫ್ರುಟ್ಸ್ ಮತ್ತು ಸಕ್ಕರೆ ಸೇರಿಸಿ, ಈಗ ಎಲ್ಲವನ್ನು ಮಿಕ್ಸ್ ಮಾಡಿ, ಟೇಸ್ಟಿಯಾದ ಸ್ಮೂಥಿ ರೆಡಿಯಾಗುತ್ತದೆ.
ಮುಂದಿನ ಬಾರಿ ನೀವು ಸೇಬನ್ನು ತಿನ್ನುವಾಗ, ಅದರ ಸಿಪ್ಪೆಗಳನ್ನು ಉಳಿಸಲು ಮರೆಯದಿರಿ. ಹಾಗೂ ಮೇಲೆ ಹೇಳಿದ ರೆಸಿಪಿಗಳನ್ನು ಟ್ರೈ ಮಾಡಿ.. ಎಂಜಾಯ್ ಮಾಡಿ..

Latest Videos

click me!