ಚಟ್ನಿ ಎಂದು ಮೂಗು ಮುರಿಯಬೇಡಿ... ಇದರಿಂದ ಎಷ್ಟೊಂದು ಪ್ರಯೋಜನಗಳಿವೆ ತಿಳಿಯಿರಿ..

First Published | Dec 26, 2020, 5:10 PM IST

ನೀವು ಭಾರತೀಯ ಆಹಾರವನ್ನು ಇಷ್ಟಪಡುತ್ತಿದ್ದರೆ, ಅವುಗಳಲ್ಲಿ ಚಟ್ನಿಯೂ ಒಂದು. ಹೆಚ್ಚಿನ ಜನ ಚಟ್ನಿ ಎಂದ ಕೂಡಲೇ ಅಯ್ಯೋ ಎನ್ನುತ್ತಾರೆ, ಆದರೆ ನೀವು ಚಟ್ನಿಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡರೆ, ಇದರಿಂದ ಸಾಕಷ್ಟು ಲಾಭಗಳಿವೆ. ಇದರ ಪ್ರಯೋಜನಗಳು ನಿಮಗೆ ತಿಳಿದಿದೆಯೇ?? ವಿವರವಾಗಿ ತಿಳಿಯಿರಿ ಇಲ್ಲಿದೆ ಮಾಹಿತಿ... 

ನಾವು ದೋಸೆ ಅಥವಾ ಪರೋಟವನ್ನು, ಚಟ್ನಿ ಜೊತೆಗೆ ಸೇವಿಸುವುದರಿಂದ ಎಲ್ಲಾ ರುಚಿಗಳನ್ನು ದ್ವಿಗುಣಗೊಳಿಸುತ್ತದೆ. ಈ ವಿವಿಧ ಚಟ್ನಿಗಳನ್ನು ದೇಶದ ಬಹುತೇಕ ಭಾಗಗಳಲ್ಲಿ ಪ್ರತಿದಿನ ತಯಾರಿಸಲಾಗುತ್ತದೆ. ಚಟ್ನಿಯನ್ನು ಭಾರತದ ಎಲ್ಲಾ ಭಾಗಗಳಲ್ಲಿ ತಿನ್ನಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ತಾಜಾ ತರಕಾರಿಗಳಿಂದ ತಯಾರಿಸಲಾಗುತ್ತದೆ. ಆದ್ದರಿಂದ, ಇದರ ಆರೋಗ್ಯ ಪ್ರಯೋಜನಗಳೂ ತುಂಬಾ ಹೆಚ್ಚು.
ವಾಸ್ತವವಾಗಿ, ಅನೇಕ ಗಿಡಮೂಲಿಕೆಗಳನ್ನು ಚಟ್ನಿ ತಯಾರಿಸಲು ಬಳಸಲಾಗುತ್ತದೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೆಲವು ನಿರ್ದಿಷ್ಟ ರೀತಿಯ ಚಟ್ನಿಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿದುಕೊಂಡು ನೀವು ಸಹ ಚಟ್ನಿ ಮಾಡಿ ನೋಡಿ...
Tap to resize

1. ಪುದೀನ ಮತ್ತು ಕೊತ್ತಂಬರಿ ಚಟ್ನಿಪುದೀನ ಮತ್ತು ಕೊತ್ತಂಬರಿ ಖನಿಜಗಳು ಜೀವಸತ್ವಗಳು ಮತ್ತು ಆಂಟಿ-ಆಕ್ಸಿಡೆಂಟ್ಗಳಿಂದ ತುಂಬಿವೆ. ಈ ಗಿಡಮೂಲಿಕೆಗಳು ಕಡಿಮೆ ಕ್ಯಾಲೊರಿಗಳನ್ನು ಮಾತ್ರವಲ್ಲ, ಅವು ನಿಮಗೆ ಸಾಕಷ್ಟು ಪ್ರಮಾಣದ ಫೈಬರ್ ಅನ್ನು ಸಹ ನೀಡುತ್ತವೆ. ಈ ಚಟ್ನಿಗೆ ನೀವು ಶುಂಠಿ ಅಥವಾ ಮೆಣಸಿನಕಾಯಿ ಸೇರಿಸಿದರೆ, ಅದು ಪೌಷ್ಠಿಕಾಂಶದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈ ಚಟ್ನಿ ಖಾರವಾಗಿರುವುದರಿಂದ ಕೆಮ್ಮು, ಕಫ ಮೊದಲಾದ ಸಮಸ್ಯೆಗಳಿದ್ದರೂ ಸಹ ಅದಕ್ಕೆ ಉತ್ತಮ ಪರಿಹಾರವಾಗಿದೆ. ಪಾನಿಪುರಿ ಮಾಡುವಾಗ ಹೊರಗಡೆಯಿಂದ ಮಸಾಲೆ ತರುವ ಬದಲು ಕೊತ್ತಂಬರಿ, ಪುದೀನಾ ಸೊಪ್ಪಿನ ಚಟ್ನಿಯನ್ನು ನೀವೇ ಮಾಡಿ ಸೇವಿಸಿ, ಇದು ರುಚಿಯಾಗಿರುತ್ತದೆ, ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ.
2. ಬೆಳ್ಳುಳ್ಳಿ ಚಟ್ನಿಒಂದು ಅಧ್ಯಯನದ ಪ್ರಕಾರ, ಬೆಳ್ಳುಳ್ಳಿಯಲ್ಲಿ ಅನೇಕ ಪೌಷ್ಠಿಕಾಂಶಗಳು ಕಂಡುಬರುತ್ತವೆ ಮತ್ತು ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳ್ಳುಳ್ಳಿ ತಿನ್ನುವುದರಿಂದ ಹೆಚ್ಚಿನ ಬಿಪಿ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಡಿಮೆ ಮಾಡಬಹುದು ಮತ್ತು ಇದು ಮಧುಮೇಹ ಮತ್ತು ಹೃದ್ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.
3. ಟೊಮೆಟೊ ಚಟ್ನಿಟೊಮ್ಯಾಟೊದಲ್ಲಿ ವಿಟಮಿನ್ ಸಿ, ಬಿ ಮತ್ತು ಇ ಅಧಿಕವಾಗಿರುತ್ತವೆ ಆದರೆ ಲೈಕೋಪೀನ್ ಎಂಬ ಸಕ್ರಿಯ ಘಟಕಾಂಶವಿದೆ. ಈ ಅಂಶವು ನಿಮ್ಮ ಜೀವಕೋಶವು ಹಾನಿಯಾಗದಂತೆ ತಡೆಯುತ್ತದೆ ಮತ್ತು ಇದು ನಿಮ್ಮನ್ನು ಇತರ ಅನೇಕ ಕಾಯಿಲೆಗಳಿಂದ ಉಳಿಸುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಟೊಮೆಟೊ ಚಟ್ನಿ ಅನ್ನು ಸಹ ನೀವು ಸೇರಿಸಿಕೊಳ್ಳಬಹುದು..
4. ತೆಂಗಿನ ಚಟ್ನಿತೆಂಗಿನಕಾಯಿ ಕೊಬ್ಬಿನಲ್ಲಿ ಸಮೃದ್ಧವಾಗಿದ್ದರೂ ಅವು ಟ್ರೈಗ್ಲಿಸರೈಡ್ ಅನ್ನು ಹೊಂದಿರುತ್ತವೆ, ಇದು ಸ್ಯಾಚುರೇಟೆಡ್ ಕೊಬ್ಬುಗಳಿಗಿಂತ ಆರೋಗ್ಯಕರವಾಗಿರುತ್ತದೆ. ಅಷ್ಟೇ ಅಲ್ಲ, ಫೈಬರ್, ಕಾಪರ್, ಮ್ಯಾಂಗನೀಸ್, ಕಬ್ಬಿಣ ಮುಂತಾದ ಅಂಶಗಳು ಸಾಕಷ್ಟು ಇವೆ.
ಜೀವಸತ್ವಗಳ ಪ್ರಮಾಣವಿಲ್ಲದಿದ್ದರೂ ತೆಂಗಿನಕಾಯಿ ಬಹಳ ಪೌಷ್ಟಿಕವಾಗಿದೆ. ಆದ್ದರಿಂದ ಖಂಡಿತವಾಗಿಯೂ ಅದರ ಚಟ್ನಿಯನ್ನು ನಿಮ್ಮ ಡಯಟ್ನಲ್ಲಿ ಸೇರಿಸಿ. ಇದು ರುಚಿಕರವೂ ಆಗಿರುತ್ತದೆ.
5. ಕಡಲೆಕಾಯಿ ಚಟ್ನಿಕಡಲೆಕಾಯಿಯಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ, ಆದರೆ ಅವುಗಳಲ್ಲಿ ಕಾರ್ಬನ್ ಕಡಿಮೆ ಮತ್ತು ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಆದ್ದರಿಂದ, ನೀವು ಇದರೊಂದಿಗೆ ಟೊಮೆಟೊ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಹ ಹೆಚ್ಚು ಆರೋಗ್ಯಕರವಾಗಿ ಬಳಸಬಹುದು.
ಈ ಎಲ್ಲ ಚಟ್ನಿಗಳಲ್ಲಿ ಪೌಷ್ಠಿಕಾಂಶವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ನಿಮ್ಮ ದೇಹದಲ್ಲಿ ಪೌಷ್ಠಿಕಾಂಶದ ಕೊರತೆಯಿದ್ದರೆ, ಈ ರೀತಿಯ ಚಟ್ನಿಯನ್ನು ನಿಮ್ಮ ಊಟದ ಭಾಗವಾಗಿ ಮಾಡಿ.

Latest Videos

click me!